ಮಂಗಳೂರು: ಇಲ್ಲಿನ ಕ್ಲಾಥ್ ಬ್ಯಾಂಕ್ ಸಂಸ್ಥೆಯಿಂದ
ವಾಮಂಜೂರಿನ ದೇವರಪದವು ಬಳಿಯ ಜ್ಯೋತಿನಗರದಲಿ ಹದಿನಾಲ್ಕು
ಮಕ್ಕಳಿಗೆ ಹೊಸ ರೆಡಿಮೇಡ್ ಬಟ್ಟೆಯನ್ನು ಕ್ಲೋತ್ಸ್ ಬ್ಯಾಂಕ್ ಅಧ್ಯಕ್ಷ ರೇಮಂಡ್
ಡೀಕೂನ ಮುಂದಾಳತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಸಹಾಯವನ್ನು
ಮಾಡಲು ಮನಸ್ಸಿದ್ದು ಯಾರಿಗೆ ಎಂದು ತಿಳಿಯದವರಿಗಾಗಿ
ಆಗಿದೆ. ನಾವು ಮಿಗತೆ ಇದ್ದವರಲ್ಲಿ
ಪಡೆದು ಅಗತ್ಯದವರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದ್ದೇವೆ. ಇ ದನ್ನು ಯಾರೂ
ಮಾಡಬಹುದು. ಅವರವರಿಗೆ ಮಾಡಲು ಆಗದವರು ನಮಗೆ
ತಿಳಿಸಿದರೆ ಫಲಾನುಭವಿಗಳನ್ನು ಹುಡುಕಿ ಅವರಿಗೆ ನಿಮ್ಮ
ದಾನವನ್ನು ಹೆಸರು ತಿಳಿಸಿ ಅಥವಾ
ಬಯಸಿದರೆ ಹೆಸರು ಗುಟ್ಟಾಗಿಸಿ ತಲುಪಿಸುತ್ತೇವೆ
ಅಂದರು.
ಈ ಸಂದರ್ಭದಲ್ಲಿ ಫಲಾನುಭವಿಗಳನ್ನು ತಲುಪಲು ಸಹಾಯ ಮಾಡುವ
ಸುಜಾತಾ ಶೆಟ್ಟಿ ಹಾಗೂ ಹರಿಣಿ
ಶೆಟ್ಟಿ,ಹಾಜರಿದ್ದರು. ರೇಣುಕ ಸ್ಸಾಗತಿಸಿದರು. ಶಂಶಾದ್ ವಂದಿಸಿದರು.
ಮೋಹನ್ದಾಸ್ ನಿರೂಪಿಸಿದರು.