ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ

Share This
BUNTS NEWS, ಮಂಗಳೂರು: ಗ್ರಾಮಾಂತರ ಪ್ರದೇಶದ ಯಕ್ಷ ಬಾಲ ಪ್ರತಿಭೆಗಳನ್ನು ಗುರುತಿಸಿ ಯಕ್ಷಗಾನ, ತಾಳಮದ್ದಲೆ  ತರಬೇತಿಗೊಳಿಸಿ  ಪ್ರದರ್ಶನಗೊಳಿಸುವುದು ಕನ್ನಡ ನಾಡುನುಡಿಗೆ ಸೇವೆಸಲ್ಲಿಸುವುದು ಅನನ್ಯವೆಂದು ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಮುಲ್ಕಿ ಕರುಣಾ ಕರ ಶೆಟ್ಟಿ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗಸ್ಪಂದನ (ರಿ) ಮಂಗಳೂರು ಕಾವೂರು ಪದವು ಮಂಗಳೂರು ಶ್ರೀ ಗುರು ವೈದ್ಯನಾಥ ಬಬ್ಬುಸ್ವಾಮೀ ದೈವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡ  ಮುಂಗಾರು ರಂಗಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಜ್ಯೋತಿ ಪ್ರಜ್ವಲಿಸಿ ಶುಭ ಹಾರೈಸಿದರು.

ಡಾ. ದಿನಕರ ಎಸ್ ಪಚ್ಚನಾಡಿ ಮಾತನಾಡಿ, ಪರಿಸರದ ಯುವ ಯಕ್ಷಪ್ರತಿಭೆಗಳು  ರಂಗದಲ್ಲಿ ಬೆಳಗಿ ನಮ್ಮ ಸಂಸ್ಕøತಿ, ಸಂಸ್ಕಾರಗಳನ್ನು ಬದುಕಿನಲ್ಲಿ ಅಳವಡಿಸಲು ಅವಕಾಶಗಳನ್ನು ಕಲ್ಪಿಸಿ ಕೊಟ್ಟ ರಂಗಸ್ಪಂದನದ ಪರಿಕಲ್ಪನೆಗಳಿಗೆ ತಮ್ಮ ಅನುಭವದ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದೈವಸ್ಥಾನದ ಗುರಿಕಾರರಾದ ಕುಸುಮಾಕರ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ  ಕರ್ಕೆರಾ ಹಾಗೂ ಶ್ರೀ ಕಚ್ಚೂರ ಮಾಲ್ದಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಎಂ.ಸಿ ಕುಮಾರ್ರವರು ಶುಭಾಶಂಸನೆಗೈದರು. ರಂಗಸ್ಪಂದನದ ಸಂಚಾಲಕ ವಿ.ಜಿ ಪಾಲ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಚಿನ್ಪಾಲ್ ಉಪ ಸ್ಥಿತರಿದ್ದರು. ನಿವೇದಿತಾ ಹರೀಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ಹರೀಶ್ ಕುಮಾರ್ ಕಾವೂರು ವಂದಿಸಿದರು.

ಚೆಂಡೆ ಮದ್ದಲೆ ಝೇಂಕಾರದೊಂ ದಿಗೆ ಶ್ರೀ ಕಚ್ಚೂರ ಮಾಲ್ದಿ ಯಕ್ಷಗಾನ ಮಂಡಳಿಯ ಯಕ್ಷ ಪ್ರತಿಭೆಗಳಿಂದ ಏಕದಶಿ ಶ್ರೀದೇವಿ ಮಹಾತ್ಮೆ ತಾಳಮ  ದ್ದಲೆ ಹಾಗೂ ಯಕ್ಷದಿಗ್ಗಜರಾದ ಡಾ. ದಿನಕರ ಎಸ್ ಪಚ್ಚನಾಡಿ ಮತ್ತು ದಯಾನಂದ ಕತ್ತಲ್ ಸಾರ್ರವರಿಂದ ಕೃಷ್ಣ-ಜಾಂಬವಂತ ಯಕ್ಷಗಾನ ಪಾತ್ರ ಸಂವಾದ ರಂಗದಲ್ಲಿ ಸಂಭ್ರಮಿಸಿತು.

Pages