ಕೇರಳ, ಕೊಡಗು ಪ್ರಕೃತಿ ವಿಕೋಪಕ್ಕೆ SCDCC ಬ್ಯಾಂಕಿನಿಂದ ಧನಸಹಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕೇರಳ, ಕೊಡಗು ಪ್ರಕೃತಿ ವಿಕೋಪಕ್ಕೆ SCDCC ಬ್ಯಾಂಕಿನಿಂದ ಧನಸಹಾಯ

Share This
ಮಂಗಳೂರು: ಕೇರಳ, ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ SCDCC ಬ್ಯಾಂಕಿನ ವತಿಯಿಂದ ಒಟ್ಟು 50 ಲಕ್ಷ ರೂ.ಗಳ ಧನಸಹಾಯವನ್ನು ಕೇಂದ್ರ ಹಾಗೂ ರಾಜ್ಯದ ನೆರೆ ಪರಿಹಾರ ನಿಧಿಗೆ ನೀಡಲಾಗುವುದೆಂದು SCDCC ಬ್ಯಾಂಕಿನ ಅಧ್ಯಕ್ಷ ಡಾ ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟಿನಿಂದ ಕೊಡಗಿಗೆ 10 ಲಕ್ಷ ರೂ., 2,000 ಸೀರೆಗಳನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಹಾಗೂ ಕೇರಳಕ್ಕೆ 10 ಲಕ್ಷ ರೂ., 3000 ಸೀರೆಗಳನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಲಗುವುದೆಂದು ಅವರು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲದ ವತಿಯಿಂದ 50 ಲಕ್ಷ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದು ಕೇರಳಕ್ಕೆ 1 ಲೋಡ್ ತೋಗರಿಬೆಳೆ ಕೊಡಲಾಗಿದೆ. ಅಲ್ಲದೇ ಮುಂದಿನ ತಿಂಗಳಲ್ಲಿ ಕೇಂದ್ರ ಸಹಕಾರಿ ಬ್ಯಾಂಕನ ಸಹಕಾರಿ ಸಭೆ ನಡೆಯಲಿದ್ದು ಆ ಸಂದರ್ಭವೂ ಪರಿಹಾರ ನಿಧಿಗೆ ಹಣ ಸಂಗ್ರಹವಾಗಲಿದೆ. ಬ್ಯಾಂಕಿನ ಸಿಬ್ಬಂದಿಗಳ ಒಂದು ದಿನದ ವೇತವನ್ನು ಪರಿಹಾರ ನಿಧಿಗೆ ವೇತನವಾಗಿ ನೀಡಲಿದ್ದಾರೆ. ಈಗಾಗಲೇ SCDCC ಬ್ಯಾಂಕಿನ ಕೊಡಿಯಾಲ್ ಬೈಲ್ ಶಾಖೆಯಲ್ಲಿ ‘ಕೇರಳ-ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ” ಖಾತೆ [00145050000755 IFSC Code: IBKL078SCDC] ತೆರೆಯಲಾಗಿದ್ದು ಸಾರ್ವಜನಿಕರು ಧನಸಹಾಯ ಮಾಡಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್, ರಘುರಾಮ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಜಯರಾಂ ರೈ, ಶಶಿಕುಮಾರ್ ರೈ, ಸದಾಶಿವ ಉಳ್ಳಾಲ್, ಜನರಲ್ ಮ್ಯಾನೇಜರ್ ಗೋಪಿನಾಥ್ ಭಟ್, ನವೋದಯ ಗ್ರಾಮ ವಿಕಾಸ ಟಾರಿಟೇಬಲ್ ಟ್ರಸ್ಟಿನ ಸಿಇಒ ಪೂರ್ಣಿಮಾ ಶೆಟ್ಟಿ ಹಾಗ ಮತ್ತಿತರು ಉಪಸ್ಥಿತರಿದ್ದರು.

Pages