BUNTS NEWS NETWORK, ಮಂಗಳೂರು: ಅನುಗ್ರಹ ಫಿಲಂಸ್ ಲಾಂಛನದಲ್ಲಿ
ಸಂತೋಷ್ ಶೆಟ್ಟಿ ಕುಂಬ್ಳೆ ನಿರ್ಮಾಣದ
ಎ.ಎಸ್. ಪ್ರಶಾಂತ್
ನಿರ್ದೇಶನದ ದಗಲ್ಬಾಜಿಲು ತುಳುಹಾಸ್ಯ
ಸಿನಿಮಾ ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು.
ಶಕ್ತಿನಗರ ಸಾನಿಧ್ಯ ವಸತಿ ಶಾಲೆಯ ವಿಶೇಷ
ಮಕ್ಕಳು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ
ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್
ಕೊಡಿಯಾಲ್ಬೈಲ್, ದೇವದಾಸ್ ಕಾಪಿಕಾಡ್,
ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ಕಿಶೋರ್
ಡಿ. ಶೆಟ್ಟಿ , ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ
ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ,
ದ.ಕ.ಜಿಲ್ಲಾ ಕಾರ್ಯನಿರತ
ಪರ್ತಕರ್ತರ ಸಂಘದ ಅಧ್ಯಕ್ಷ ಜಗನ್ನಾಥ
ಶೆಟ್ಟಿ ಬಾಳ, ಉದ್ಯಮಿಗಳಾದ ಗಿರೀಶ್
ಎಂ. ಶೆಟ್ಟಿ ಕಟೀಲು, ಶ್ಯಾಮ್
ಪ್ರಕಾಶ್, ನಿರ್ಮಾಪಕ ಸಂತೋಷ್ ಶೆಟ್ಟಿ ಕುಂಬ್ಳೆ, ನಿರ್ದೇಶಕ ಎ.ಎಸ್ ಪ್ರಶಾಂತ್,
ಎಸ್. ಪಿ. ಚಂದ್ರಕಾಂತ್, ಸುರೇಶ್
ಅಂಚನ್, ಭೋಜರಾಜ್ ವಾಮಂಜೂರು, ವಿಘ್ನೇಶ್,
ರಶ್ಮಿಕಾ, ತಿಮ್ಮಪ್ಪ ಕುಲಾಲ್, ಮೊದಲಾದವರು ಉಪಸ್ಥಿತರಿದ್ದರು. ಚೇತನ್
ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
‘ದಗಲ್ಬಾಜಿಲು’ ಸಿನಿಮಾ ಮಂಗಳೂರಿನಲ್ಲಿ
ಜ್ಯೋತಿ, ಭಾರತ್ ಮಾಲ್, ಸಿನಿಪೊಲೀಸ್,
ಪಿವಿಆರ್ ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ,
ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ,
ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್,
ಸುರತ್ಕಲ್ನಲ್ಲಿ ನಟರಾಜ್, ಬೈಂದೂರಿನಲ್ಲಿ
ಶಂಕರ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್ ಮತ್ತು
ಐಕಾನ್ಸ್ ಚಿತ್ರ ಮಂದಿರದಲ್ಲಿ ತೆರೆಕಂಡಿದೆ.
ಏಕಕಾಲದಲ್ಲಿ 15 ಚಿತ್ರ ಮಂದಿರಗಳಲ್ಲಿ ತುಳು
ಸಿನಿಮಾ ತೆರೆಕಾಣುವುದು ಕೂಡಾ ಒಂದು ದಾಖಲೆಯಾಗಿದೆ.