‘ಪಟ್ಲ ಸಂಭ್ರಮ’ದ ಪೂರ್ವಭಾವಿ ಸಭೆ: ಕುಬಣೂರುಗೆ ಮರಣೋತ್ತರ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

‘ಪಟ್ಲ ಸಂಭ್ರಮ’ದ ಪೂರ್ವಭಾವಿ ಸಭೆ: ಕುಬಣೂರುಗೆ ಮರಣೋತ್ತರ ಪ್ರಶಸ್ತಿ

Share This
BUNTS NEWS, ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಮೇ 27ರಂದು ಭಾನುವಾರ ಅಡ್ಯಾರ್ ಗಾರ್ಡ್ನಲ್ಲಿ ನಡೆಯುವ ಯಕ್ಷಧ್ರುವ ಪಟ್ಲ ಸಂಭ್ರಮ 2018 ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಓಶಿಯನ್ ಪಲ್ರ್ಸ್ ಹೊಟೇಲ್ ಸಭಾಂಗಣದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಪಟ್ಲ ಫೌಂಡೇಶನ್ ಟ್ರಸ್ಟ್  ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ರಚಿಸಿರುವ  30 ಘಟಕಗಳಿಗೆ ಜವಾಬ್ದಾರಿಯನ್ನು ಹಂಚಿಕೊಡಲಾಯಿತು. ಕಾರ್ಯಕ್ರಮದಲ್ಲಿ ಪಟ್ಲ ಪ್ರಶಸ್ತಿ, ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿಯ ಜತೆಗೆ ವರ್ಷ ಮರಣೋತ್ತರ  ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಯಿತು.

ಕಳೆದ ವರ್ಷ ಕಟೀಲು ನಾಲ್ಕನೇ ಮೇಳದಲ್ಲಿ  ಪ್ರಧಾನ ಭಾಗವತರಾಗಿದ್ದÀ ಕುಬಣೂರು  ಶ್ರೀಧರ ರಾವ್ ನಿಧನರಾಗಿದ್ದು, ಇದೀಗ ಅವರ  ಸ್ಮರಣಾರ್ಥ ಅವರ ಕುಟುಂಬಸ್ಥರಿಗೆ ಮರಣೋತ್ತರ  ಪ್ರಶಸ್ತಿಯ ಜತೆಗೆ 25 ಸಾವಿರ ರೂ ನೀಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಸಭೆಯಲ್ಲಿ ಕತಾರ್ ಘಟಕದ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲ್, ಪ್ರಭಾಕರ ಜೋಶಿ, ನಿಟ್ಟೆಗುತ್ತು  ರವಿರಾಜ್ ಶೆಟ್ಟಿ , ಸವಣೂರು ಸೀತಾರಾಮ ರೈ, ಭುಜಬಲಿ, ನಿತ್ಯಾನಂದ ಶೆಟ್ಟಿ, ಡಾ. ಮನುರಾವ್, ಸಿ. ಸುದೇಶ್ ಕುಮಾರ್, ಆರತಿ ಆಳ್ವ ,ಜಯಶೆಟ್ಟಿ ಪಡುಬಿದ್ರಿ, ಸತೀಶ್ ಶಟ್ಟಿ ವಾಮಂಜೂರು, ಪ್ರೇಮನಾಥ್ ಶೆಟ್ಟಿ ಪಡುಬಿದ್ರಿ, ಗೋಪಾಲ ಶೆಟ್ಟಿ ಕಾರ್ಕಳ, ರಾಜೀವ್ ಪೂಜಾರಿ ಕೈಕಂಬ, ಜಗದೀಶ್ ಶೆಟ್ಟಿ ಉಪ್ಪಿನಂಗಡಿ ಪ್ರದೀಪ್ ಆಳ್ವ , ಗಿರೀಶ್ ಶೆಟ್ಟಿ ಕಟೀಲ್, ಪಟ್ಲ ದಾಮೋದರ ಶೆಟ್ಟಿ, ಸಂತೋಷ್ ಶೆಟ್ಟಿ ಸುರತ್ಕಲ್  ಹಾಗೂ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ  ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ  ಪುರುಷೋತ್ತಮ ಭಂಡಾರಿ ಅಡ್ಯಾರ್  ಕಾರ್ಯಕ್ರಮ  ನಿರ್ವಹಿಸಿದರು.

Pages