ಸಂಘಟನೆಯಿಂದ ವಿವಾದ ಪರಿಹಾರ: ಬಂಟರ ಸಂಘ ಬಹಿರಂಗ ಅಧಿವೇಶನದಲ್ಲಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ - BUNTS NEWS WORLD

ಸಂಘಟನೆಯಿಂದ ವಿವಾದ ಪರಿಹಾರ: ಬಂಟರ ಸಂಘ ಬಹಿರಂಗ ಅಧಿವೇಶನದಲ್ಲಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ

Share This
BUNTS NEWS, ಮಂಗಳೂರು: ವ್ಯಾಜ್ಯಗಳ ಬಗ್ಗೆ ಕೋರ್ಟ್ ಮೆಟ್ಟಿಲೇರಿದರೆ ತೀರ್ಪು ವಿಳಂಬವಾಗುತ್ತದೆ. ಹಿನ್ನೆಲೆಯಲ್ಲಿ ಮುಂಬೈ ಬಂಟರ ಸಂಘ ಹಿರಿಯರ ಪಂಚಾಯಿತಿ ಮೂಲಕ ವಿವಾದಗಳನ್ನು ಬಗೆಹರಿಸುತ್ತಿರುವುದು ಮಾದರಿ ಕಾರ್ಯ ಎಂದು ನಿವೃತ ಲೋಕಾಯುಕ್ತ. ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಬಂಟರ ಯಾನೆ ನಾಡವರ ಮಾತೃಸಂಘ ಶನಿವಾರ ಅಡ್ಯಾರ್ ಗಾರ್ಡನ್ಸ್ನಲ್ಲಿ ಆಯೋಜಿಸಿದ್ದ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು. ಅದೆಷ್ಟೋ ವಿವಾದಗಳು ಹಿಂದಿನಿಂದಲೂ ಪಂಚಾಯಿತಿ ಕಟ್ಟೆ ಮೂಲಕ ಬಗೆಹರಿದಿದೆ. ನ್ಯಾಯಾಲಯಕ್ಕೆ  ಹೋದರೆ ಒಂದೆಡೆ ಖರ್ಚು, ಇನ್ನೊಂದೆಡೆ ತೀರ್ಪು  ವಿಳಂಬ. ಬಂಟರ ಒಳಗಿನ ವಿವಾದಗಳನ್ನು ಸಂಘಟನೆಯ  ಹಿರಿಯರ ಮೂಲಕ ಸುಲಭವಾಗಿ ಬಗೆಹರಿಸಬೇಕು. ಎಲ್ಲ ಸಂಘಟನೆಗಳಲ್ಲಿ ಇಂಥ ಮಾದರಿ ಕಾರ್ಯ  ನಡೆಯಬೇಕು ಎಂದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ಮಾತನಾಡಿ, ಬಂಟರಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವಿದೆ. ಅನ್ಯಾಯವನ್ನು ಮೆಟ್ಟಿ  ನಿಂತವರು ಬಂಟರು. ಹೀಗಾಗಿ ಕಷ್ಟಕ್ಕೆ ಸ್ಪಂದಿಸುವ ಗುಣ ನಮ್ಮಲ್ಲಿ ಬೆಳೆದಿದೆ ಎಂದರು.

ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ  ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಎಸ್. ಶೆಟ್ಟಿ ಜತೆ ಕಾರ್ಯದರ್ಶಿ  . ಹೇಮನಾಥ ಶೆಟ್ಟಿ ಕಾವು, ಜಯರಾಜ್ ರೈ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. 65 ವಿಶೇಷ ಚೇತನರ ದತ್ತು ಸ್ವೀಕಾರವೂ ನಡೆಯಿತು. ಮಂಜುಳಾ ಶೆಟ್ಟಿ ಹಾಗೂ ಅಡ್ಯಾರು ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಕಾಲೇಜಿನ ಮೆಡಿಕಲ್ ಸರ್ವೀಸಸ್ ಮುಖ್ಯಸ್ಥ  ಡಾ.ಸಂಜೀವ ರೈ, ಮಣಿಪಾಲ  ವಿವಿಯ ಪಿಎಚ್ಡಿ ಪಿಡಿಎಫ್ ಎಂಎಂಎಂಸಿ ಫಿಸಿಯೋಲಜಿ ವಿಭಾಗದ ಮುಖ್ಯಸ್ಥೆ ಡಾ.ಕಿರಣ್ಮಯಿ ಎಸ್. ರೈ ಬ್ರಿಗೇಡಿಯರ್  .ಎನ್.ರೈ ಉತ್ತಮ  ಕೈಗಾರಿಕೋದ್ಯಮಿಯಾಗಿ ವಿ.ಕೆ ಗ್ರೂಪ್  ಆಫ್ ಕಂಪನಿ  ಮುಂಬೈಯ  ಅಧ್ಯಕ್ಷ ಮದ್ಯಗುತ್ತು ಕರುಣಾಕರ ಶೆಟ್ಟಿ ಮುಂಬೈ, ಜೀವಮಾನದ ಶ್ರೇಷ್ಠ ಸಾಧನೆಗೆ ಎಸ್ಕೆಎಸ್ ಗ್ರೂಪ್ ಸನತ್ ಕುಮಾರ್ ಶೆಟ್ಟಿ, ಕೃಷಿ ಸಾಧನೆಗೆ ಕೆ.ಎನ್. ಪ್ರಪುಲ್ಲ ಆರ್. ರೈ, ನಡುಹಿತ್ಲು ಮಹಾಬಲ ಶೆಟ್ಟಿ, ಮೋನಪ್ಪ ಆಳ್ವ ವಿ. ಮುಳ್ಳೇರಿಯಾ, ಮೊಗರುಗುತ್ತು ರಾಜೇಂದ್ರ ಮೇಂಡ, ತೋಟಗಾರಿಕೆಗೆ ಕಡಮಜಲು ಸುಭಾಸ್ ರೈ, ಪುತ್ತೂರು ಪುತ್ತೂರು ಸಾಹಿತ್ಯ  ಕ್ಷೇತ್ರದಲ್ಲಿ ಡಾ. ನಾಗವೇಣಿ ಹೊಸಬೆಟ್ಟು, ಉತ್ತಮ ಶಿಕ್ಷಕ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಉಷಾ ಎಚ್. ಬಲ್ಲಾಳ್, ಕರುಣಾಕರ ಶೆಟ್ಟಿ ಕೊಲ್ಲೂರು, ಸಮಾಜ  ಸೇವೆಗೆ ಸಿಎ ಎಚ್. ಆರ್  ಶೆಟ್ಟಿ, ಸೂರಿ ಶೆಟ್ಟಿ , ಕಲಾ ಕ್ಷೇತ್ರದಲ್ಲಿ ಶಶಿ ವಿ. ಶೆಟ್ಟಿ , ಮಾಧ್ಯಮ ಅಕಾಡೆಮಿ ಪ್ರಶಸ್ತಿ  ಪುರಸ್ಕø ಪತ್ರಕರ್ತ ಜಗನ್ನಾಥಶೆಟ್ಟಿ ಬಾಳಅರ್ಜುನ ಪ್ರಶÀಸ್ತಿ ಪುರಸ್ಕø ಕ್ರೀಡಾಪಟು ಸತೀಶ್ ರೈ ಪುತ್ತೂರು, ರಾಷ್ಟ್ರಮಟ್ಟದ  ಕಬಡ್ಡಿ ಆಟಗಾರ ಪ್ರಶಾಂತ್  ರೈ ಕೈಕ್ಕಾರ, ಶೈಕ್ಷಣಿಕ ಸಾಧನೆಗೆ  ನಿತೇಶ್  ಶೆಟ್ಟಿ  ಅವರಿಗೆ  ಚಿನ್ನದ  ಪದಕ, ಪ್ರಶಸ್ತಿ  ನೀಡಿ ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ  ಸಾಧನೆ ಮಾಡಿರುವ ಗ್ರೀಷ್ಮಾ ಡಿ. ಶೆಟ್ಟಿ , ಶಿಬಾನಿ ಜಿ.ಶೆಟ್ಟಿ , ಅದ್ವಿತ್ ಡಿ.ಶೆಟ್ಟಿ , ಸಾನ್ಯಾ ಡಿ ಶೆಟ್ಟಿ, ಆಯುಷ್  ಆರ್. ಶೆಟ್ಟಿ ಹಾಗೂ ಯುವ  ವಿಜ್ಞಾನಿಗಳಾದ ಪ್ರಖ್ಯಾತ್ ಭಂಡಾರಿ ಮತ್ತು ಪ್ರಣವ್ ಭಂಡಾರಿ ಪುತ್ತೂರು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Pages