BUNTS NEWS, ಕತಾರ್: ಬಂಟ್ಸ್ ಕತಾರ್ ತನ್ನ
ಐದನೆಯ ವಾರ್ಷಿಕೋತ್ಸವವನ್ನು ಕತಾರ್ನ ಡಿಪಿಎಸ್ ಆಡಿಟೋರಿಯಂನಲ್ಲಿ
ಮೇ 4ರಂದು ಜರಗಿತು.
ಈ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಸಾಧಕ
ವಿದ್ಯಾರ್ಥಿಗಳನ್ನು ಗೌರವಿಸಿ ಸಮ್ಮಾನಿಸಲಾಯಿತು. ಬಂಟ್ಸ್
ಕತಾರ್ನ ಸದಸ್ಯರ ಸಾಧನೆ
ಮತ್ತು ಚಟುವಟಿಕೆಗಳ ವಿವರವನ್ನೊಳಗೊಂಡ ಗರಿ
ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಪ್ರಕಾಶ್ಚಂದ್ರ
ಅಜಿಲ ಸ್ಮಾರಕ ಸೇವಾ
ಸಂಪದ ಪ್ರಶಸ್ತಿಯನ್ನು ಉತ್ತಮ ಸಮುದಾಯ ಸೇವೆಗಾಗಿ ಅಬ್ದುಲ್ಲ
ಮೋನು ಅವರಿಗೆ ಪ್ರದಶಿಸಲಾಯಿತು.
ಬಳಿಕ ಸಂಘದ ಸದಸ್ಯರಿಂದ ನೃತ್ಯ ಸಹಿತ ವಿವಿಧ
ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವಿಶೇಷವಾಗಿ ಅಲಂಕರಿಸಿ ರಂಗಸ್ಥಳದಲ್ಲಿ ಪಟ್ಲ ಸತೀಶ್ ಶೆಟ್ಟಿ
ಭಾಗವತಿಕೆಯಲ್ಲಿ ಯಕ್ಷಗಾನ ಪ್ರದರ್ಶನಗೊಂಡಿತು.
ಕದ್ರಿ ನವನೀತ್ ಶೆಟ್ಟಿ ಸಹಿತ
ಇತರ ಖ್ಯಾತ ಕಲಾವಿದರು ಪಾಲ್ಗೊಂಡರು.
ಈ ಸಂದರ್ಭ ಜರಗಿದ ಸಾರ್ವಜ£ಕ ಸಮಾರಂಭದಲ್ಲಿ ಹಲವಾರು
ಗಣ್ಯರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಐಸಿಸಿ ಅಧ್ಯಕ್ಷ ಮಿಲನ್ ಅರುಣ್,
ವಿಶೇಷ ಗೌರವ ಅತಿಥಿಗಳಾಗಿ ಪುಣೆಯ
ಸಿಂಬೋಸಿಸ್ ಕಾಲೇಜ್ ಆಫ್ ಲಾ
ಇದರ ನಿರ್ದೇಶಕಿ ಡಾ. ಶಶಿಕಲಾ ಗುರುಪುರ,ಗೌರವ ಅತಿಥಿಯಾಗಿ ಸತೀಶ್
ಶೆಟ್ಟಿ ಪಟ್ಲ,
ನವನೀತ್ ಶೆಟ್ಟಿ ಕದ್ರಿ, ಸ್ಥಾಪಕಾಧ್ಯಕ್ಷ
ಮೂಡಂಬೈಲ್ ರವಿ ಶೆಟ್ಟಿ. ಜಪ್ಪು ಚಿದಾನಂದ
ನಾೈಕ್, ಬಿ.
ಆರ್. ಸತೀಶ್, ಇತರ ಆಡಳಿತ
ಸಮಿತಿ ಸದಸ್ಯರು ಉಪಸ್ಥಿತರಿದ್ದರು.