ಯಕ್ಷಗಾನ ಕ್ಷೇತ್ರದಲ್ಲಿ ಚಾರಿತ್ರಿಕ ದಾಖಲೆ: ಅಮೇರಿಕಾದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‍ಗೆ ಮಾನ್ಯತೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯಕ್ಷಗಾನ ಕ್ಷೇತ್ರದಲ್ಲಿ ಚಾರಿತ್ರಿಕ ದಾಖಲೆ: ಅಮೇರಿಕಾದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‍ಗೆ ಮಾನ್ಯತೆ

Share This
ಮಂಗಳೂರು: ಅಮೇರಿಕಾದ ಮಿಸೌರಿ ರಾಜ್ಯ ಕಾರ್ಯದರ್ಶಿ ಜೋನ್ ಆರ್. ಆ್ಯಶ್ಕ್ರಾಫ್ಟ್ ಅವರು ಯಕ್ಷಧ್ರುವ ಪಟ್ಲ  ಫೌಂಡೇಶನ್ ಟ್ರಸ್ಟ್ಗೆ  ಮಿಸೌರಿ ರಾಜ್ಯದ ಅಧಿಕೃತ ಸಾಂಸ್ಕøತಿಕ ಸಂಸ್ಥೆಯಾಗಿ ಮಾನ್ಯತೆಯನ್ನು ಘೋಷಿಸಿ ಘೋಷಣಾ ಪತ್ರವನ್ನು ನೀಡಿರುತ್ತಾರೆ.
ಭಾರತದ ಸ್ವಾತಂತ್ರ್ಯೋತ್ಸವದ ದಿನದಂದೇ ಪ್ರತಿಷ್ಠಿತ ಘೋಷಣಾ ಪತ್ರವನ್ನು ನೀಡಲಾಗಿದೆ. ಅಮೇರಿಕಾ ಖಂಡದ ಹತ್ತು ರಾಷ್ಟ್ರಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡಿದ ಪಟ್ಲ ಗುತ್ತು ಸತೀಶ್ ಶೆಟ್ಟಿಯವರು ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಮನಸೂರೆಗೊಂಡಿದ್ದು, ‘ಶ್ರೀ ದೇವಿ ಮಹಾತ್ಮೆಪ್ರಸಂಗವನ್ನು ಅಮೇರಿಕಾದ ಹ್ಯೂಸ್ಟನ್ ಬಯಲು ರಂಗ ಮಂಟಪದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪ್ರದರ್ಶಿಸಲಾಗಿತ್ತು. ಅಮೆರಿಕಾದಲ್ಲಿ ನಡೆದ ಚಾರಿತ್ರಿಕ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿದ ಅಮೇರಿಕಾದ ಅಧಿಕಾರಿಗಳು ಹತ್ತು ರಾಷ್ಟ್ರಗಳ ಕನ್ನಡಿಗ ಪ್ರತಿನಿಧಿಗಳನ್ನೊಳಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥೆಯ ನೋಂದಾವಣಿಗೆ ಅವಕಾಶ ನೀಡಿರುತ್ತಾರೆ.
ಅಮೇರಿಕಾದಲ್ಲಿ ವಿವಿಧ ಪ್ರತಿಷ್ಠಿತ ಉದ್ಯೋಗಪತಿಗಳು ಪಟ್ಲ  ಫೌಂಡೇಶನ್ ಟ್ರಸ್ಟ್ ಚಟುವಟಿಕೆಗಳನ್ನು ಗಮನಿಸಿ, ತಾವೂ ಯಕ್ಷ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತದೊಂದಿಗೆ ಸುಮಾರು 60 ಸದಸ್ಯರುಗಳನ್ನೊಳಗೊಂಡ ಅಮೇರಿಕಾ ಘಟಕವನ್ನು ರಚಿಸಿಕೊಂಡಿದೆ. ಅಮೇರಿಕಾದ ಜನಪ್ರಿಯ ವೈದ್ಯ, ಡಾ. ಅರವಿಂದ ಉಪಾಧ್ಯ ಅವರು ಅಮೇರಿಕಾ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್   ಘಟಕದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.

ಪಟ್ಲ ಟ್ರಸ್ಟ್ ಪಟ್ಲಾಶ್ರಯ ಹಾಗೂ  ಇತರ ಸೇವಾಯೋಜನೆಗಳಿಗೆ ಪೂರ್ಣ ಪ್ರಮಾಣದ ಸಹಕಾರವನ್ನು ನೀಡುವ ಭರವಸೆಯೊಂದಿಗೆ ಕಾರ್ಯಾರಂಭಗೊಳಿಸಿದ ಅಮೇರಿಕಾ ಪಟ್ಲ ಘಟಕದ ಸರ್ವ ಸದಸ್ಯರನ್ನು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Pages