ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪ್ರತಿಜ್ಞಾ ವಿಧಿ
ಸ್ವೀಕಾರ ಸಮಾರಂಭ ಆ.10ರಂದು ನಡೆಯಿತು.
ಮುಖ್ಯ ಅತಿಥಿ ರವೀಂದ್ರನಾಥ ಶೆಟ್ಟಿ
ಅವರನ್ನು ಮಂತ್ರಿಮಂಡಲದ ನಾಯಕರು ಬರಮಾಡಿಕೊಳ್ಳುವ ಮೂಲಕ
ಕಾರ್ಯಕ್ರಮವು ಪ್ರಾರಂಭವಾಯಿತು. ಅತಿಥಿಗಳು ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು
ಅಂಧಕಾರವನ್ನು ಅಳಿಸಿ ಸುಜ್ಞಾನವು ದೀಪದ
ಬೆಳಕಿನಂತೆ ಎಲ್ಲೆಡೆ ಹರಡಲಿ ಎಂದು
ಹಾಡಿದರು.
ವೇದಿಕೆಯಲ್ಲಿ
ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಿ ನಾೈಕ್, ಮುಖ್ಯ
ಅತಿಥಿ ಎನ್.ಸಿ.ಸಿ
ಅಧಿಕಾರಿ ರವೀಂದ್ರನಾಥ ಶೆಟ್ಟಿ, ಶಾಲಾ ಆಡಳಿತಾಧಿಕಾರಿ
ಬೈಕಾಡಿ ಜನಾರ್ದನ ಆಚಾರ್, ಶಕ್ತಿ
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ
ಪ್ರಭಾಕರ ಜಿ.ಎಸ್, ಸಂಸ್ಥೆಯ ಅಭಿವೃದ್ಧಿ
ಅಧಿಕಾರಿ ನಸೀಂ ಬಾನು, ಸಂಸ್ಥೆಯ
ಮುಖ್ಯ ಸಲಹೆಗಾರ ರಮೇಶ್ ರವರು
ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲೆ ಮಧುಲಿಕ ರಾವ್ ಅತಿಥಿಗಳನ್ನು
ಸ್ವಾಗತಿಸಿದರು. ಶಿಕ್ಷಕಿ ಪೂರ್ಣಿಮಾರವರು ಮುಖ್ಯ
ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳು ಶಾಲಾ
ಮಂತ್ರಿ ಮಂಡಲದ ಸದಸ್ಯರಿಗೆ ಪದವಿ
ಪ್ರದಾನ ಮಾಡಿದರು. ಪ್ರಾಂಶುಪಾಲರಾದ ಮಧುಲಿಕ ರಾವ್ ಪ್ರತಿಜ್ಞಾ
ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಶಾಲಾ ನಿಯಮ ಹಾಗೂ
ತತ್ವಗಳಿಗೆ ಬದ್ಧರಾಗಿ ನಿಜವಾದ ನಾಯಕತ್ವ ಗುಣಗಳನ್ನು
ಬೆಳೆಸಿಕೊಳ್ಳುವ ಪ್ರತಿಜ್ಞೆ ಗೈದರು.
ಮುಖ್ಯ ಅತಿಥಿಗಳು ತಮ್ಮ ಅದ್ಭುತ ವಿಚಾರ
ಧಾರೆಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶಾಲಾ ನಾಯಕ ಗಗನ್
ಮತ್ತು ಶಾಲಾ ನಾಯಕಿ ದಿಶಾ
ರವರಿಗೆ ಶಾಲಾ ಧ್ವಜವನ್ನು ನೀಡುವ
ಮೂಲಕ ಸಾಂಕೇತಿಕವಾಗಿ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಶಾಲಾ ಮಂತ್ರಿ ಮಂಡಲ
ಹಾಗೂ ಶಿಕ್ಷಕ ವೃಂದವನ್ನು ಪ್ರಶಂಸಿದರು.
ಶಿಕ್ಷಕಿ ಪ್ರಿಯಾಂಕ ರೈ ಅವರು ವಂದಿಸಿದರು.
ಶಿಕ್ಷಕಿ ಅಶ್ವಿತಾ ಎ. ಆರ್
ಕಾರ್ಯಕ್ರಮ ನಿರೂಪಿಸಿದರು.