ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಬಾಳದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಬಾಳದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ

Share This
BUNTS NEWS NETWORK, ಸುರತ್ಕಲ್: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ  ಶಿಕ್ಷಣ , ಕ್ರೀಡೆ, ಮತ್ತಿತರ ಅಗತ್ಯ ಕಾರ್ಯಗಳಿಗೆ ಸಹಕರಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಸುರತ್ಕಲ್ ಬಂಟರ ಸಂಘದ  ಸಹಾಯದಿಂದ ಸುರತ್ಕಲ್ ಬಾಳ ಒಟ್ಟೆ ಕಾಯರ್ ನಲ್ಲಿನ   ವಿಜಯಲಕ್ಷೀ ಕುಟುಂಬಕ್ಕೆ ಆಶ್ರಯ ಯೋಜನೆಯ ಮೂಲಕ ನಿರ್ಮಿಸಿಕೊಡಲಿರುವ ಮನೆಯ ಶೀಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.

ಮನೆ ಎಂಬುದು ಎಲ್ಲರಿಗೂ ಅತ್ಯಗತ್ಯ, ಸಂಘದಿಂದ ಕಡು ಬಡತನದವರಿಗೆ ಮನೆ ನಿರ್ಮಾಣ, ಕ್ರೀಡೆ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ವಿಧ್ಯಾರ್ಥಿಗಳಿಗೆ ಸಹಾಯ ನೀಡಲಾಗುತ್ತಿದೆ, ಇದಕ್ಕಾಗಿ ಸಂಘದ ದಾನಿಗಳು ಮುಂದೆ ಬಂದಿದ್ದಾರೆ, ಜಾಗತಿಕ ಬಂಟರ ಸಂಘ ಮತ್ತು ಉಡುಪಿ ಜಿಲ್ಲಾ ಬಂಟರ ಸಂಘದ ವತಿಯಿಂದ ಉಡುಪಿಯಲ್ಲಿ ಸೆಪ್ಟೆಂಬರ್ 9 ರಂದು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದೇವೆ, ಮುಂದಿನ ದಿನದಲ್ಲಿ ಬೆಂಗಳೂರು ಮುಂಬೈ ಮಾತ್ರವಲ್ಲದೆ ಹೊರ ದೇಶದಲ್ಲೂ ಕಾರ್ಯಕ್ರಮವನ್ನು ಮಾಡಿ ಸಮಾಜದ ಬಂಧುಗಳನ್ನು ಒಟ್ಟಿಗೆ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಸಂದರ್ಭ ಜಾಗತಿಕ ಬಂಟರ ಸಂಘದ ಕಾರ್ಯದರ್ಶಿ  ವಿಜಯಪ್ರಸಾದ್ ಅಳ್ವ, ಕೋಶಾಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ,  ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ,  ಬಾಳ ಜಗನಾಥ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಅರುಣ್ ಚೌಟ ಬಾಳದ ಗುತ್ತು, ಸುರೇಶ್ ಶೆಟ್ಟಿ ಪುಚ್ಚಾಡಿ, ಮಾಧವ ಶೆಟ್ಟಿ ಬಾಳ, ದೇವೇಂದ್ರ ಶೆಟ್ಟಿ, ಗುಣಶೇಖರ ಶೆಟ್ಟಿ, ಪುಷ್ಪರಾಜ್ ಅಡಪ, ರೇಖಾ ಶೆಟ್ಟಿ ಬಾಳ, ನಾಗೇಶ್ ಶೆಟ್ಟಿ ಮತ್ತಿತರರು ಇದ್ದರು.

Pages