BUNTS NEWS, ಸುರತ್ಕಲ್: ಜಾಗತಿಕ ಬಂಟರ ಸಂಘಗಳ
ಒಕ್ಕೂಟ ಹಾಗೂ ಉಡುಪಿ ಜಿಲ್ಲಾ
ಸಮಸ್ತ ಬಂಟರ ಸಂಘಗಳ ಸಹಯೋಗದಲ್ಲಿ
ಸೆ. 9ರ ಭಾನುವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ
ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಬಂಟರ ಸಮ್ಮಿಲನ
ಜರಗಲಿದ್ದು ಈ ಕಾರ್ಯಕ್ರಮದಲ್ಲಿ ಸುರತ್ಕಲ್
ಬಂಟರ ಸಂಘದ ಸದಸ್ಯರಿಂದ ಕದ್ರಿ
ನವನೀತ ಶೆಟ್ಟಿ ರಚನೆಯ ‘ಬೀರೆ
ದೇವುಪೂಂಜೆ’ ಕಿರುನಾಟಕ ಪ್ರದರ್ಶನಗೊಳ್ಳಲಿದ್ದು ಇದರ ಮುಹೂರ್ತ ಸಮಾರಂಭವು
ಸುರತ್ಕಲ್ ಬಂಟರ ಭವನದಲ್ಲಿ ಜರಗಿತು.
ಸಮಾರಂಭದ
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಲ್ಲಾಸ್
ಆರ್. ಶೆಟ್ಟಿ ಪೆರ್ಮುದೆ ವಹಿಸಿದ್ದರು.
ಬಂಟ ಸಮಾ ಜದಲ್ಲಿ ಹುಟ್ಟಿ
ಬೆಳೆದ ದೇವುಪೂಂಜೆ ಪರಾಕ್ರಮಿ, ಧೈರ್ಯಶಾಲಿ ಸಮಾಜ ಸೇವಕ, ತುಳುನಾಡಿನ ದೈವಾರಾಧನೆ ಯಲ್ಲೂ ಈತನ ಜೀವನ
ಕತೆಗೆ ಸಂಬಂಧವಿದೆ. ಆತ ಅನ್ಯಾಯದೊಂ ದಿಗೆ
ರಾಜಿ ಮಾಡಿಕೊಳ್ಳದೆ ನೇರ ನಡೆ ನುಡಿಯ
ಧೀಮಂತ ನಾಯಕ. ಪರೋ ಪಕಾರಿಯೂ
ಹೌದು, ದೈವಭಕ್ತನೂ ಹೌದು. ಆತನ ಕತೆಯನ್ನಾಧರಿಸಿದ
ಬೀರೆ ದೇವಪೂಂಜೆ ತುಳು ಚಾರಿತ್ರಿಕ ನಾಟಕದಲ್ಲಿ
ಎಲ್ಲಾ ಕಲಾವಿದರು ಭಕ್ತಿ ಶ್ರದ್ಧೆಯಿಂದ ಅಭಿನಯಿಸುವಂತಾಗಲಿ
ಎಂದು ಉಲ್ಲಾಸ್ ಶೆಟ್ಟಿ ಶುಭ ಹಾರೈಸಿದರು.
ಸಮಾರಂಭದಲ್ಲಿ
ಸಂಘದ ಉಪಾಧ್ಯಕ್ಷ ಸುಧಾಕರ ಪೂಂಜ ಹೊಸಬೆಟ್ಟು,
ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ
ಶೆಟ್ಟಿ ಸಾಂಸ್ಕøತಿಕ ಕಾರ್ಯದರ್ಶಿ
ಲೀಲಾಧರ ಶೆಟ್ಟಿ ಕಟ್ಲ ಮಧು
ಸುರತ್ಕಲ್, ವಜ್ರಾಕ್ಷಿ ಶೆಟ್ಟಿ, ಚಿತ್ರಾ ಜೆ.
ಶೆಟ್ಟಿ, ಸುಜಾತ ಶೆಟ್ಟಿ, ಭವ್ಯ
ಶೆಟ್ಟಿ, ಕೇಸರಿ ಪೂಂಜ, ವೇದಾವತಿ
ಶೆಟ್ಟಿ ಸುಧಾಕರ
ಶೆಟ್ಟಿ ಚೇಳಾೈರ್, ಗಂಗಾಧರ ಶೆಟ್ಟಿ, ಯಶವಂತ
ಶೆಟ್ಟಿ , ರಾಘವೇಂದ್ರ ಶೆಟ್ಟಿ
ತಂಡಬೈಲ್, ಪ್ರಭಾಕರ ಶೆಟ್ಟಿ ನಾರಾಯಣ
ಶೆಟ್ಟಿ, ಶಿಶಿರ್ ಶೆಟ್ಟಿ ಪೆರ್ಮುದೆ,
ಆಶ್ರಯ್ ಶೆಟ್ಟಿ, ರಾಮಚಂದ್ರ ಶೆಟ್ಟಿ,
ಹರೀಶ್ ಶೆಟ್ಟಿ, ಸತೀಶ್ ಶೆಟ್ಟಿ
ಬಾಳಿಕೆ, ಬಾಲಕೃಷ್ಣ ಶೆಟ್ಟಿ, ಸುಶ್ಮಿತ್ ಪೂಂಜ, ಮೊದಲಾದವರು
ಉಪಸ್ಥಿತರಿದ್ದರು. ಲೀಲಾಧರ ಶೆಟ್ಟಿ ಸ್ವಾಗತಿಸಿ
ವಂದಿಸಿದರು.