ಪಮ್ಮಣೆ ದಿ ಗ್ರೇಟ್ ಸಿನಿಮಾ ಬಿಡುಗಡೆ: ಕರಾವಳಿಯಾದ್ಯಂತ 14 ಟಾಕೀಸ್‍ಗಳಲ್ಲಿ ತೆರೆಗೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಮ್ಮಣೆ ದಿ ಗ್ರೇಟ್ ಸಿನಿಮಾ ಬಿಡುಗಡೆ: ಕರಾವಳಿಯಾದ್ಯಂತ 14 ಟಾಕೀಸ್‍ಗಳಲ್ಲಿ ತೆರೆಗೆ

Share This
ಮಂಗಳೂರು: ಕುಡ್ಲ ಸಿನಿಮಾಸ್‍ನಲ್ಲಿ ಮುತ್ತುರಾಮ್ ಕ್ರಿಯೇಷನ್ ನಿರ್ಮಾಣದ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಪಮ್ಮಣ್ಣೆ ದಿ ಗ್ರೇಟ್ ತುಳುಸಿನಿಮಾದ ಪ್ರೀಮಿಯರ್ ಶೋ ಬಿಡುಗಡೆ ಸಮಾರಂಭವು ಭಾರತ್ ಮಾಲ್‍ನಲ್ಲಿ ಜರಗಿತು.
ಕರಾವಳಿ ಸಮೂಹ ಕಾಲೇಜ್‍ನ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುಭಾಷಾ ಬೆಳವಣಿಗೆಯಲ್ಲಿ ತುಳು ನಾಟಕದಂತೆ ತುಳು ಸಿನಿಮಾಗಳು ಕೂಡಾ ಪ್ರಮುಖ ಪಾತ್ರ ವಹಿಸಿದೆ. ಸಮಾಜಕ್ಕೆ ಸಂದೇಶ ಭರಿತ ಸಿನಿಮಾಗಳ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಮುಲ್ಕಿ- ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್, ತುಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ಕ್ಯಾಟ್ಕಾದ ಅಧ್ಯಕ್ಷ ಪಮ್ಮಿಕೊಡಿಯಾಲ್ ಬೈಲು, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ವಿಜಯಕುಮಾರ್ ಕೊಡಿಯಾಲ್ ಬೈಲ್, ರಕ್ಷಣಾ ವೇದಿಕೆ ಅಧ್ಯಕ್ಷ ಯೊಗೀಶ್ ಶೆಟ್ಟಿ ಜಪ್ಪು, ವಸಂತ ಕುಮಾರ್ ಭೋಜರಾಜ್ ವಾಮಂಜೂರ್, ಸ್ಟ್ಯಾನ್ಲಿ ನಿರ್ಮಾಪಕರಾದ ಕೃಷ್ಣ ನಾಯಕ್ ಕಾರ್ಕಳ, ವಿರೇಂದ್ರ ಸುವರ್ಣ ಕಟೀಲ್,  ನಿರ್ದೇಶಕ ಇಸ್ಮಾಯಿಲ್ ಮೂಡು ಶೆಡ್ಡೆ, ನಟ ಪೃಥ್ವಿ ಅಂಬರ್, ನಟಿ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು.

ಪಮ್ಮಣ್ಣೆ ದಿ ಗ್ರೇಟ್ ತುಳು ಸಿನಿಮಾವು ಮಂಗಳೂರಿನಲ್ಲಿ ಭಾರತ್ ಮಾಲ್, ಪಿವಿಆರ್, ಸಿನಿಪೊಲೀಸ್, ಉಡುಪಿಯಲ್ಲಿ ಕಲ್ಪನಾ , ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‍ನಲ್ಲಿ ನಟರಾಜ್ , ಬೆಳ್ತಂಗಡಿಯಲ್ಲಿ ಭಾರತ್. ಸುಳ್ಯದಲ್ಲಿ ಸಂತೋಷ್, ಕಾರ್ಕಳದಲ್ಲಿ ರಾಧಿಕಾ , ಪ್ಲಾನೆಟ್ , ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾಸರಗೋಡಿನಲ್ಲಿ ಶ್ರೀ ಕೃಷ್ಣ ಟಾಕೀಸ್‍ನಲ್ಲಿ ತೆರೆಕಂಡಿದೆ. ಒಟ್ಟು 14 ಟಾಕೀಸ್‍ಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದೆ.

Pages