BUNTS NEWS, ಬೆಂಗಳೂರು: ಮೈಸೂರಿನ ಜನಪ್ರಿಯ ವೈದ್ಯ ಸಚಿವ
ರಮಾನಾಥ ರೈ ಅವರ ಹಿರಿಯ
ಸಹೋದರ ಬೆಳ್ಳಿಪ್ಪಾಡಿ ಸತೀಶ್ ರೈ ಅವರು
ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ
ಒಳಗಾಗಿದ್ದ ಸತೀಶ್ ರೈ ಅವರನ್ನು ಬೆಂಗಳೂರಿನ ನಾರಾಯಣ
ಹೃದಯಾಲಯಕ್ಕೆ ದಾಖಲಿಸಲಾಗಿತ್ತು.
ಚಿಕಿತ್ಸೆ
ಫಲಕಾರಿಯಾಗದೆ ಇಂದು ಕೊನೆ ಉಸಿರೆಳೆದಿದ್ದಾರೆ.
ಯಕ್ಷಗಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ
ರೈ, ಮೈಸೂರಿನಲ್ಲಿ ನಡೆಯುವ ಯಕ್ಷಗಾನ ಚಟುವಟಿಕೆಗಳಿಗೆ
ಪೋಷಕರಾಗಿದ್ದರು. ಸರಳತೆ, ಸಜ್ಜನಿಕೆಗೆ ಹೆಸರಾದ ಸತೀಶ್ ರೈ
ಬಡ ರೋಗಿಗಳಿಂದ ಶುಲ್ಕ ಪಡೆಯದೆ ಉಪಚರಿಸುತ್ತಿದ್ದರು.