ಪಿಯು ರ್ಯಾಂಕ್ ವಿಜೇತೆ ಬಿಂದಿಯಾ ಶೆಟ್ಟಿಗೆ ಪಟ್ಲ ಸಂಭ್ರಮದಲ್ಲಿ ಚಿನ್ನದ ಪದಕ, ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಿಯು ರ್ಯಾಂಕ್ ವಿಜೇತೆ ಬಿಂದಿಯಾ ಶೆಟ್ಟಿಗೆ ಪಟ್ಲ ಸಂಭ್ರಮದಲ್ಲಿ ಚಿನ್ನದ ಪದಕ, ಸನ್ಮಾನ

Share This
BUNTS NEWS, ಮಂಗಳೂರು: ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜ್‍ನಲ್ಲಿ 591 ಅಂಕಗಳೊಂದಿಗೆ ರಾಜ್ಯದಲ್ಲಿ ವಾಣಿಜ್ಯ ವಿಭಾಗದಲ್ಲಿ 5ನೇ ರ್ಯಾಂಕ್ ಪಡೆದಿರುವ ಯಕ್ಷಗಾನ ಕಲಾವಿದೆ ಬಿಂದಿಯಾ ಎಲ್, ಶೆಟ್ಟಿ ಅವರಿಗೆ ಮೇ 27ರಂದು ಅಡ್ಯಾರ್‍ಗಾರ್ಡ್‍ನ್‍ನಲ್ಲಿ  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ  ಆಶ್ರಯದಲ್ಲಿ ನಡೆಯುವ ಪಟ್ಲ ಸಂಭ್ರಮದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
bindya shetty, bindiya shetty
ಬಿಂದಿಯಾ ಎಲ್. ಶೆಟ್ಟಿ ಎಸ್‍ಎಸ್‍ಎಲ್‍ಸಿ ಯಲ್ಲಿ 6 ನೇ ರ್ಯಾಂಕ್ ಪಡೆದಿದ್ದರು. ಈಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಮತ್ತು ಸುಜಾತ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ. ಬಿಂದಿಯಾ ಯಕ್ಷಗಾನ, ಸಂಗೀತ ಹಾಗೂ ಕಾರ್ಯಕ್ರಮ ನಿರ್ವಹಣೆಯಲ್ಲಿ ಪ್ರಸಿದ್ಧ ಪಡೆದಿದ್ದಾರೆ. ಅಧ್ಯಯನದ ಜೊತೆಗೆ  ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಿಂದಿಯಾ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸದಸ್ಯೆಯೂ ಆಗಿದ್ದಾರೆ. ಬಿಂದಿಯಾ ಭವಿಷ್ಯದಲ್ಲಿ ಲೆಕ್ಕ ಪರಿಶೋಧನೆ ಅಧ್ಯಯನದ ಆಸಕ್ತಿ ಹೊಂದಿದ್ದಾರೆ.

Pages