Bunts News, ಬಜಪೆ: ಕುಂಜತ್ತ್ ಬೈಲ್ ವಿಷ್ಣು ಮೂರ್ತಿ
ದೇವಸ್ಥಾನ, ಮಾಡದಡಿ ದೈವಸ್ಥಾನ
ಆಡಳಿತ ಮೋಕ್ತೆಸರ ಪ್ರಸಿದ್ದ ದೆಪ್ಪುಣಿಗುತ್ತು ಮನೆತನದ ಪ್ರಕಾಶ್ ರೈ
ದೆಪ್ಪುಣಿಗುತ್ತು ಅವರು ನಿಧನರಾಗಿದ್ದಾರೆ.
ಪ್ರಕಾಶ್
ರೈ ಅವರು ಕಾವೂರು ಸಾರ್ವಜನಿಕ ಮೊಸರು
ಕುಡಿಕೆ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, , ಪರಿಚಯ ಕಲಾರಂಗ
ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಪ್ರಕಾಶ್
ಕಲಾವಿದರು ಕುಡ್ಲ ನಾಟಕ ತಂಡವನ್ನು ಕಟ್ಟಿ, ಸಿಟಿ ಕೇಬಲ್
ಚಾನಲ್ ನ ವಾರ್ತಾ ವಾಚಕರಾಗಿ, ಕುಂಜತ್ತ್ ಬೈಲ್ ಕಾವೂರು ಪ್ರದೇಶದಲ್ಲಿ
ಸೌಹಾರ್ದತೆ ಯೊಂದಿಗೆ ಬೆರೆಯುತ್ತ ಎಲ್ಲರ ಪ್ರೀತಿ ಪಾತ್ರರಾಗಿದ್ದರು.