ಕೆ. ಸೂರಜ್‍ ಶೆಟ್ಟಿಯ ಹೊಸ ಚಿತ್ರ “ನಾನ್‍’ವೆಜ್” ನಾಯಕ ನಟನಾಗಿ ಪ್ರಜ್ವಲ್ ಪ್ರಕಾಶ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕೆ. ಸೂರಜ್‍ ಶೆಟ್ಟಿಯ ಹೊಸ ಚಿತ್ರ “ನಾನ್‍’ವೆಜ್” ನಾಯಕ ನಟನಾಗಿ ಪ್ರಜ್ವಲ್ ಪ್ರಕಾಶ್

Share This
BUNTS NEWS NETWORK, ಮಂಗಳೂರು: ಎಕ್ಕಸಕ, ಪಿಲಿಬೈಲ್ ಯಮುನಕ್ಕ ಮತ್ತು ಅಮ್ಮೆರ್ ಪೊಲೀಸ್ ಎಂಬ ಮೂರು ಯಶಸ್ವಿ ಚಿತ್ರಗಳನ್ನು ನೀಡಿರುವ ಕೆ. ಸೂರಜ್ ಶೆಟ್ಟಿ ಅವರ ಮುಂದಿನ ಚಿತ್ರ ನಾನ್ವೆಜ್ಗೆ ಈಗಲೇ  ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅದರಲ್ಲಿ ಭರವಸೆಯ  ಪ್ರತಿಭಾನ್ವಿತ ನಟ ಪ್ರಜ್ವಲ್ ಪ್ರಕಾಶ್ ಅವರು  ನಟಿಸುತ್ತಿದ್ದಾರೆ. ಬಾರಿ ಸೂರಜ್ ಕನ್ನಡದಲ್ಲಿ  ಸಿನಿಮಾ ಮಾಡುತ್ತಿದ್ದಾರೆ.
ಕೋಸ್ಟಲ್ವುಡ್ ಓರ್ವ ಭರವಸೆಯ ಯುವ ನಟನಾಗಿರುವ ಪ್ರಜ್ವಲ್ ಅವರು  ಶಾಲಾ ಕಾಲೇಜು ದಿನಗಳಲ್ಲೇ ನಟನೆ ಕುರಿತು  ವಿಶೇಷ ಆಸಕ್ತಿ ಹೊಂದಿದ್ದು, ಅದನ್ನು ತಂದೆ  ಮತ್ತು ತಾಯಿ ಬೆಳೆಸಿದ ಪರಿಣಾಮ ಹಲವು  ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಿತ್ರೋದ್ಯಮಿಯಾಗಿರುವ ಅಪ್ಪ ಪ್ರಕಾಶ್  ಪಾಂಡೇಶ್ವರ ಅವರು ಪ್ರಜ್ವಲ್ನನ್ನು ಮೊದಲು ತನ್ನ ಚಾಲಿಪೋಲಿಲು ಚಿತ್ರದ ಮೂಲಕ ಕೋಸ್ಟಲ್ವುಡ್ಗೆ  ಪರಿಚಯಿಸಿದರು. ಬಳಿಕ ದಬಕ್ ದಬ ಐಸಾ ಚಿತ್ರದಲ್ಲಿ  ನಟಿಸಿರುವ ಪ್ರಜ್ವಲ್ ಬಳಿಕ ದೇವದಾಸ್ ಕಾಪಿಕಾಡ್ ಅವರ ಚಂಡಿಕೋರಿ ಮತ್ತು ಬರ್ಸ ಚಿತ್ರದಲ್ಲೂ  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ರಘು ಶೆಟ್ಟಿ ಅವರ ಅರ್ಜುನ್ ವೆಡ್ಸ್ ಅಮೃತಾ  ಸಿನಿಮಾದಲ್ಲೂ ಇವರಿಗೆ ಅವಕಾಶ ಸಿಕ್ಕಿತ್ತು. ಅದರ ಯಶಸ್ಸಿನ ಬಳಿಕ  `ಭೂಮಿಕಾಚಿತ್ರದಲ್ಲಿ ಆ್ಯಂಟಿ ಹೀರೋ ಪಾತ್ರದಲ್ಲಿ ನವೀನ್ ಡಿ ಪಡೀಲ್ ಜತೆ ನಟಿಸಿದ್ದಾರೆ.

ಸೂರಜ್ ಶೆಟ್ಟಿ ಅವರ ಬಹುನಿರೀಕ್ಷಿತ ಮತ್ತು ಈಗ ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಮ್ಮೆರ್ ಪೊಲೀಸ್ ಚಿತ್ರದಲ್ಲಿ  ಹೀರೋಗೆ ಸಾಥ್ ನೀಡುವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರಜ್ವಲ್, ತನ್ನ ನಟನೆಯಿಂದ ಭರ್ಜರಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಜೋಡಿಗೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಮುಂದೆ ಅವರು ನಾನ್ವೆಜ್ಗಾಗಿ ಸಿದ್ಧರಾಗುತ್ತಿದ್ದಾರೆ.

ಸಿನಿಮಾಕ್ಕೆ ಅಗತ್ಯವಾಗಿರುವ ಸ್ವಿಮ್ಮಿಂಗ್, ಜಿಮ್, ಡ್ಯಾನ್ಸ್ ಮುಂತಾದವುಗಳ ತರಬೇತಿ ಪಡೆದಿದ್ದು, ಓರ್ವ  ಹೀರೋಗೆ ಬೇಕಾದ ಎಲ್ಲ ಅರ್ಹತೆ ಮತ್ತು ಯೋಗ್ಯತೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಈಗ ನಾನ್ವೆಜ್ಗಾಗಿ ಭರ್ಜರಿ ಹೋಂವರ್ಕ್ ಮಾಡುತ್ತಿದ್ದಾರೆ.

ಪ್ರಜ್ವಲ್ ಶ್ರೀನಿವಾಸ್ ಇನ್ಸಿಟ್ಯೂಟ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ತುಳುವಿನಲ್ಲಿ ಅವರಿಗೆ ಮತ್ತಷ್ಟು ಅವಕಾಶಗಳು ದೊರೆಯುತ್ತಿವೆ. ಈಗ ಸೂರಜ್ ಶೆಟ್ಟಿ ಅವರು ಕನ್ನಡದಲ್ಲಿ ನಿರ್ಮಿಸುತ್ತಿರುವ ನಾನ್ವೆಜ್ಗೆ ನಾಯಕ ನಟನಾಗಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿವೆ.

Pages