ಮಂಗಳೂರು: ಕೆ. ಸೂರಜ್ ಶೆಟ್ಟಿ ನಿರ್ದೇಶನದ ‘ಅಮ್ಮೆರ್ ಪೊಲೀಸಾ’
ತುಳು ಸಿನಿಮಾವು ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಜೂ.22ರಂದು ಬಿಡುಗಡೆಗೊಂಡಿತು.
ಲಕುಮಿ ಸಿನಿ ಕ್ರಿಯೆಷನ್ಸ್
ನಿರ್ಮಾಣದಲ್ಲಿ ಸಿದ್ದವಾಗಿರುವ ಅಮ್ಮೆರ್ ಪೊಲೀಸಾ ಸಿನಿಮಾಕ್ಕೆ ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿದ್ದಾರೆ.
ಚಿತ್ರವು ಸಂಪೂರ್ಣ ಸಚಿನ್ ಎಸ್ ಶೆಟ್ಟಿ ಅವರ ಕ್ಯಾಮೇರಾ ಕಣ್ಣಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ರಾಜೇಶ್
ಬಿ ಶೆಟ್ಟಿ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ,
ಅರವಿಂದ ಬೋಳಾರ, ಮೋಹನ ಕೊಪ್ಪಲಕಾಡು, ಸಂದೀಪ್ ಶೆಟ್ಟಿ ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.