ಡಾ| ಬಿ. ಆರ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ವಿಶೇಷ ಸಭೆ - BUNTS NEWS WORLD

ಡಾ| ಬಿ. ಆರ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ವಿಶೇಷ ಸಭೆ

Share This
BUNTS NEWS, UAE: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ವಿಶೇಷ ಸಭೆ 2018 ಮೇ 12 ರಂದು ಬೆಳಿಗ್ಗೆ 11 ಗಂಟೆಯಿಂದ ಯು... ಬಂಟ್ಸ್ ಮಹಾ ಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅಬುಧಾಬಿಯಲ್ಲಿ ನಡೆಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಮುಖದಲ್ಲಿ ಬಂಟ ವಿಭೂಷಣ ಪ್ರಶಸ್ತಿ ಪುರಸ್ಕೃತೆ ಡಾ. ಸುನಿತಾ ಶೆಟ್ಟಿಯವರು, ಮತ್ತು ಗಲ್ಫ್ ರಾಷ್ಟ್ರದ ವಿವಿಧ ಭಾಗಗಳಿಂದ ಅಗಮಿಸಿದ ಬಂಟ್ಸ್ ಸಂಘದ ಅಧ್ಯಕ್ಷರುಗಳು ಹಾಗೂ ಯು... ಬಂಟ್ಸ್ ಸಲಹಾ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.
ಯು... ಬಂಟ್ಸ್ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ ವಿಶ್ವ ಬಂಟರ ಒಕ್ಕೂಟ ಪ್ರಾಥಮಿಕ ಹಂತದ ಪೂರ್ಣ ಮಾಹಿತಿಯನ್ನು ಸಭೆಯಲ್ಲಿ ನೀಡಿದರು. ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರು ವಿಶ್ವ ಬಂಟರ ಒಕ್ಕೂಟ ಧ್ಯೇಯವಾಕ್ಯ "ಬಂಟರ ನಡಿಗೆ ಪ್ರಗತಿಯ ಕಡೆಗೆ" ನಡೆದು ಬಂದ ಹಾದಿಯ ಸಮಗ್ರ ಚಿತ್ರಣವನ್ನು ಸಭೆಗೆ ತಿಳಿಸಿ ನೂತನ ಕಾರ್ಯ ಯೋಜನೆಗಳನ್ನು ವಿವರಿಸಿ ಕಾರ್ಯರೂಪಕ್ಕೆ ತರುವಲ್ಲಿ ಸರ್ವರ ಸಹಕಾರ ಕೋರಿದರು. ಪ್ರಸ್ತುತ ವಿಶ್ವದ ವಿವಿಧ ದೇಶಗಳಲ್ಲಿರುವ ಒಟ್ಟು 106 ಬಂಟರ ಸಂಘಟನೆಗಳು ಗಲ್ಫ್ ದೇಶದಲ್ಲಿ 6 ಬಂಟರ ಸಂಘಗಳಿದ್ದು ಎಲ್ಲಾ ಬಂಟರ ಸಂಘಗಳು ವಿಶ್ವ ಬಂಟರ ಒಕ್ಕೂಟದ ಆಶ್ರಯದಲ್ಲಿ ನೋಂದಣಿಯಾಗಿದ್ದು ಕಾರ್ಯ ನಿರ್ವಹಿಸುತ್ತಿದೆ.

ಗಲ್ಫ್ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸದಸ್ಯರಲ್ಲಿ ಬಹರೈನ್ ಬಂಟ್ಸ್ ಅಧ್ಯಕ್ಷರು ಶ್ರೀ ನಾಗೇಶ್ ಶೆಟ್ಟಿ ಮತ್ತು ಶ್ರೀಮತಿ ಶುಭಾ ನಾಗೇಶ್ ಶೆಟ್ಟಿ, ಒಮಾನ್ ಬಂಟ್ಸ್ ಅಧ್ಯಕ್ಷ ಶ್ರೀ ಶಶಿಧರ್ ಶೆಟ್ಟಿ, ಕುವೈತ್ ಬಂಟ್ಸ್ ಅಧ್ಯಕ್ಷ ಶ್ರೀ ಶೇಖರ್ ಶೆಟ್ಟಿ, ಸೌದಿಯಾ ಬಂಟ್ಸ್ ಪ್ರತಿನಿಧಿ ಶ್ರೀ ಮಹೇಶ್ ಹೆಗ್ಡೆ ಮಾತ್ತು ಡಾ| ಪೂರ್ಣಿಮಾ ಮಹೇಶ್ ಹೆಗ್ಡೆ, ಮುಂಬೈನಿಂದ ಶ್ರೀ ಕರ್ನೂರ್ ಮೋಹನ್ ರೈ, ಮಂಗಳೂರಿನಿದ ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್, ಯು... ಬಂಟ್ಸ್ ಸಲಹಾ ಸಮಿತಿ ಸದಸ್ಯರಾದ ಶ್ರೀಯುತರುಗಳಾದ ಸುಧೀರ್ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಶ್ರೀಮತಿ ಭಾಗ್ಯ ಪ್ರೇಮನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ ವೀಣಾಧರ್ ಶೆಟ್ಟಿ, ಬಿ. ಕೆ. ಗಣೇಶ್ ರೈ, ಶ್ರೀಮತಿ ಜ್ಯೋತಿಕಾ  ಹರ್ಷಶೆಟ್ಟಿ ಹಾಗೂ ಯು... ಬಂಟ್ಸ್ 2019ನೇ ಸಾಲಿನ ಬಂಟ್ಸ್ 2019ನೇ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂತೋಷ್ ರೈ, ರವಿ ಶೆಟ್ಟಿ, ಸುಧೀರ್ ರೈ ಮತ್ತು ಶ್ರೀಮತಿ ರಾಧಿಕಾ ಸುಧೀರ್ ರೈ, ಉದ್ಯಮಿಗಳಾದ ಶೇಖರ್ ಶೆಟ್ಟಿ, ಸುಂದರ್ ಶೆಟ್ಟಿ, ಹರ್ಷ ಶೆಟ್ಟಿ, ಸಾಜನ್ ಶೆಟ್ಟಿ ಮತ್ತು ಶ್ರೀಮತಿ ಸೀಮಾ ನಿರ್ಮನ್ ಶೆಟ್ಟಿ ಸಭೆಯಲ್ಲಿ ಪಾಲ್ಗೋಂಡಿದ್ದರುವರದಿ: ಬಿ. ಕೆ. ಗಣೇಶ್ ರೈ - ಯು... ಸುದ್ದಿ ಕೃಪೆ: ವಿಜಯಕುಮಾರ್ ಶೆಟ್ಟಿ ಮಜಿಬೈಲು [UAE]

Pages