BUNTS NEWS, ಮಂಗಳೂರು: ಕಾವೂರ್ ಗ್ರೂಪ್ ಅಪ್ ಹೋಟೆಲ್ಸ್ ಮಾಲಕರಾದ ಕಾವೂರು
ಲಕ್ಷ್ಮಣ್ ಶೆಟ್ಟಿಯವರು ಇಂದು (ಆ.28) ನಿಧನರಾದರು.
ಅವರು ಏ ಜೆ ಆಸ್ಪತ್ರೆಯಲ್ಲಿ
ಅಲ್ಪಕಾಲದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಲಕ್ಷ್ಮಣ ಶೆಟ್ಟಿಯವರು ಕಾವೂರು ಮಹಾಲಿಂಗೇಶ್ವರ
ಕಲ್ಯಾಣ ಮಂಟಪದ ಸಮಿತಿಯ ಅಧ್ಯಕ್ಷರಾಗಿ, ಕಾವೂರು ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿ, ಕಾವೂರು ಕೋರ್ದಬ್ಬು
ದೈವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಆಧ್ಯಾತ್ಮಿಕ-ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿ
ಕೊಂಡವರು.
ಬಂಟರ ಸಂಘದಲ್ಲಿ
ಕಳೆದ 18 ವರ್ಷದಿಂದ ಗರಿಷ್ಠ ಅಂಕ ಗಳಿಸಿದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುತಿದ್ದರು.
ಇಂಟರ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಸದಾನಂದ ಶೆಟ್ಟಿಯವರ ಆತ್ಮೀಯ ಮಿತ್ರರೂ ಮತ್ತು
ಟ್ರಸ್ಟಿನ ಒಬ್ಬ ಸಕ್ರಿಯ ಸದ್ಯಸ್ಯರಾಗಿದ್ದರು. ಕೊಡುಗೈ ದಾನಿಯಾಗಿದ್ದ ಲಕ್ಷ್ಮಣ ಶೆಟ್ಟಿ ಅವರ ಆತ್ಮಕ್ಕೆ
ದೇವರು ಚಿರಶಾಂತಿಯನ್ನು ನೀಡಲಿ. ಇವರ ಕುಟುಂಬಕ್ಕೆ ಇವರನ್ನು ಅಗಲಿದ ದುಃಖವನ್ನು ಸಹಿಸುವ ಶಕ್ತಿಯನ್ನು
ನೀಡಲೆಂದು ಈ ಮೂಲಕ ಪ್ರಾರ್ಥಿಸುತ್ತೇವೆ.