BUNTS NEWS, ಬೆಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷರಾದ ಐಕಳ
ಹರೀಶ್ ಶೆಟ್ಟಿಯವರು ಎಂಆರ್ ಜಿ ಸಮೂಹ
ಸಂಸ್ಥೆಗಳ ಅಧ್ಯಕ್ಷರಾದ ಕೆ.ಪ್ರಕಾಶ್ ಶೆಟ್ಟಿಯವರನ್ನು
ಭೇಟಿಯಾಗಿ ಸೆ. 9ರ ವಿಶ್ವ
ಬಂಟರ ಸಮ್ಮಿಲನ 2018ರ ಸಮಾರೋಪ ಸಮಾರಂಭದ
ಉದ್ಘಾಟಕರಲ್ಲಿ ಆಗಮಿಸುವಂತೆ ಆಹ್ವಾನಿಸಿದರು.
ಈ ಸಂದರ್ಭ
ಕೆ.ಪ್ರಕಾಶ್ ಶೆಟ್ಟಿಯವರು ಬಂಟರ ಸಮ್ಮಿಲನದ ಯಶಸ್ಸಿಗೆ ಶುಭ ಹಾರೈಸಿದರು. ಮಾತ್ರವಲ್ಲದೆ ಒಕ್ಕೂಟಕ್ಕೆ
ನಿರ್ದೇಶಕರಾಗುವ ನಮ್ಮ ವಿನಂತಿಗೆ ಸಮ್ಮತ
ವ್ಯಕ್ತಪಡಿಸಿ ಒಕ್ಕೂಟದ ಪ್ರತೀ ಕಾರ್ಯಕ್ರಮಕ್ಕೂ
ತಾನಿರುವದಾಗಿ ವಾಗ್ದಾನ ಮಾಡಿದರು . ಹಾಗೆಯೇ
ಸಮ್ಮಿಲನದ ಸಂಪೂರ್ಣ ಮಾಹಿತಿಯನ್ನು ಪಡೆದು
ಒಕ್ಕೂಟ ನಡೆಸುವ ಸಮಾಜಮುಖಿ ಕೆಲಸದ
ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ
, ಸಮ್ಮಿಲನದ ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ
ಉಳ್ತೂರು ಹಾಗೂ ಸಮ್ಮಿಲನದ ನಿರೂಪಕ
ಸದಸ್ಯ ಅಜಿತ್
ಶೆಟ್ಚಿ ಉಳ್ತೂರುರವರು ಉಪಸ್ಥಿತರಿದ್ದರು. ಸುದ್ದಿ: ದಿನೇಶ್ ಕುಲಾಲ್