BUNTS NEWS, ಮುಂಬಾಯಿ: ಬಂಟರ ಸಂಘ ವಸಾಯಿ-ಡಹಾಣು ಪ್ರಾದೀಶಿಕ ಸಮಿತಿಯ
ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ
ನೆರವು ವಿತರಣಾ ಸಮಾರಂಭವು ಇತ್ತೀಚೆಗೆ
ನಾಲಾಸೋಪಾರ ಪೂರ್ವದ ರೀಜೆನ್ಸಿ ಸಭಾಗೃಹದಲ್ಲಿ
ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ
ಎಸ್. ಪಯ್ಯಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಬಂಟರ ಸಂಘದ ಟ್ರಷ್ಟಿ ಕರ್ನಿರೆ
ವಿಶ್ವನಾಥ ಶೆಟ್ಟಿ, ಸಂಘದ ಶಿಕ್ಷಣ
ಮತ್ತು ಸಮಾಜ ಕಲ್ಯಾಣ ಸಮಿತಿಯ
ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್
ಶೆಟ್ಟಿ, ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಪ್ರಾದೇಶಿಕ ಸಮಿತಿಯ
ಸಮನ್ವಯಕ ಡಾ. ಪ್ರಭಾಕರ ಶೆಟ್ಟಿ,
ಶಿಕ್ಷಣ ಮತ್ತು ಸಮಾಜ ಕಲ್ಯಾಣ
ಸಮಿತಿಯ ಕಾರ್ಯದರ್ಶಿ ಭಾಸ್ಕರ ವೈ ಶೆಟ್ಟಿ,
ಸಂಚಾಲಕ ಶಶಿಧರ್ ಕೆ ಶೆಟ್ಟಿ,
ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ
ಎ. ಶೆಟ್ಟಿ ಮೊದಲಾದವರು ಆರ್ಥಿಕ
ನೆರವು ವಿತರಣೆ ಬಗ್ಗೆ ಮಾತನಾಡಿದರು.
ಸಮಿತಿಯ
ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ
ಸ್ವಾಗತಿಸಿದರು. ಪ್ರವೀಣ್ ಶೆಟ್ಟಿಇ ಕಣಂಜಾರ್
ಕಾರ್ಯಕ್ರಮವನ್ನು ನಿರೂಪಿಸಿದ್ದು ನಾರಾಯಣ ಶೆಟ್ಟಿ ಧನ್ಯವಾದಗೈದರು.
ಈ ಸಮಾರಂಭದಲ್ಲಿ ವಸಾಯಿಯಿಂದ
ವಿರಾರ್ ತನಕದ ಸಮಾಜದ ಮಕ್ಕಳಿಗೆ,
ವಿಧವೆಯರಿಗೆ, ವಿಕಲಚೇತನರಿಗೆ ಸಹಾಯವನ್ನು ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು.
ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ವಿಜಯ ಶೆಟ್ಟಿ, ಜೊತೆ ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ, ರತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಎ. ಶೆಟ್ಟಿ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ
: ದಿನೇಶ್ ಕುಲಾಲ್