ಜು.20ಕ್ಕೆ ಭದ್ರಾವತಿಯ ಬಂಟರ ಭವನದಲ್ಲಿ ತುಳು ಉತ್ಸವ 2018 - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜು.20ಕ್ಕೆ ಭದ್ರಾವತಿಯ ಬಂಟರ ಭವನದಲ್ಲಿ ತುಳು ಉತ್ಸವ 2018

Share This
BUNTS NEWS NETWORK, ಭದ್ರಾವತಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಭದ್ರಾವತಿ ಆಶ್ರಯದಲ್ಲಿ ತುಳು ಉತ್ಸವ -2018 ಕಾರ್ಯಕ್ರಮವು ಜುಲಾಯಿ 20 ರಂದು ಭದ್ರಾವತಿಯ ಬಂಟರ ಭವನದಲ್ಲಿ ಜರಗಲಿದೆ.
ಸಂಜೆ 6 ಗಂಟೆಗೆ ಆರಂಭವಾಗುವ ತುಳು ಉತ್ಸವವನ್ನು ಅಕಾಡೆಮಿ ಅಧ್ಯಕ್ಷ ಶ್ರೀ ಎ. ಸಿ. ಭಂಡಾರಿ ಉದ್ಘಾಟಿಸಲಿದ್ದು, ಭದ್ರಾವತಿ ಶಾಸಕರಾದ ಶ್ರೀ ಬಿ. ಕೆ ಸಂಗಮೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತುಳುಕೂಟದ ಅಧ್ಯಕ್ಷ ಡಾ. ಯು. ಕರುಣಾಕರ ಶೆಟ್ಟಿ ಅಧ್ಯಕ್ಷತೆವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭದ್ರಾವತಿಯ ಸುರೇಶ್ ಅತ್ತೂರು ಬಳಗದವರಿಂದ ತುಳು ರಸಮಂಜರಿ ನಡೆಯುವುದು.

ಇದೇ ಸಂದರ್ಭದಲ್ಲಿ ತುಳುಕೂಟದ ಹಿರಿಯ ಸದಸ್ಯರಾದ ಡಾ. ಎ. ಆರ್ ಶೆಟ್ಟಿ ಹಾಗೂ ಡಾ. ಶಂಕರ ಭಟ್‍ರವರನ್ನು ಸನ್ಮಾನಿಸಲಾಗುವುದು. 2017-18 ರ ಸಾಲಿನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ತುಳುಕೂಟದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು. ಭದ್ರಾವತಿ ತುಳುಕೂಟದ ಆಶ್ರಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ತುಳು ಉತ್ಸವದಲ್ಲಿ ಬಹುಮಾನ ವಿತರಿಸಲಾಗುವುದು.

Pages