ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ: ಕ್ಯಾ. ಮುಲ್ಕಿ ಗಣೇಶ ರಾವ್’ಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ: ಕ್ಯಾ. ಮುಲ್ಕಿ ಗಣೇಶ ರಾವ್’ಗೆ ಸನ್ಮಾನ

Share This
ಮಂಗಳೂರು: ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ 72ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಶಕ್ತಿ ಶಾಲೆಯ ಮೈದಾನದಲ್ಲಿ ಧ್ವಜಾರೋಹಣದೊಂದಿಗೆ ಆಯೋಜಿಸಲಾಯಿತು.
ಧ್ವಜಾರೋಹಣವನ್ನು ಕ್ಯಾ. ಮುಲ್ಕಿ ಗಣೇಶ ರಾವ್ ನೆರೆವೇರಿಸಿ ಧ್ವಜವಂದನೆಯನ್ನು ಸಲ್ಲಿಸಿದರು. ಶಕ್ತಿ ಶಾಲೆಯ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ  ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೈಕ್ ವಹಿಸಿದರು. ಸಂದರ್ಭದಲ್ಲಿ ಕ್ಯಾ. ಮುಲ್ಕಿ ಗಣೇಶ ರಾವ್ ಇವರು ಸೈನ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ಶಕ್ತಿ ವಸತಿ ಶಾಲೆಯ ಸಂಚಾಲಕರಾದ ಶ್ರೀ ಸಂಜೀತ್ ನಾೈಕ್ iತ್ತು ಆಡಳಿತ ಮಂಡಳಿ ಸದಸ್ಯ ಸಗುಣ ಸಿ. ನಾೈಕ್ ಮಾಡಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕ್ಯಾ. ಮುಲ್ಕಿ ಗಣೇಶ್ ರಾವ್ 1965 ಪಾಕಿಸ್ಥಾನ ಮತ್ತು ಭಾರತದ ನಡುವಿನ ಯುಧ್ಧದಲ್ಲಿ ತಾವು ಸ್ವತಃ ಭಾಗವಹಿಸಿದ ನೆನಪುಗಳನ್ನು ಮೆಲುಕು ಹಾಕಿದರು. ಸ್ವತಂತ್ರ ಭಾರತ ನಿರ್ಮಾಣವಾದ ನಂತರವು ನಾವು ಅನೇಕ ಯುದ್ಧಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕೆ ನಮ್ಮ ಹಿಂದಿನ ಆಡಳಿತ ವ್ಯವಸ್ಥೆಯು ಕಾರಣವಾಗಿರಬಹುದು ಎಂಬ ವಿಚಾರವನ್ನು ತಿಳಿಸಿದರು. ಇಂದಿನ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬರಬೇಕು. ನಮ್ಮ ದೇಶವನ್ನು ನಾವು ಪ್ರೀತಿಸಬೇಕೆಂದು ಕರೆ ನೀಡಿದರು.
ನಂತರ ಸ್ವಾತಂತ್ರೋತ್ಸವದ ನಿಮಿತ್ತ ನಡೆದ ಅನೇಕ ಕಾರ್ಯಕ್ರಮದಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಮಧುಲಿಕಾ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ. ಎಸ್ ಸ್ವಾತಂತ್ರ್ಯದ ಸಂದೇಶವನ್ನು ನೀಡಿದರು. ಸಂದರ್ಭದಲ್ಲಿ ಶಕ್ತಿ ವಸತಿ ಶಾಲಾ ಮಕ್ಕಳು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಹಾಗೂ ಶಕ್ತಿ ಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ಶಾಲೆಯ ಸಂಚಾಲಕ ಸಂಜೀತ್ ನಾೈಕ್, ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾೈಕ್, ಟ್ರಸ್ಟಿ ಮರುಳೀಧರ್ ನಾೈಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಆಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ನಿರೂಪಣೆಯನ್ನು ಪ್ರಿಯಾಂಕ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿ ರಾಹಿಲ್ ನೆರೆವೇರಿಸಿದರು.

Pages