ಕಟೀಲು ಮೇಳದ ಕಲಾವಿದನಾದ ನಾನು ನಗ್ರಿ ಮಹಾಬಲ ರೈ ನನ್ನ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ…! - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ಮೇಳದ ಕಲಾವಿದನಾದ ನಾನು ನಗ್ರಿ ಮಹಾಬಲ ರೈ ನನ್ನ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ…!

Share This

ಕಟೀಲು ಮೇಳದ ಯಜಮಾನರು ನನಗೆ ದ್ರೋಹ ಮಾಡಿಲ್ಲ: ನಗ್ರಿ ಮಹಾಬಲ ರೈ

2017-18 ತಿರುಗಾಟದಲ್ಲಿ ಮೇಳದ ಪ್ರಧಾನ ಭಾಗವತರನ್ನು 5 ನೇ ಮೇಳದಿಂದ 4 ನೇ ಮೇಳಕ್ಕೆ ಬದಲಾವಣೆ ಮಾಡುವ ಸಲುವಾಗಿ ಇತರ ಕಲಾವಿದರು ಅಸಮಾಧಾನ ಹೊಂದಿಧ್ದರು. ಅದರ ಸಲುವಾಗಿ ಕಟೀಲು 5ನೇ  ಮೇಳದ ಎಲ್ಲಾ ಕಲಾವಿದರು ಸೇರಿ ನಡೆಸಿದ ಸಭೆಯಲ್ಲಿ ನಡೆದಂತಹ ನಿಜ ಘಟನೆಯನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತೇನೆ.
ಅಂದು ನಡೆಸುವ ಸಭೆಯ ಸಲುವಾಗಿ ಮೊದಲನೆಯ ದಿನ ನಮ್ಮ ಮೇಳದ ಕಲಾವಿದನಾದ ಮೋಹನ್ ಕುಮಾರ್ ಅಮ್ಮುಂಜೆ ಇವರು ಕರೆಯನ್ನು ಮಾಡಿದ್ದರು. ಮರುದಿನ ಬೆಳಿಗ್ಗೆ ನಾನು ನನ್ನ ಮನೆಯಲ್ಲಿ ನನ್ನ ಮಣಿ ಸಾಮಾಗ್ರಿಯ ಕೆಲಸದಲ್ಲಿ ತೊಡಗಿದ್ದೆ. ಅದೇ ಸಮಯದಲ್ಲಿ ಮೋಹನ್ ಕುಮಾರ್ ಅಮ್ಮುಂಜೆ ಸಭೆಗೆ ಬರುವ ಸಲುವಾಗಿ ಕರೆ ಮಾಡಿದರು. ಅದಕ್ಕೆ ನಾನು ಯಾವ ಬಗ್ಗೆ ಸಭೆ ಎಂದು ಕೇಳಿದಾಗ 5ನೇ ಮೇಳದ ಭಾಗವತರನ್ನು 4ನೇ ಮೇಳಕ್ಕೆ ವರ್ಗಾವಣೆ ಮಾಡುವ ಸಲುವಾಗಿ ಸಭೆ ಎಂದು ಹೇಳಿದರು. ಆದರು ನಾನು ಅವರಿಗೆ ಉತ್ತರ ಕೊಡಲಿಲ್ಲ. ಸುಮಾರು ಅರ್ಧ ಗಂಟೆಯ ನಂತರ ಪುನಃ ಕರೆ ಮಾಡಿದರು. ನಾವು 5ನೇ ಮೇಳದ ಎಲ್ಲಾ ಕಲಾವಿದರು ಜೊತೆಯಲ್ಲಿದ್ದೇವೆ. ಭಾಗವತರ ಬದಲಾವಣೆ ಬಗ್ಗೆ ಮೇಳದ ಯಜಮಾನರಿಗೆ ಮನವಿ ಪತ್ರ ಸಲ್ಲಿಸುವ ಬಗ್ಗೆ ಸಭೆ ಎಂದು ಹೇಳಿದರು.

ನಾನು ಸುಮಾರು 10 ಗಂಟೆಯ ಹೊತ್ತಿಗೆ ಬಿಲ್ಲವ ಸಮಾಜ ಮಂದಿರಕ್ಕೆ ಹೋದಾಗ ನಮ್ಮ 5ನೇ ಮೇಳದ ಎಲ್ಲಾ ಕಲಾವಿದರು ಸಭೆ ಸೇರಿದ್ದರು. ಸಭೆಯಲ್ಲಿ ನಡೆದ ವಿಚಾರ ನಮ್ಮ ಮೇಳದ ಭಾಗವತರನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಮನವಿ ಪತ್ರಕ್ಕೆ ಸಹಿ ಹಾಕಲು ಹೇಳಿದರು. ನನಗೆ ವಿದ್ಯಾಭ್ಯಾಸ ಇಲ್ಲದ ಕಾರಣ ಮನವಿ ಪತ್ರವೆಂದು ನಾನು ಸಹಿ ಹಾಕಿದೆ. ಅದಲ್ಲದೆ ಸಭೆಯಲ್ಲಿ ಗೈರು ಹಾಜರಾದವರ ಸಹಿಯನ್ನು ಹಾಕಲು ಹೇಳಿದ್ದಾರೆ. ಅದು ನನ್ನಿಂದ ಸಾಧ್ಯವಿಲ್ಲವೆಂದು ಹೇಳಿದೆ. ಮನವಿ ಪತ್ರಕ್ಕೆ ಸಹಿ ಹಾಕುವ ಸಮಯದಲ್ಲಿ ನಾನು ಅವರಲ್ಲಿ ಕೇಳಿದೆ. ಮನವಿ ಪತ್ರಕ್ಕೆ ಸಹಿ ಹಾಕುವ ಸಮಯದಲ್ಲಿ ಮೇಳಕ್ಕಾಗಲಿ ಮೇಳದ ಯಜಮಾನರಿಗೆ ಆಗಲಿ, ಅಥವಾ  ಮೇಳದ ಭಾಗವತರಿಗೆ ಯಾವುದೇ ರೀತಿಯ ತೊಂದರೆ ಇದೆಯೇ ಎಂದು ಕೇಳಿದೆ. ಅದಕ್ಕೆ ಅವರು ಇದರಿಂದ ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಿದರು.

ಸಭೆ ಮುಗಿದ ನಂತರ ಎಲ್ಲರು ಸೇರಿ ಶಾಂತಿ ಭವನದ ಆಚಾರ್ಯರ ಮನೆಗೆ ಹೋಗಿದ್ದೇವು. ಅಲ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಅವರು ಇದು ನಿಮ್ಮ ಕೊನೆಯ ನಿರ್ಧಾರವಾ ಎಂದು ಕೇಳಿದರು. ಆಗ ನಾನು ನನ್ನ ಜೊತೆಯಲ್ಲಿದ್ದ ಕಲಾವಿದರಲ್ಲಿ ನಾನು ಕೇಳಿದೆ. ಕೊನೆಯ ನಿರ್ಧಾರವೆಂದರೆ ಏನು ಎಂದು, ಅದಕ್ಕೆ ಅವರು ಹೇಳಿದರು.ಮನವಿ ಪತ್ರಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದೆ  ಇದ್ದರೆ ನಾವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಮನವಿ ಪತ್ರದಲ್ಲಿ ನಮೂದಿಸಿದೆ ಎಂದು ಹೇಳಿದರು. ನನಗೆ ಅದು ರಾಜೀನಾಮೆ ನೀಡುವುದು ಎಂದು ತಿಳಿದಿರಲಿಲ್ಲ. ನನಗೆ ಗೊತ್ತಿದ್ದರೆ ನಾನು ಅದಕ್ಕೆ ಸಹಿ ಹಾಕುತ್ತಿರಲಿಲ್ಲ. ಆದರೆ ಮರುದಿವಸ ಭಾಗವತರ ಮನೆಯಲ್ಲಿ ನಡೆದ ಸಭೆಗೆ ಹೋಗಿದ್ದೆ. ಅಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವತರು ನಮ್ಮಲ್ಲಿ ತಿಳಿಸಿದರು. ನೀವು 7 ಮಂದಿ ಕಲಾವಿದರು ಮೇಳದಿಂದ ಹೊರಗೆ ಎಂದು ತಿಳಿಸಿದರು. ಅದಕ್ಕೆ ನಾನು ಭಾಗವತರಲ್ಲಿ ಕೇಳಿದೆ ನಮಗೆ ಯಕ್ಷಗಾನ ಬಿಟ್ಟು ಬೇರೆ ಯಾವುದೇ ಬದುಕಲು ದಾರಿ ಇಲ್ಲ ಎಂದು ಅದಕ್ಕೆ ಅವರು ಹೇಳಿದರು. "ಸ್ವಲ್ಪ ದಿವಸ ನಿಲ್ಲಿ ಎಲ್ಲ ಸರಿಯಾಗುವುದು" ಯಜಮಾನರಲ್ಲಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಮೇಳದ ಯಜಮಾನರು ಭಾಗವತರನ್ನು ಕರೆದು ಮೇಳದಿಂದ ಹೊರಗುಳಿದ ಕಲಾವಿದರು ಹಿಂತಿರುಗಿ ಬರುತ್ತಾರೆ ಎಂದು ಕೇಳಿದ್ದಾರಂತೆ. ಅದಕ್ಕೆ ಭಾಗವತರು ಅವರು ಮೇಳಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರಂತೆ. ವಿಷಯ ಯಜಮಾನರು ಭಾಗವತರಲ್ಲಿ ತಿಳಿಸಿದ್ದು ನನಗೆ ಗೊತ್ತಿಲ್ಲ ಗೊತ್ತಿದ್ದರೆ ಅದೇ ದಿನ ಯಜಮಾನರಲ್ಲಿ ಹೇಳಿ ಮೇಳಕ್ಕೆ ಸೇರುತ್ತಿದ್ದೆ. ಆದರೂ ಭಾಗವತರು ನನ್ನ ಜೀವನದ ಕಷ್ಟವನ್ನು ಅರಿತು ಪಟ್ಲ ಫೌಂಡೇಶನ್ ಘಟಕದಿಂದ 1ಲಕ್ಷ ದೇಣಿಗೆ ನೀಡಿದ್ದಾರೆ. ಅದನ್ನು ನಾನು ದೇವಿಯ ಪ್ರಸಾದ ಎಂದು ಸ್ವೀಕರಿಸಿದ್ದೇನೆ.

ಸಭೆ ನಡೆದು ಯಜಮಾನರ ಯಾವುದೇ ಕರೆ ಬಾರದ ಕಾರಣ ನಾನು ಜೀವನ ಸಾಗಿಸುವ ಸಲುವಾಗಿ ನನ್ನ ಅಳಿಯ ನನ್ನನ್ನು ದೇತ್ಯಡ್ಕ ಮೇಳದ ಯಜಮಾನರೊಂದಿಗೆ ಮಾತಾಡಿ ಮೇಳಕ್ಕೆ ಸೇರಿಸಿದ್ದಾರೆದೇತ್ಯಡ್ಕ ಮೇಳಕ್ಕೆ ಸೇರುವಾಗ ಮೇಳದ ಯಜಮಾನರಲ್ಲಿ ನಾನು ಕಟೀಲು ಮೇಳದ ಯಜಮಾನರು ಕರೆ ಮಾಡಿದರೆ ಹೋಗುವೆ ಎಂದು ಹೇಳಿದ್ದೇನೆ.

ಸುಮಾರು ಮೂರು ತಿಂಗಳ ನಂತರ ಮಾಧವ ಕೊತ್ತಮಜಲು ಇವರು ಕರೆ ಮಾಡಿ ಬಿರ್ವೆರ್ ಕುಡ್ಲ ಇಲ್ಲಿ ಸಭೆ ಇದೆ ನೀವು ಬರಬೇಕು ಎಂದು ಕರೆ ಮಾಡಿದ್ದಾರೆ. ನಾನು ಅದಕ್ಕೆ ಹೋಗಲಿಲ್ಲ. ಇದಾದ ನಂತರ ಮೇಳವನ್ನು ದತ್ತಿ ಇಲಾಖೆ ಮಾಡುವ ಯಜಮಾನರನ್ನು ಬದಲಾಯಿಸುವುದು ಇದಕ್ಕೆ ನಿಮ್ಮ ಸಹಿ ಹಾಕಬೇಕು ಎಂದು ಹೇಳಿದರು. ಅದಕ್ಕೆ ನಾನು ಹೋಗಲಿಲ್ಲ. ಸಭೆಗೆ ಹೋಗದ ಕಾರಣ ಮಳೆಗಾಲದ ಯಾವುದೇ ಕಾರ್ಯಕ್ರಮಕ್ಕೆ ಕರೆಯದೇ ಬಿಟ್ಟಿದ್ದಾರೆ.

ಮಾಧವ ಕೋಳ್ತಮಜಲು ನನ್ನ ಬಗ್ಗೆ ವಾಟ್ಸಪ್ ನಲ್ಲಿ ಅಪಪ್ರಚಾರ ಮಾಡಿದ್ದಾರೆ. ಮೇಳದಲ್ಲಿ ನನಗೆ ಪಿಂಡಿ ಹೊರುವ ಮೇಳದ, ಪೆಟ್ಟಿಗೆ ಹೊರುವ ಕೆಲಸ, ಚೌಕಿ ಕೆಲಸ ಕೊಡಿ ಎಂದು ಯಜಮಾನರಲ್ಲಿ ನಾನು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಜೀವನದ ಆಸೆ ಒಂದೇ. ನನ್ನ ಕೊನೆಯುಸಿರಿರುವವರೆಗೂ ನಾನು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವುದು. ಮೇಳದ ಯಜಮಾನರು ನನಗೆ ಯಾವುದೇ ರೀತಿಯ ದ್ರೋಹ ಮಾಡಿಲ್ಲ. ನಾನು ಅವರಿಗೆ ಯಾವುದೇ ದ್ರೋಹ ಮಾಡಲಿಲ್ಲ. ಯಜಮಾನರು ನನಗೆ ಯಾವುದೇ ರೀತಿಯ ಕೊರತೆ ಮಾಡಲಿಲ್ಲ. ನನ್ನ ಮಗಳ ಮದುವೆಯ ಸಮಯದಲ್ಲಿ ಹಣದ ಕೊರತೆಯಿರುವ ಕಾರಣ ಯಜಮಾನರಲ್ಲಿ ತಿಳಿಸಿದೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ. ಮೇಳದ ಯಜಮಾನರ ಅನ್ನದ ಋಣ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ದೇವರ ಸೇವೆ ಸಲ್ಲಿಸುತ್ತೇನೆ.
                ಇತೀ ತಮ್ಮ ನೊಂದ ಕಲಾವಿದ
                      ನಗ್ರಿ ಮಹಾಬಲ ರೈ
ಬರಹ: ನಗ್ರಿ ನವೀನ್ ರೈ ( ಮಹಾಬಲ ರೈ ಅವರ ಆಳಿಯ)

Pages