ಬಂಟರ ಯಾನೆ ನಾಡವರ ಮಾತೃಸಂಘದ 98ನೇ ವಾರ್ಷಿಕ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಯಾನೆ ನಾಡವರ ಮಾತೃಸಂಘದ 98ನೇ ವಾರ್ಷಿಕ ಸಭೆ

Share This
BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ಬಂಟ್ಸ್‍ಹಾಸ್ಟೆಲ್ ಮಂಗಳೂರು ಇದರ 98ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಅಡ್ಯಾರ್‍ಗಾರ್ಡ್‍ನಲ್ಲಿರುವ ವಿ.ಕೆ ಶೆಟ್ಟಿ ಸಭಾಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಅಜಿತ್‍ಕುಮಾರ್ ರೈ ಮಾಲಾಡಿ ವಹಿಸಿದ್ದರು.ಸಭೆಯಲ್ಲಿ ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿ  ಮಂಡನೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ  ವಸಂತ ಶೆಟ್ಟಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ರವೀಂದ್ರನಾಥ  ಎಸ್ ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಯ ಮುಂದಿರಿಸಿ ಮಂಡನೆ ಪಡೆದರು.

ಸಭೆಯಲ್ಲಿ ಎಂ. ಕರುಣಾಕರ ಶೆಟ್ಟಿ, ಉಷಾ ಬಲ್ಲಾಳ್. ಕೃಷ್ಣ ಪ್ರಸಾದ್ ರೈ, ಕಾವು ಹೇಮನಾಥ ಶೆಟ್ಟಿ , ಜಯರಾಮ ಸಾಂತ,   ಎಂ. ದಯಾನಂದ ರೈ, ರಘು ಶೆಟ್ಟಿ ಕಾಸರಗೋಡು ಆಯಾಯ ತಾಲೂಕು ಸಮಿತಿಗಳ, ವಿದ್ಯಾರ್ಥಿ- ವಿದ್ಯಾರ್ಥಿನಿ ಭವನಗಳ ವಿದ್ಯಾಸಂಸ್ಥೆಗಳ ವರದಿಯನ್ನು ಸಭೆಯಲ್ಲಿ  ಮಂಡಿಸಿದರು.

ಸಿಎ ಹೆಚ್. ಆರ್.ಶೆಟ್ಟಿ ಅವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಕಾತಿ ಮಾಡಲಾಯಿತು. ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸ್ವಾಗತಿಸಿದರು, ಜತೆಕಾರ್ಯದರ್ಶಿ ಎ. ಹೇಮನಾಥ ಶೆಟ್ಟಿ ಕಾವು ವಂದಿಸಿದರು.

Pages