ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು

Share This
BUNTS NEWS, UAE: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ವಿಶೇಷ ಸಭೆ 2018 ಮೇ 12 ರಂದು ಬೆಳಿಗ್ಗೆ 11 ಗಂಟೆಯಿಂದ ಯು... ಬಂಟ್ಸ್ ಮಹಾ ಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅಬುಧಾಬಿಯಲ್ಲಿ ನಡೆಯಿತು.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು: 1.ವಿವಾಹ ಮಾಡಲು ಆರ್ಥಿಕವಾಗಿ ಅಶಕ್ತರಾದ ಹೆಣ್ಣು ಕುಟುಂಬಗಳಿಗೆ ಧನ ಸಹಾಯ ನೀಡುವುದು. 2. ಆರ್ಥಿಕವಾಗಿ ಹಿಂದುಳಿದ ನಿರ್ವಸಿತರಿಗೆ ವಸತಿ ನಿರ್ಮಾಣಕ್ಕಾಗಿ ಸಹಕರಿಸುವುದು. 3. ಹೆಚ್ಚಿನ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಪಡೆಯಲು ಅಶಕ್ತರಾದ ಸಮಾಜದ ಬಂಧುಗಳಿಗೆ ಪ್ರೇರಣೆಯನ್ನು ನೀಡಿ ಸಹಕರಿಸುವುದು. 4. ಆರ್ಥಿಕವಾಗಿ ಅಶಕ್ತ ಕ್ರೀಡಾ ಪ್ರತಿಭೆಗಳಿಗೆ ಸಂಪೂರ್ಣ ನೆರವನ್ನು ನೀಡುವುದು. 5. ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯದ ಹಸ್ತ ಕಲ್ಪಿಸುವುದು. 6. ಮುಪ್ಪಿನ ಪ್ರಾಯದಲ್ಲಿ, ಅವರನ್ನು ನೋಡಿಕೊಳ್ಳಲು ಅವರ ಸಂಬಂಧಿಕರು ಇಲ್ಲದಿದ್ದಲ್ಲಿ ಅಂತವರಿಗೆ ವೃದ್ಧಾಶ್ರಮದಲ್ಲಿ ಜೀವನ ಸಾಗಿಸಲು ವ್ಯವಸ್ಥೆ ಮಾಡುವುದು. 7. ಕಂದಾಚಾರಗಳಿಗೆ ಜೋತುಬಿದ್ದು ಅನಗತ್ಯ ಜಾತಕಗಳ ಹೊಂದಾಣಿಕೆಯ ನೆಪದಲ್ಲಿ ಹೆಣ್ಣು ಮಕ್ಕಳ ವಿವಾಹಕ್ಕೆ ತಡೆ ಹಿಡಿಯುದನ್ನು ನಿಲ್ಲಿಸಿ ಅಂಧಶ್ರದ್ಧೆ, ಕಂದಾಚಾರಗಳಿಗೆ ಬಲಿಯಾಗದಂತೆ, ಬೆಂಬಲ ನೀಡಿ ಪ್ರೋತ್ಸಾಹಿಸುವುದು. 8. ಸಂಘಟನೆ ಕಾನೂನು ಕಟ್ಟಳೆಗಳನ್ನು ತಿದ್ದುಪಡಿ ಮಾಡಿ ಬಲಗೊಳಿಸುವುದು. 9. ಎಲ್ಲಾ ಬಂಟರ ಸಂಘಟನೆಗಳು ಬಂಟ ಸಂಸ್ಕೃತಿ ಆಚಾರ ವಿಚಾರಗಳನ್ನು ಹೆಚ್ಚು ಹೆಚ್ಚು ಇಂದಿನ ನವ ಪೀಳಿಗೆಗೆ ತಿಳಿಸಿಕೊಡುವಲ್ಲಿ ಜವಬ್ಧಾರಿಯನ್ನು ತೆಗೆದುಕೊಳ್ಳುವುದು. ಇತ್ಯಾದಿ ವಿಚಾರಗಳ ಬಗ್ಗೆ  ಚರ್ಚಿಸಿ ಕಾರ್ಯಗತಗೊಳಿಸಲು ತೀರ್ಮಾನಿಸಲಾಯಿತು.

ವಿಶ್ವದ ವಿವಿಧ ಭಾಗಗಳ ಸಂಘಟಕರನ್ನು ಆಯ್ಕೆ ಮಾಡಲಾಯಿತು. ಅರಬ್ ರಾಷ್ಟ್ರಕ್ಕೆ ಶ್ರೀ ಸರ್ವೋತ್ತಮ ಶೆಟ್ಟಿ, ಪೂರ್ವ ಮತ್ತು ಪಾಶಿಮಾತ್ಯ ರಾಷ್ಟ್ರಗಳಿಗೆ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಇವರುಗಳಿಗೆ ಜವಬ್ಧಾರಿಯನ್ನು ನೀಡಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಸದಸ್ಯತವನ್ನು ಸಭೆಯಲ್ಲಿ ಭಾಗವಹಿಸಿದ ಅರಬ್ ರಾಷ್ಟದ ವಿವಿಧ ರಾಷ್ಟ್ರಗಳ ಬಂಟ್ಸ್ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಅರ್ಜಿಯನ್ನು ಭರ್ತಿಮಾಡಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡರು.

ಸಭೆಯಲ್ಲಿ ಗಲ್ಫ್ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸದಸ್ಯರಲ್ಲಿ ಬಹರೈನ್ ಬಂಟ್ಸ್ ಅಧ್ಯಕ್ಷರು ಶ್ರೀ ನಾಗೇಶ್ ಶೆಟ್ಟಿ ಮತ್ತು ಶ್ರೀಮತಿ ಶುಭಾ ನಾಗೇಶ್ ಶೆಟ್ಟಿ, ಒಮಾನ್ ಬಂಟ್ಸ್ ಅಧ್ಯಕ್ಷ ಶ್ರೀ ಶಶಿಧರ್ ಶೆಟ್ಟಿ, ಕುವೈತ್ ಬಂಟ್ಸ್ ಅಧ್ಯಕ್ಷ ಶ್ರೀ ಶೇಖರ್ ಶೆಟ್ಟಿ, ಸೌದಿಯಾ ಬಂಟ್ಸ್ ಪ್ರತಿನಿಧಿ ಶ್ರೀ ಮಹೇಶ್ ಹೆಗ್ಡೆ ಮಾತ್ತು ಡಾ| ಪೂರ್ಣಿಮಾ ಮಹೇಶ್ ಹೆಗ್ಡೆ, ಮುಂಬೈನಿಂದ ಶ್ರೀ ಕರ್ನೂರ್ ಮೋಹನ್ ರೈ, ಮಂಗಳೂರಿನಿದ ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್, ಯು... ಬಂಟ್ಸ್ ಸಲಹಾ ಸಮಿತಿ ಸದಸ್ಯರಾದ ಶ್ರೀಯುತರುಗಳಾದ ಸುಧೀರ್ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಶ್ರೀಮತಿ ಭಾಗ್ಯ ಪ್ರೇಮನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ ವೀಣಾಧರ್ ಶೆಟ್ಟಿ, ಬಿ. ಕೆ. ಗಣೇಶ್ ರೈ, ಶ್ರೀಮತಿ ಜ್ಯೋತಿಕಾ  ಹರ್ಷಶೆಟ್ಟಿ ಹಾಗೂ ಯು... ಬಂಟ್ಸ್ 2019ನೇ ಸಾಲಿನ ಬಂಟ್ಸ್ 2019ನೇ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂತೋಷ್ ರೈ, ರವಿ ಶೆಟ್ಟಿ, ಸುಧೀರ್ ರೈ ಮತ್ತು ಶ್ರೀಮತಿ ರಾಧಿಕಾ ಸುಧೀರ್ ರೈ, ಉದ್ಯಮಿಗಳಾದ ಶೇಖರ್ ಶೆಟ್ಟಿ, ಸುಂದರ್ ಶೆಟ್ಟಿ, ಹರ್ಷ ಶೆಟ್ಟಿ, ಸಾಜನ್ ಶೆಟ್ಟಿ ಮತ್ತು ಶ್ರೀಮತಿ ಸೀಮಾ ನಿರ್ಮನ್ ಶೆಟ್ಟಿ ಸಭೆಯಲ್ಲಿ ಪಾಲ್ಗೋಂಡಿದ್ದರು. ವರದಿ: ಬಿ. ಕೆ. ಗಣೇಶ್ ರೈ - ಯು... ಸುದ್ದಿ ಕೃಪೆ: ವಿಜಯಕುಮಾರ್ ಶೆಟ್ಟಿ ಮಜಿಬೈಲು [UAE]

Pages