ಮೂಡಂಬೈಲು ರವಿ ಶೆಟ್ಟಿ ಅವರಿಗೆ ಬಂಟ್ಸ್ ಕತಾರ್ ಸನ್ಮಾನ - BUNTS NEWS WORLD

 

ಮೂಡಂಬೈಲು ರವಿ ಶೆಟ್ಟಿ ಅವರಿಗೆ ಬಂಟ್ಸ್ ಕತಾರ್ ಸನ್ಮಾನ

Share This
BUNTS NEWS, ಕತಾರ್: ಕೊಲ್ಲಿ ರಾಷ್ಟ್ರ ಕತಾರ್ ಬಂಟ್ಸ್ ಕತಾರ್ ಸಂಘಟನೆಯ  ಪಂಚಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕತಾರ್ ಪ್ರತಿಪ್ಠಿತ ಎಟಿಎಸ್ ಗ್ರೂಪ್ ಆಡಳಿತ ನಿರ್ದೇಶಕ, ಮೂಡಂಬೈಲು ರವಿ ಶೆಟ್ಟಿ ಹಾಗೂ ಅವರ ಪತ್ನಿ ಜ್ಯೋತಿ  ರವಿ ಶೆಟ್ಟಿ ದಂಪತಿಗಳನ್ನು  ಗೌರವಿಸಲಾಯಿತು.
ಈ ಸಂದರ್ಭ ಪುಣೆ ಸಿಂಬೋಸಿಸ್ ಸ್ಕೂಲ್  ಆಫ್ ಲಾ ನಿರ್ದೇಶಕಿ ಡಾ.ಶಶಿಕಲಾ ಶೆಟ್ಟಿ ಗುರುಪುರ ಮಾತನಾಡಿ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕತಾರ್ನಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ ಖ್ಯಾತ ಉದ್ಯಮಿ, ಕಲಾ ಪೋಷಕ, ಕ್ರೀಡಾ ಪೋಷಕ, ಸಾಮಾಜಿಕ ಸೇವಾ ಚಟುವಟಿಕೆಗಳ ಮುಂಚೂಣಿಯ ನಾಯಕ ರವಿ ಶೆಟ್ಟಿಯವರು ಕರ್ನಾಟಕ ಸಂಘ, ತುಳುಕೂಟ, ಬಂಟ್ಸ್ ಕತಾರ್ ಮೊದಲಾದ ಸಂಘಟನೆಗಳ ಮುಂಚೂಣಿ ನಾಯಕರಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಅಭಿನಂದಿಸಿದರು. ಅತಿಥಿ ಸತ್ಕಾರ, ಕಲಾವಿದರಿಗೆ ಪ್ರೋತ್ಸಾಹ, ನಿರಂತರ ಚಟುವಟಿಕೆಗಳ ಮಧ್ಯೆ ಯಶಸ್ವೀ ಉದ್ಯಮಿಯಾಗಿ  ನೂರಾರು ತುಳುವರಿಗೆ ಉದ್ಯೋಗದಾತರಾಗಿರುವ ರವಿ ಶೆಟ್ಟಿ ದಂಪತಿಗಳ ಸಾಧನೆಯನ್ನು ಖ್ಯಾತ ಭಾಗವತ ಪಟ್ಲ ಗುತ್ತು ಸತೀಶ್ ಶೆಟ್ಟಿಯವರು ಸ್ಮರಿಸಿ ಹಾರೈಸಿದರು.

ದೋಹ  ಕತಾರ್ ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷೆ  ಮಿಲನ್ ಅರುಣ್, ಹವ್ಯಾಸಿ ಯಕ್ಷಗಾನ ಕಲಾವಿದ ಕದ್ರಿ ನವನೀತ ಶಟ್ಟಿ, ಯಂ ಪಲಾಂಜಿ ಸಂಸ್ಥೆಯ ಜನರಲ್ ಮ್ಯಾನೇಜರ್ ಜಪ್ಪು ಚಿದಾನಂದ ನಾಯ್ಕ, ಕತಾರ್ ಡಿಸೈನ್ ಕನ್ಸ್ಸೋರ್ಟಿಯಂ ಸಂಸ್ಥೆಯ ಬಿ. ಆರ್. ಸತೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಬಂಟ್ಸ್ ಕತಾರ್ ಅಧ್ಯಕ್ಷ ನವನೀತ ಶೆಟ್ಟಿ ಸ್ವಾಗತಿಸಿದರು. ರಾಮ್ ಮೋಹನ್ ರೈ ಅಭಿನಂದನಾ ಭಾಷಣ ಮಾಡಿದರು. ಅಮತಿ ಅಕ್ಷಿಣಿ ಶೆಟ್ಟಿ ಮತ್ತು ನವೀನ್ ಶೆಟ್ಟಿ ಇರುವೈಲು ಕಾರ್ಯಕ್ರಮ ನಿರೂಪಿಸಿದರು.

ಸಮುದಾಯದ ಸದಸ್ಯರಿಂದ ಭಾರತೀಯ ಹಬ್ಬಗಳ ವೈಶಿಷ್ಟ್ಯವನ್ನು ವಿವಿಧ ನೃತ್ಯಗಳಿಂದ ಅನಾವರಣ ಗೊಳಿಸಲಾಯಿತು. ಪಟ್ಲ ಸತೀಶ್ ಶೆಟ್ಟಿ ನಿರ್ದೇಶನದಲ್ಲಿ ಖ್ಯಾತ ಕಲಾವಿದರಿಂದಚಂದ್ರಹಾಸ  ಚರಿತ್ರೆ” ಯಕ್ಷಗಾನ ಪ್ರದರ್ಶನ ನೆರವೇರಿತು.
ಉಪಾಧ್ಯಕ್ಷ  ರಾಮಚಂದ್ರ ಶೆಟ್ಟಿ  ಪೇಜಾವರ  ಪ್ರಧಾನ ಕಾರ್ಯದರ್ಶಿ ರೋಶನ್ ಶೆಟ್ಟಿ , ಕೋಶಾಧಿಕಾರಿ  ಧನಂಜಯ ಶೆಟ್ಟಿ ಉಪಸ್ಥಿತರಿದ್ದರು.  ಸಾಂಸ್ಕೃತಿಕ ಕಾರ್ಯದರ್ಶಿ  ಚೈತಾಲಿ ಉದಯ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಕತಾರ್ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ಲಾ ಮೋನು ಅವರಿಗೆ ಪ್ರತಿಷ್ಠಿತ ಬಂಟ್ಸ್ ಕತಾರ್ ಪ್ರಕಾಶ್ ಚಂದ್ರ ಅಜಿಲ ಸ್ಮರಣಾರ್ಥ ಸೇವಾ ಸಂಪದ ಪ್ರಶಸ್ತಿ 2018 ನೀಡಿ  ಗೌರವಿಸಲಾಯಿತು.

Pages