ಕುರ್ಲಾ ಬಂಟರ ಭವನದಲ್ಲಿ ನಡೆದ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಕಾರ್ಯಕ್ರಮ - BUNTS NEWS WORLD

ಕುರ್ಲಾ ಬಂಟರ ಭವನದಲ್ಲಿ ನಡೆದ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಕಾರ್ಯಕ್ರಮ

Share This
ಮುಂಬಯಿ: ಯುಎಇಯ ಪದ್ಮನಾಭ ಕಟೀಲು ಅವರ ನೇತೃತ್ವದಲ್ಲಿ ಕಟೀಲು ಗೋಪಾಲ ಕೃಷ್ಣ ಆಸ್ರಣ್ಣರ ಅಭಿಮಾನಿ ಬಳಗ ಮುಂಬಯಿ ಹಾಗೂ ಯುಎಇ ವತಿಯಿಂದ ಇತ್ತೀಚೆಗೆ  ರಂದು ಕುರ್ಲಾ ಬಂಟರ ಭವನದ ಸಭಾಗೃಹದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ದೆಯವರು ವಹಿಸಿ ಮಾತನಾಡಿ ಶುಭ ಕೋರಿದರು. ಗೌರವ ಅತಿಥಿಗಳಾಗಿ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಟಿ. ಶ್ಯಾಮ ಭಟ್. ಉಧ್ಯಮಿ ಕೆ. ಡಿ. ಶೆಟ್ಟಿ, ಬಂಟರ ಸಂಘ ಮುಂಬಯಿ  ಟ್ರಷ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ, ಹರಿಕೃಷ್ಣ ಪುನರೂರು, ಶ್ರೀಪತಿ ಭಟ್, ಸರ್ವೋತ್ತಮ ಶೆಟ್ಟಿ ಅಭುಧಾಬಿ, ಚಂದ್ರಶೇಖರ ಪಾಲೆತ್ತಾಡಿ, ರತ್ನಾಕರ ಶೆಟ್ಟಿ ಮುಂಡ್ಕೂರು. ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಐಕಳ ಗುಣಪಾಲ ಶೆಟ್ಟಿ, ಚಂದ್ರಹಾಸ ರೈ, ನೆಲೇಶ್ ಶೆಟ್ಟಿಗಾರ್, ಗಣೇಶ್ ಶೆಟ್ಟಿ, ಆನಂದ ಡಿ. ಶೆಟ್ಟಿ, ಆಶೋಕ ಶೆಟ್ಟಿ ಪೆರ್ಮುದೆ, ಜೆ ಸಿ ಕುಂದರ್, ದೇವದಾಸ ಕುಲಾಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಟೀಲು ಕ್ಷೇತ್ರ ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನಗೈದರು. ಕದ್ರಿ ನವನೀತ ಶೆಟ್ಟಿಯವರು ಸಂಸ್ಮರಣಾ ನುಡಿಯನ್ನಾಡಿದರೆ, ಉಜಿರೆ ಅಶೋಕ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಅಶೋಕ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಕಾರ್ಯಕ್ರಮವನ್ನು ನಿರ್ವಹಿಸಿದರು. ವರದಿ : ಈಶ್ವರಎಂ. ಐಲ್ ಚಿತ್ರ: ದಿನೇಶ್ ಕುಲಾಲ್

Pages