BUNTS NEWS NETWORK, ಕಾರ್ಕಳ:
ಬೆಳ್ಮಣ್ ಸಮೀಪದ ನಂದಳಿಕೆ ಶ್ರೀ
ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ನಂದಳಿಕೆ ‘ಚಾವಡಿ
ಅರಮನೆ’ಗೆ ನಗರಾಭಿವೃಧ್ದಿ ಮತ್ತು
ವಸತಿ ಸಚಿವ ಯು.ಟಿ.ಖಾದರ್
ಭೇಟಿ ನೀಡಿದರು.
ನಂದಳಿಕೆ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋಧ್ಧಾರ ಹಾಗೂ ನಾಗಶಿಲೆ ಪ್ರತಿಷ್ಠಾಪಣೆ
ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಯು.ಟಿ.ಖಾದರ್ ನಂತರ
ಸುಮಾರು 800ವರ್ಷದಷ್ಟು ಹಳೆಯದಾದ ನಂದಳಿಕೆ
ಚಾವಡಿ ಅರಮನೆಗೆ ಭೇಟಿ ನೀಡಿದರು. ಈ ಸಂದರ್ಭ ಸಚಿವರು ಅರಮನೆಯಲ್ಲಿರುವ ಪ್ರಾಚೀನ ಕಾಲದ ಪಲ್ಲಕ್ಕಿ,
ಅರಸರ ಯುಧ್ಧ ಆಯುಧಗಳು ಮುಂತಾದುವುಗಳನ್ನು
ಕಂಡು ಹಾಗೂ ಚಾವಡಿ ಅರಮನೆಯ ಮರದ ಕೆತ್ತನೆಗಳಿಗೆ
ಮನ ಸೋತರು. ನಂತರ ಅಲ್ಲಿನ
ಆಡಳಿತ ಮೊಕ್ತೇಸರರಾದ ಹಿರಿಯರಾದ ಶ್ರೀ
ಸುಂದರ ರಾಮ ಹೆಗ್ಡೆ ರವರ
ಆರೋಗ್ಯ ವಿಚಾರಿಸಿ ಅವರಿಂದ ಆಶೀರ್ವಾದ ಪಡೆದರು.