ಮಂಗಳೂರು: ಕ್ಲೋತ್ ಬ್ಯಾಂಕ್ ವತಿಯಿಂದ ನೀರುಮಾರ್ಗ ಕುಟ್ಟಿಕುಳದಲ್ಲಿ
ಲಲಿತಾ ಶೆಟ್ಟಿಯವರ ಮನೆಯಂಗಳದಲ್ಲಿ ಸ್ವಸಹಾಯ ಸಂಘದ
ಸದಸ್ಯರ 20 ಮಕ್ಕಳಿಗೆ ಹೊಸ
ಬಟ್ಟೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಲೋತ್ ಬ್ಯಾಂಕ್
ಅಧ್ಯಕ್ಷರಾದ ರೇಮಂಡ್ ಡಿಕೂನ
ಮಾತನಾಡಿ, ಇದೊದು ಕೆರೆಯ ನೀರು ಕೆರೆಗೆ
ಚೆಲ್ಲಿ ಕಾರ್ಯಕ್ರಮವಾಗಿದ್ದು
ದಾನಿಗಳು ನೀಡಿದ ಬಟ್ಟೆಯನ್ನು
ನಾವು ಫಲಾನುಭವಿಗಳಿಗೆ
ತಲುಪಿಸುವ ಕಾರ್ಯ ಮಾಡುವುದಷ್ಟೆ. ದಾನಿಗಳಿಗೆ
ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿದರೆ
ಅದೇ ನಿಮ್ಮ ಆಶೀರ್ವಾದ ಎಂದರು.
ಸ್ವ ಸಹಾಯ ಸಂಘದ ಕಾರ್ಯದರ್ಶಿಯಾದ ಲಲಿತಾ ಶೆಟ್ಟಿ ಕ್ಲೋತ್
ಬ್ಯಾಂಕ್ ಕಾರ್ಯಕ್ರಮವನ್ನು
ಶ್ಲಾಘಿಸಿ ಧನ್ಯವಾದ
ನೀಡಿದರು. ಕಾರವಾರ ಮಹಿಳಾ ಮತ್ತು ಮಕ್ಕಳ
ಸಂಸ್ಥೆಯ ಸುಜಾತ ಶೆಟ್ಟಿ ಸ್ವಾಗತಿಸಿ
ವಂದಿಸಿದರು.