ದುಬಾಯಿಯಲ್ಲಿ ಐತಿಹಾಸಿಕ ದಾಖಲೆಯಾದ ಯಕ್ಷಮಿತ್ರ ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದುಬಾಯಿಯಲ್ಲಿ ಐತಿಹಾಸಿಕ ದಾಖಲೆಯಾದ ಯಕ್ಷಮಿತ್ರ ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ

Share This
BUNTS NEWS NETWORK, ಯುಎಇ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಮೂರು ದಶಕಗಳಿಂದ ಕರಾವಳಿ ಕರ್ನಾಟಕದ ಗಂಡುಕಲೆ ತೆಂಕು ತಿಟ್ಟು ಮತ್ತು ಬಡಗುತಿಟ್ಟಿನ ವಿವಿಧ  ಯಕ್ಷಗಾನ  ಕಥಾ ಪ್ರಸಂಗಗಳು ಪ್ರದರ್ಶನವಾಗುತ್ತ ಬರುತಿದೆ. 1980 ದಶಕದಲ್ಲಿ ಡಾ. ಶಿವರಾಮ ಕಾರಂತರ ಯಕ್ಷಗಾನ ತಂಡದಿಂದ ಹಿಡಿದು ಇಲ್ಲಿಯವರೆಗೆ ಹಲವು ಪ್ರಸಿದ್ದ ಭಾಗವತರು, ಚಂಡೆ ಮದ್ದಲೆ ವಾದಕರು, ಹಿರಿಯ ಯಕ್ಷಗಾನ ಕಲಾವಿದರು ಯು... ವಿವಿಧ ವೇದಿಕೆಯಲ್ಲಿ ತಮ್ಮ ಕಲಾಸೇವೆಯ ಮೂಲಕ ಯಕ್ಷಗಾನ ಪ್ರೇಮಿಗಳ ಮನಗೆದ್ದಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಯಕ್ಷಮಿತ್ರರು ತಂಡ ಕಟ್ಟಿಕೊಂಡು ಪ್ರತಿವರ್ಷ ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನ ನೀಡುವುದರ ಮೂಲಕ ಸಾವಿರಾರು ಮಂದಿ ಪ್ರೇಕ್ಷರನ್ನು ಸೇಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಕ್ಷಮಿತ್ರರ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಲ ಕಲಾವಿದರನ್ನು ತರಭೇತಿ ನೀಡಿ ವೇದಿಕೆಯ ಮೇಲೆ ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಪ್ರಸಾದನ ತರಭೇತಿ ಶಿಬಿರ ಉದ್ಘಾಟನೆ: ಯಕ್ಷಮಿತ್ರರ ಆಶ್ರಯದಲ್ಲಿ ಆಯೋಜಿಸಲಾದ ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ 2018 ಜುಲೈ 13ನೇ ತಾರೀಕು ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ದುಬಾಯಿ ದೇರಾ ದಲ್ಲಿರುವ ಟ್ವಿನ್ ಟವರ್ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಯುತರುಗಳಾದ ದಯಾನಂದ್ ಹೆಬ್ಬಾರ್, ನೋಯಲ್ ಡಿ ಅಲ್ಮೇಡಾ, ಕೃಷ್ಣಕುಮಾರ್ ಐಲ್, ಧನುಂಜಯ ಶೆಟ್ಟಿಗಾರ್, ರಾಜೇಶ್ ಕುತ್ತಾರ್ ಮತ್ತು ಭವಾನಿಶಂಕರ್ ಶರ್ಮಾ ಉಪಸ್ಥಿತರಿದ್ದರು. ಮುಖ್ಯ ಸಂಘಟಕರಾದ ಶ್ರೀ ದಿನೇಶ ಶೆಟ್ಟಿ ಕೊಟ್ಟಿಂಜ ಸರ್ವರನ್ನು ಸ್ವಾಗತಿಸಿದರು. ಯಕ್ಷಗಾನ ತರಭೇತಿ ಶಿಬಿರದ ರುವಾರಿ ಯಕ್ಷಗಾನ ಕಲಾವಿದರು, ಗುರುಗಳು, ನಿರ್ದೇಶಕರಾದ ಶ್ರೀ ಶೇಖರ್ ಡಿ ಶೆಟ್ಟಿಗಾರ್ ರವರು ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು.

ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರು ಬಾಲ ಕಲಾವಿದರು ಮುಖವರ್ಣಿಕೆ ಕಾರ್ಯಗಾರದಲ್ಲಿ ನುರಿತ ಮತ್ತು ಹಿರಿಯ ಅನುಭವಿ ಕಲಾವಿದರಿಂದ ಪೂರ್ಣ ಮಾಹಿತಿ ಸಲಹೆ ಮತ್ತು ಸೂಚನೆಯಂತೆ ಪಾತ್ರಗಳಿಗೆ ತಕ್ಕಂತೆ ತಮ್ಮ ತಮ್ಮ ಮುಖ ವರ್ಣಿಕೆಯನ್ನು ತಾವೇ ಮಾಡಿಕೊಂಡು ವಿಶೇಷ ಅನುಭವ ಪಡೆದು ಸಂತಸಪಟ್ಟರು.

ಯಕ್ಷಗಾನದ ಉಡುಗೆ ತೊಡುಗೆಯನ್ನು ಕ್ರಮ ಬದ್ಧವಾಗಿ ಧರಿಸಿಕೊಳ್ಳುವ ಪ್ರಾತ್ಯಕ್ಷಿತೆ ಯನ್ನು ಶ್ರೀ ಶೇಖರ್ ಶೆಟ್ಟಿಗಾರ್ ರವರು ಸೂಕ್ಷ್ಮವಾಗಿ ವಿವರಿಸುತ್ತಾ ಜೊತೆಗೆ ಅಭರಣಗಳನ್ನು ಸಮಪ್ರ್ಕವಾದ ರೀತಿಯಲ್ಲಿ ದೇಹದ ವಿವಿಧ ಭಾಗಗಳಿಗೆ ತೊಡಿಸುವುದನ್ನು ಸಹ ತಿಳಿಸಿಕೊಟ್ಟರು.
ಮಧ್ಯಾಹ್ನದ ಭೋಜನದ ನಂತರ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪದ ಮುಖ್ಯ ಅತಿಥಿಗಳಾಗಿ ಶ್ರೀಯುತರುಗಳಾದ  ರವಿ ಶೆಟ್ಟಿಗಾರ್ ಕಾರ್ಕಳ, ಬಿ. ಕೆ. ಗಣೇಶ್ ರೈ, ಆನಂದ್ ಬೈಲೂರ್, ಯಶ್ ಶೆಟ್ಟಿ ರಾಜೇಶ್ ಶೆಟ್ಟಿ ದೇವಸ್ಯ ಇವರುಗಳು ಪಾಲ್ಗೊಂಡಿದ್ದರು. ಶ್ರೀ ದಿನೇಶ್ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಶೇಖ ಡಿ ಶೆಟ್ಟಿಗಾರ್ ಸಮಾರೋಪ ಭಾಷಣದಲ್ಲಿ ಯಕ್ಷ ಮಿತ್ರರ ತಂಡದ ಕಲಾವಿದರಿಗೆ ಅತ್ಯಂತ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ಮುಂದಿನ ದಿನಗಳಲ್ಲಿಯೂ ಸಹ ಇಂತಹ ಕಾರ್ಯಗಾರ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಹೆಚ್ಚು ಹೆಚ್ಚು ವಿಷಯಗಳಲ್ಲಿ ಪರಿಣಿತಿಯನ್ನು ಪಡೆಯುವಂತಾಗಬೇಕು ಎಂದು ತಿಳಿಸಿ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು.

ಕಾರ್ಯಗಾರದ ಸ್ಥಳಾವಕಾಶ ಮತ್ತು ಉಪಹಾರ, ಭೋಜನದ ಪ್ರಾಯೋಜಕತ್ವವನ್ನು ಶ್ರೀಯುತ ರವಿಶೆಟ್ಟಿಗಾರ್ ಕಾರ್ಕಳ ಮತ್ತು ಧನಂಜಯ ಶೆಟ್ಟಿಗಾರ್ ವಹಿಸಿಕೊಂಡಿದ್ದರು. ಯಕ್ಷಮಿತ್ರ ತಂಡದ ಸರ್ವ ಸದಸ್ಯರ ಪೂರ್ಣ ಸಹಕಾರದೊಂದಿಗೆ ದುಬಾಯಿಯಲ್ಲಿ ನಡೆದ ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ ಐತಿಹಾಸಿಕ ದಾಖಲೆಯಾಯಿತು.

Pages