ಬೆಂಗಳೂರು: ನೇರ, ನಿಷ್ಠುರ, ನಿರ್ಭಿಡೆಯ ರಾಷ್ಟ್ರೀಯವಾದಿ
ಚಿಂತನೆಯ ಹಿರಿಯ ಪತ್ರಕರ್ತ ವಿಶ್ವವಾಣಿ ದಿನಪತ್ರಿಕೆಯ ಮಂಗಳೂರು ವಿಭಾಗ ಮುಖ್ಯಸ್ಥ ಜಿತೇಂದ್ರ ಕುಂದೇಶ್ವರ
ಅವರು ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.
ನಾರದ ಜಯಂತಿಯ ಪ್ರಯುಕ್ತ
ವಿಶ್ವ ಸಂವಾದ ಕೇಂದ್ರ ಕರ್ನಾಟಕ ಕರ್ನಾಟಕದ ಹಿರಿಯ ಪತ್ರಕರ್ತರಾಗಿದ್ದ ತಿ.ತಾ.ಶರ್ಮ ಹಾಗೂ ಬೆ.ಸು.ನಾ.ಮಲ್ಯರ
ನೆನಪಿನಲ್ಲಿ ಮಾಧ್ಯಮ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮ ನಡೆಸುತ್ತಿದ್ದು ಈ ಸಂದರ್ಭ ಮಂಗಳೂರು ವಿಭಾಗ
ಮುಖ್ಯಸ್ಥ ಜಿತೇಂದ್ರ ಕುಂದೇಶ್ವರ ಹಾಗೂ ಹಸಿರುವಾಣಿ ಪಾಕ್ಷಿಕ ಸಂಪಾದಕ ರಾಧಾಕೃಷ್ಣ ಭಡ್ತಿ ಅವರಿಗೆ
ಗೌರವ ಸನ್ಮಾನ ನಡೆಯಲಿದೆ.
ಜೂ.24ರಂದು ಜಯನಗರದಲ್ಲಿರುವ
ರಾಷ್ಟೋತ್ಥಾನ ಶಾರೀರಿಕ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.