ಮಂಗಳೂರು:
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ಪುರಸ್ಕೃತ ದೆಹಲಿಯ ಭರತನಾಟ್ಯ ಕಲಾವಿದೆ
ರಮಾ ವೈದ್ಯನಾಥನ್ ಮತ್ತು ಅವರ ತಂಡ
ಆ.24ರಂದು ನಗರದಲ್ಲಿ ವಿವರ್ತನ(ನಾಟ್ಯ ಪರಿವರ್ತನೆ) ಸಮೂಹ
ನೃತ್ಯ ಕಾರ್ಯಕ್ರಮ ಆಯೋಜಿಸಿದೆ.
ಡಾನ್ಬಾಸ್ಕೋ ಸಭಾಂಗಣದಲ್ಲಿ ಸಂಜೆ
6.30ಕ್ಕೆ ಸಂಗೀತ ನಾಟಕ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಕಾರ್ಯಕ್ರಮಕ್ಕೆ
ಚಾಲನೆ ನೀಡುವರು. ಅಂತಾರಾಷ್ಟ್ರೀಯ ಖ್ಯಾತಿಯ ಸಿತಾರ್ವಾದಕ
ರಫೀಕ್ ಖಾನ್ ಅತಿಥಿಯಾಗಿ ಭಾಗ
ವಹಿಸುವರು. ಮೀರಾ ಉನ್ನಿಥಾನ್, ರೋಹಿಣಿ
ದನಂಜಯ, ಲಕ್ಷ್ಮೀ ಚಾಕ್ಯಾರ್, ಕಾವ್ಯಾ
ಗಣೇಶ್, ಸನ್ನಿಧಿ ವೈದ್ಯನಾಥ್ ನೃತ್ಯ
ತಂಡದಲ್ಲಿ ಇರಲಿದ್ದಾರೆ. ದೀಪಾ ಧರ್ಮಾಧಿಕಾರಿ ಈ
ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಬೆಳಕಿನ ಸಂಯೋಜನೆ ಮಾಡಲಿದ್ದಾರೆ
ಎಂದು ಕಾರ್ಯಕ್ರಮ ಸಂಘಟಕಿ ನೃತ್ಯಾಂಗನ್ ಟ್ರಸ್ಟ್
ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.