BUNTS NEWS, ಅಹಮದಾಬಾದ್: ದೈಹಿಕ ನ್ಯೂನತೆಯಿದ್ದರೂ ಎದೆಗುಂದದೆ ಸ್ಪೆನ್’ನಲ್ಲಿ ನಡೆದ
ವಿಶ್ವ ಸೆರೆಬ್ರಲ್ ಪಾಲ್ಸಿ (world games of cerebral Palsy) ಕ್ರೀಡಾಕೂಟದಲ್ಲಿ ಸ್ಪರ್ಧಿಸಿ
ಗೌತಮ್ ಶೇಖರ ಶೆಟ್ಟಿ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸೆರೆಬ್ರಲ್ ಪಾಲ್ಸಿ
ರೋಗದಿಂದ (cerebral Palsy) ಬಳಲುತ್ತಿರುವ ಗೌತಮ್ ಶೆಟ್ಟಿ
ಅವರು ಆ.11ರಂದು ಸ್ಪೆನ್’ನಲ್ಲಿ ನಡೆದ ವಿಶ್ವ ಸೆರೆಬ್ರಲ್ ಪಾಲ್ಸಿ ಕ್ರೀಡಾಕೂಟದ 400 ಮೀ. ರಿಲೆಯಲ್ಲಿ ಸ್ಪರ್ಧಿಸಿ ಪ್ರಥಮ
ಸ್ಥಾನ ಪಡೆದಿರುವುದು ಬಂಟ ಸಮಾಜಕ್ಕೆ ಹೆಮ್ಮೆ ವಿಷಯವಾಗಿದೆ.
ಗೌತಮ್ ಶೇಖರ ಶೆಟ್ಟಿ ಅವರು
ಈ ಹಿಂದೆಯೂ 200ಮೀ., 400ಮೀ. ಓಡುವ ಸ್ವರ್ಧೆ ಬೆಳ್ಳಿಯ ಪದಕ ಪಡೆದು ಎಲ್ಲರ ಗಮನ ಸೆಳೆದಿದ್ದರು. ಮೂಲತಃ ದ.ಕ ಜಿಲ್ಲೆಯ
ತೋಡಾರಿನವರಾದ ಗೌತಮ್ ಶೇಖರ ಶೆಟ್ಟಿ ಅವರು
ಶೇಖರ ಶೆಟ್ಟಿ ಹಾಗೂ ಗೀತಾ ದಂಪತಿಯ ಪುತ್ರ. ಗೌತಮ್ ಶೇಖರ ಶೆಟ್ಟಿ ಅವರ ಸಾಧನೆಗೆ ನೆರಳಾಗಿ ಅವರ
ಅಣ್ಣ ಗೌರವ್ ಶೆಟ್ಟಿ ಶ್ರಮಿಸುತ್ತಿದ್ದಾರೆ. ಪ್ರಸ್ತುತ್ತ ಗುಜರಾತಿನ ಅಹಮದಾಬಾದ್’ನಲ್ಲಿ
ನೆಲೆಸಿದ್ದು ಗೌತಮ್ ಶೇಖರ ಶೆಟ್ಟಿ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಈ ಮೂಲಕ
ಹಾರೈಸುತ್ತೇವೆ.