ಕಟೀಲು ತಾಯಿಯ ಸಂಪೂರ್ಣ ಆಶೀರ್ವಾದ ಪಟ್ಲರ ಮೇಲಿರಲಿ: ಕಮಲಾದೇವಿ ಅಸ್ರಣ್ಣ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ತಾಯಿಯ ಸಂಪೂರ್ಣ ಆಶೀರ್ವಾದ ಪಟ್ಲರ ಮೇಲಿರಲಿ: ಕಮಲಾದೇವಿ ಅಸ್ರಣ್ಣ

Share This

ಪಟ್ಲ ಯಕ್ಷಾಶ್ರಯದ ಮೂರನೇಯ ಮನೆಯ ಭೂಮಿಪೂಜೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಹಲವು ಯೋಜನೆಗಳಲ್ಲಿ ಮಹತ್ವದ ಯೋಜನೆಯಾದ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಕುಂಜತ್ತಬೈಲ್ ಎಂಬಲ್ಲಿ, ಕಟೀಲು ಮತ್ತು ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಅಶಕ್ತರಾಗಿರುವ ಪುರಂದರ ಎಂಬವರಿಗೆ ಮೂರನೇಯ ಮನೆಯ ಶಂಕುಸ್ಥಾಪನೆಯು  ಕುಂಜತ್ತಬೈಲ್ನಲ್ಲಿ ಕಟೀಲು ದೇವಸ್ಥಾನದ ಪ್ರಧಾನ ಅರ್ಚಕರಲ್ಲಿ ಓರ್ವರಾದ  ಕಮಲಾದೇವಿ ಪ್ರಸಾದ ಅಸ್ರಣ್ಣನವರ ಅಮೃತಹಸ್ತದಿಂದ ನೆರವೇರಿತು.
ಕಟೀಲು ತಾಯಿಯ ಸಂಪೂರ್ಣ ಆಶೀರ್ವಾದ ಪಟ್ಲರ ಮೇಲಿರಲಿ: ಕಮಲಾದೇವಿ ಅಸ್ರಣ್ಣ
ಆಶೀರ್ವಚನ ನೀಡಿದ  ಕಮಲಾದೇವಿ ಪ್ರಸಾದ ಅಸ್ರಣ್ಣರು, ಇಂದಿನ ಕಾಲಘಟ್ಟದಲ್ಲಿ ಯಕ್ಷಗಾನ ಇಷ್ಟೊಂದು ಆಕರ್ಷಣೆಯಾಗಲು ಪಟ್ಲರ ಕೊಡುಗೆ ಅಪಾರ. ಪುರಂದರದಾಸರ ಮಧುಕರ ವೃತ್ತಿಯ ದಾಸವಾಣಿಯಂತೆ ಸತೀಶ್ ಶೆಟ್ಟಿಯವರು, ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ   ಅಶಕ್ತ ಕಲಾವಿದರಿಗೆ ನಿಸ್ವಾರ್ಥ ಸೇವೆ ಮಾಡುತ್ತಿರುವದರಿಂದ ಇವರಿಗೆ ಕಟೀಲು ತಾಯಿಯ ಸಂಪೂರ್ಣ ಆಶೀರ್ವಾದವಿದೆಯೆಂದರು.

ಪೌಂಡೇಶನಿನ ಮೇಲಿನ ಪ್ರೀತಿಯಿಂದ ಆಗಮಿಸಿ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ ಆಸ್ರಣ್ಣರಿಗೆ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಕೈಜೋಡಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕುಂಜತ್ತಬೈಲ್ ಪರಿಸರದ ಸ್ನೇಹ ಬಳಗದ ಸದಸ್ಯರು, ನಂದಿನಿ ಮಹಿಳಾ ಮಂಡಳಿ ಸದಸ್ಯರು, ಅಯ್ಯಪ್ಪ ಮಂದಿರದ ಸದಸ್ಯರು, ಹಿಂದೂ ಯುವ ಸೇನೆ ಸದಸ್ಯರು, ಅತ್ರಬೈಲು ಹತ್ತುಸಮಸ್ತರು, ಸ್ಥಳೀಯರಾದ ದಿವಾಕರ ಪಕ್ಕಳ, ಸುಧಾಕರ ರೈ, ಕಂಟ್ರಾಕ್ಟರ್ ದಿನೇಶ್, ಟ್ರಸ್ಟ್ ಕೋಶಾಧಿಕಾರಿ ಅಂ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಕುಂದಾಪುರ, ಎಕ್ಕಾರು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ ಕಟೀಲು, ಮಂಗಳೂರು ಘಟಕದ ಕೋಶಾಧಿಕಾರಿ ರವಿ ಶೆಟ್ಟಿ ಅಶೋಕನಗರ, ಕೇಂದ್ರೀಯ ಸಮಿತಿಯ ಸಕ್ರಿಯ ಸದಸ್ಯರಾದ ಅಶ್ವಿತ್ ಶೆಟ್ಟಿ, ಕರುಣಾಕರ ಶೆಟ್ಟಿಯವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಧನ್ಯವಾದಗಳನ್ನು ಸಮರ್ಪಿಸಿದರು.

Pages