ಬೆಂಗಳೂರು ಬಂಟರ ಸಂಘದ ಚುನಾವಣೆ: ಉಪೇಂದ್ರ ಶೆಟ್ಟಿ ಬಣಕ್ಕೆ ಭರ್ಜರಿ ಜಯ - BUNTS NEWS WORLD

ಬೆಂಗಳೂರು ಬಂಟರ ಸಂಘದ ಚುನಾವಣೆ: ಉಪೇಂದ್ರ ಶೆಟ್ಟಿ ಬಣಕ್ಕೆ ಭರ್ಜರಿ ಜಯ

Share This
BUNTS NEWS NETWORK, ಬೆಂಗಳೂರು: ಬೆಂಗಳೂರು ಬಂಟರ ಸಂಘದ 2018-20ನೇ ಸಾಲಿನ ಚುನಾವಣೆಯಲ್ಲಿ ಉಪೇಂದ್ರ ಶೆಟ್ಟಿ ಬಣವು [Team US] ಜಯ ಗಳಿಸಿದೆ.
ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಜುಲೈ 29ರ ಭಾನುವಾರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಎ. ಬಾಲಕೃಷ್ಣ ಶೆಟ್ಟಿ ಬಣ [Team ABC] ಹಾಗೂ ಉಪೇಂದ್ರ ಶೆಟ್ಟಿ ಬಣ [Team US] ಸ್ಪರ್ಧಿಸಿತ್ತು.

ಜುಲೈ 30ರಂದು ನಡೆದ ಚುನಾವಣೆಯ ಮತ ಏಣಿಕೆಯಲ್ಲಿ ಉಪೇಂದ್ರ ಶೆಟ್ಟಿ ಬಣಕ್ಕೆ ಹೆಚ್ಚಿನ ಮತಗಳು ಬಂದಿದ್ದು ಬೆಂಗಳೂರು ಬಂಟರ ಸಂಘದ ಎಲ್ಲಾ 21 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.
ಚುನಾವಣೆಯಲ್ಲಿ ಜಯಗಳಿಸಿದ ಉಪೇಂದ್ರ ಶೆಟ್ಟಿ ಬಣಕ್ಕೆ ಬಂಟ್ಸ್ ನ್ಯೂಸ್.ಕಾಂ ವತಿಯಿಂದ ಹಾರ್ದಿಕ ಅಭಿನಂದನೆಗಳು. ಉಪೇಂದ್ರ ಶೆಟ್ಟಿ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರು ಬಂಟರ ಸಂಘವು ಮತ್ತಷ್ಟು ಅಭಿವೃದ್ದಿ ಹೊಂದಲಿ ಹಾಗೂ ಬಂಟ ಸಮಾಜಕ್ಕೆ ಕೀರ್ತಿ ತರುವ ಕಾರ್ಯವಾಗಲೀ ಎಂದು ಈ ಮೂಲಕ ಹಾರೈಸುತ್ತೇವೆ.

Pages