ಆ.26ರಂದು ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಆ.26ರಂದು ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

Share This
ಮಂಗಳೂರು: ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ, ಆಧ್ಯಾತ್ಮಿಕ ಶಿಬಿರವು ಅ.26ರ ಭಾನುವಾರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 4 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು (ಕಾರ್ಯಾಲಯ – 2414412)
ಕಾರ್ಯಕಮದಲ್ಲಿ ಅರ್ಚನೆ, ಭಜನೆ, ಧ್ಯಾನ, ಉಪನ್ಯಾಸ, ಪ್ರಶ್ನೋತ್ತರ ಮತ್ತು ಗಾನಕೀರ್ತನೆ ಕಾರ್ಯಕ್ರಮಗಳಿರುತ್ತದೆ. ಲಂಡನ್ ವೇದಾಂತ ಸೊಸೈಟಿಯ ಹಿಂದಿನ ಮುಖ್ಯಸ್ಥರಾದ ಸ್ವಾಮಿ ದಯಾತ್ಮಾನಂದಜಿಯವರುಶ್ರೀ ರಾಮಕೃಷ್ಣರು ಮೆಚ್ಚುವ ಭಕ್ತನಾರುಎಂಬ ವಿಷಯವಾಗಿ ಹಾಗೂ ತಿರುಪತಿ ರಾಮಕೃಷ್ಣ ಮಿಷನ್ನಿನ ಮುಖ್ಯಸ್ಥರಾದ ಸ್ವಾಮಿ ಅನುಪಮಾನಂದಜಿಯವರುಶಾರದಾದೇವಿ ಮತ್ತು ಪರಿಪೂರ್ಣ ಆಧ್ಯಾತ್ಮಿಕ ಜೀವನಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ಪ್ರವಚನಗಳ ನಂತರ ಪ್ರಶ್ನೋತ್ತರ ಕಾರ್ಯಕ್ರಮವಿರುತ್ತದೆ.

ಅಪರಾಹ್ನ 2.00 ರಿಂದ 4.00 ರವರೆಗೆ ಬೆಂಗಳೂರಿನ ಖ್ಯಾತ ಗಾಯಕರಾದ ಹುಸೇನ್ ಸಾಬ್ ಕನಕಗಿರಿ ಅವರಿಂದದಾಸವಾಣಿ”  ಕಾರ್ಯಕ್ರಮ ನಡೆಯಲಿದೆ. ಆಸಕ್ತರೆಲ್ಲರಿಗೂ ಆದರದ ಆಹ್ವಾನವಿರುತ್ತದೆ.

Pages