BUNTS NEWS NETWORK, ಬಂಟ್ವಾಳ: ಬಂಟರ ಸಂಘ ಸಿದ್ದಕಟ್ಟೆ ವಲಯ
ಇದರ 14ನೇ ವರ್ಷದ ಶೈಕ್ಷಣಿಕ
ಪ್ರೋತ್ಸಾಹಧನ ವಿತರಣ ಕಾರ್ಯಕ್ರಮ ಜೂ.24ರಂದು
ಸಿದ್ದಕಟ್ಟೆಯ ಅಕ್ಷಯ ಸಭಾಭವನದಲ್ಲಿ ಜರುಗಿತು.
ಬಂಟ್ವಾಳ
ತಾಲೂಕು ಬಂಟರ ಸಂಘದ ಅಧ್ಯಕ್ಷರಾದ
ವಿವೇಕ ಶೆಟ್ಟಿ ನಗ್ರಿಗುತ್ತು ಇವರು
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಿದ್ದಕಟ್ಟೆ ವಲಯ ಬಂಟರ ಸಂಘದ
ಅಧ್ಯಕ್ಷರಾದ ಶ್ರೀಧರ ಶೆಟ್ಟಿಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ
ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ,ಬಂಟ್ವಾಳ ತಾಲೂಕು
ಬಂಟರ ಸಂಘದ ಮಹಿಳಾ ವಿಭಾಗದ
ಅಧ್ಯಕ್ಷೆ ಆಶಾ ಪ್ರಸಾದ್ ರೈ,
ಅರಳ ವಲಯ ಬಂಟರ ಸಂಘದ
ಅಧ್ಯಕ್ಷೆ ರೂಪ ಶೆಟ್ಟಿ ಆಗಮಿಸಿದ್ದರು.
ವಲಯದ ವ್ಯಾಪ್ತಿಯ 8ರಿಂದ 12ನೇ ತರಗತಿಯವರೆಗಿನ
ಒಟ್ಟು 80 ವಿದ್ಯಾರ್ಥಿಗಳಿಗೆ 50000ರೂ. ಶೈಕ್ಷಣಿಕ ಪ್ರೋತ್ಸಾಹಧನವನ್ನು
ಸಂಘದ ವತಿಯಿಂದ ವಿತರಿಸಲಾಯಿತು. ವಿಷೇಷವಾಗಿ
ರಾಮಕೃಷ್ಣ ಚೌಟ ಮಾಂಗಜೆ, ಸರೋಜಿನಿ
ಶೆಟ್ಡಿ ಮತ್ತು ಮಕ್ಕಳು ಪೊಡುಂಬ,
ದೇಜಣ್ಣ ಶೆಟ್ಟಿ ಮತ್ತು ಮಕ್ಕಳು
ಗೋಳಿದೊಟ್ಡು, ಪದ್ಮರಾಜ ಬಲ್ಲಾಳ್ ಮವಂತೂರು,
ಮಂದಾರತಿ ಎಸ್ ಶೆಟ್ಡಿ ಸಿದ್ದಕಟ್ಟೆ
ಮತ್ತು ರಾಜೇಶ ಶೆಟ್ಟಿ ಕೊನೆರಬೆಟ್ಟು
ಇವರು ಕೊಡಮಾಡಿದ ಶೈಕ್ಷಣಿಕ ಪ್ರೋತ್ಸಾಹಧನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಲಯ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗಳಿಗೆ
ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಸಮಾಜ ಬಾಂಧವರನ್ನು ಗುರುತಿಸಿ
ಗೌರವಿಸಲಾಯಿತು.
ಸಿದ್ದಕಟ್ಟೆ
ವಲಯ ವ್ಯಾಪ್ತಿಯ ಮೂರು ಗ್ರಾಮಗಳಾದ ರಾಯಿ,
ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳು
ಅರಳ ವಲಯಕ್ಕೆ ಸೇರ್ಪಡೆ ಆಗಿರುವ
ಬಗ್ಗೆ ಮಾಹಿತಿ ನೀಡಲಾಯಿತು. SSLC
ಮತ್ತು PUC ನಂತರದ ಆಯ್ಕೆಗಳ ಬಗ್ಗೆ
ವಿವೇಕ ಶೆಟ್ಟಿಯವರು ಮಾಹಿತಿ ನೀಡಿದರು. ವೇದಿಕೆಯಲ್ಲಿ
ಸಂಘದ ಗೌರವಾಧ್ಯಕ್ಷರುಗಳಾದ ಪ್ರಫುಲ್ಲ ರೈ, ಗೋಪಿನಾಥ ರೈ,
ಸ್ಥಾಪಕಾಧ್ಯಕ್ಷರಾದ ರಾಮಣ್ಣ ರೈ, ಕಾರ್ಯದರ್ಶಿ
ಗಣೇಶ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರು ಪ್ರಾಸ್ತಾವಿಕ ಭಾಷಣದೊಂದಿಗೆ ಎಲ್ಲರನ್ನು ಸ್ವಾಗತಿದರು. ಕಾರ್ಯದರ್ಶಿ ವರದಿ ವಾಚಿಸಿದರು. ಮಂದಾರತಿ
ಶೆಟ್ಟಿ, ಆರಾಧನ,ರತೀಶ್ ಶೆಟ್ಟಿ,
ಖುಶಿ ಚೌಟ ವಿದ್ಯಾರ್ಥಿಗಳ ಪಟ್ಟಿ
ಓದಿದರು. ಸಂಘಟನಾ ಕಾರ್ಯದರ್ಶಿ ಸುರೇಶ
ಶೆಟ್ಟಿಯವರು. ವಂದಿಸಿದರು. ಜಯಶ್ರೀ ಚೌಟರವರು ಕಾರ್ಯಕ್ರಮ
ನಿರೂಪಿಸಿದರು.