ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ
ವಸತಿ ರಹಿತರು ಹಾಗೂ ನಿವೇಶನ
ರಹಿತರನ್ನು ಗುರುತಿಸಿ ಅರ್ಹರಿಗೆ ಮುಂಬರುವ ವಸತಿ ಹಾಗೂ
ನಿವೇಶನ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ
ಉದ್ದೇಶಿಲಾಗಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಮುಖಾಂತರ
ವಸತಿ ಹಾಗೂ
ನಿವೇಶನ ರಹಿತರನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ, ಸದರಿ ಪ್ರಕ್ರಿಯೆಗೆ ಜುಲೈ
31 ರ ವರೆಗೆ ಅವಕಾಶ ನೀಡಲಾಗಿದೆ.
ಆದ್ದರಿಂದ
ಈ ಕೂಡಲೇ ವಸತಿ
ರಹಿತರು ಹಾಗೂ ನಿವೇಶನ ರಹಿತರು
ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ಭೇಟಿ
ನೀಡಿ ತಮ್ಮ ಆಧಾರ್ ಕಾರ್ಡ್
ಹಾಗೂ ಛಾಯಚಿತ್ರದೊಂದಿಗೆ ಅಗತ್ಯ ಮಾಹಿತಿಗಳನ್ನು ಗ್ರಾಮ
ಪಂಚಾಯತಿಗೆ ನೀಡಿ ತಮ್ಮ ಹೆಸರನ್ನು
ಶಾಶ್ವತ ವಸತಿ ರಹಿತರ ಹಾಗೂ
ನಿವೇಶನ ರಹಿತರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು
ತಿಳಿಸಲಾಗಿದೆ. ಎಂದು ಮುಖ್ಯ ಕಾರ್ಯನಿವಾಹಕ
ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ
ಪಂಚಾಯತ್ ಇವರ ಪ್ರಕಟಣೆ ತಿಳಿಸಿದೆ.