BUNTS NEWS NETWORK, ಮಂಗಳೂರು: "ರಾಜ್ಯ ಯುವ ಬರಹಗಾರರ
ಒಕ್ಕೂಟ( ರಿ) ಬೆಂಗಳೂರು ಇವರು
ಜುಲೈ 1ರಂದು ಉರ್ವಸ್ಟೋರ್ ತುಳು ಭವನದ ಸಿರಿ
ಚಾವಡಿಯಲ್ಲಿ ತಮ್ಮ ಪ್ರಥಮ ರಾಜ್ಯ
ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ವಿವಿಧ
ಕ್ಷೇತ್ರದ ಸಾಧಕರಿಗೆ ಕುದ್ಮಲ್ ರಂಗರಾವ್ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪತ್ರಿಕೋದ್ಯಮ
ಕ್ಷೇತ್ರದ ಅನುಪಮ ಸೇವೆಗಾಗಿ ಅಮೃತ
ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ
ಮಾಣೂರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.