ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ UAE ಘಟಕದ ವಿಶೇಷ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ UAE ಘಟಕದ ವಿಶೇಷ ಸಭೆ

Share This
BUNTS NEWS, ದುಬೈ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) - ಯು... ಘಟಕದ ವಿಶೇಷ ಸಭೆ 2018 ಮೇ 18ನೇ ತಾರೀಕು ಶುಕ್ರವಾರ ಸಂಜೆ 5.00 ಗಂಟೆಗೆ ದುಬಾಯಿ ಗಿಸೆಸ್ ನಲ್ಲಿರುವ ಫಾರ್ಚೂನ್ ಫ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) - ಯು... ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) - ಸ್ಥಾಪಕ ಅಧ್ಯಕ್ಷರು ಹಾಗೂ ಶ್ರೀ ಕ್ಷೇತ್ರ ಕಟೀಲು ಮೇಳದ ಭಾಗವತರಾದ ಶ್ರೀ ಸತೀಶ್ ಶೆಟ್ಟಿ ಪಟ್ಲರವರು ಗಣ್ಯರ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಭೆಯನ್ನದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆಯ ಸ್ಥಾಪನೆ, ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿ, ಪ್ರತಿಯೊಂದು ಹಂತದಲ್ಲಿ ಸಹಕಾರ ಬೆಂಬಲ ಪ್ರೋತ್ಸಾಹ ನೀಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಶ್ರೀಮತಿ ಆರತಿ ದಿನೇಶ್ ಶೆಟ್ಟಿಯವರು ಶ್ರೀ ಸತೀಶ್ ಶೆಟ್ಟಿ ಪಟ್ಲರವರಿಗೆ ಪುಷ್ಪಗುಛ್ಛ ನೀಡಿ ಗೌರವಿಸಿದರು, ಮತ್ತೊರ್ವ ಅತಿಥಿಯಾಗಿ ಆಗಮಿಸಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಖಜಾಂಚಿ ಶ್ರೀ ರವಿ ಶೆಟ್ಟಿಯವರಿಗೆ ಶ್ರೀಮತಿ ಅಂಬಾ ವೆಂಕಟೇಶ್ ಶಾಸ್ತ್ರಿ ಪುಷ್ಪಗುಛ್ಛ ನೀಡಿ ಗೌರವಿಸಿದರು.
ಯು... ಘಟಕದ ಮುಖ್ಯ ಸಲಹೆಗಾರರಲ್ಲಿ ಓರ್ವರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿಯವರು, ಶ್ರೀ ಗುಣ ಶೀಲ್ ಶೆಟ್ಟಿ, ಅತಿಥಿಯಾಗಿ ಆಗಮಿಸಿದ  ರವಿ ಶೆಟ್ಟಿ, ತುಳು ಚಲನ ಚಿತ್ರ ನಿರ್ಮಾಪಕ ಶ್ರೀ ಶೋಧನ್ ಪ್ರಸಾದ್, ಸಂಘಟಕರಲ್ಲಿ ಓರ್ವರಾದ ಶ್ರೀ ಬಿ. ಕೆ. ಗಣೇಶ್ ರೈ ಮತ್ತು ಶ್ರೀ ಕೃಷ್ಣರಾಜ್ ತಂತ್ರಿಯವರು ಇವರಲ್ಲರೂ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಚಟುವಟಿಕೆಗಳನ್ನು ಅಭಿನಂದಿಸಿ ಶುಭ ಹಾರೈಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರು ಮತ್ತು ಗುಣಶೀಲ್ ಶೆಟ್ಟಿಯವರು ಜೊತೆಗೂಡಿ "ಯಕ್ಷಾಶ್ರಯ ಯೋಜನೆ" ಆಡಿಯಲ್ಲಿ ಒಂದು ಮನೆ ಕಟ್ಟಿಸಿಕೊಡುವ ಜವಬ್ಧಾರಿಯನ್ನು ವಹಿಸಿ ಕೊಂಡರು.

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ - ಯು... ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಯು... ಘಟಕದ ವತಿಯಿಂದ ಕಳೆದಬಾರಿ ನೀಡಲಾದ ದೇಣಿಗೆಯ ಮೊತ್ತವನ್ನು ಬಾರಿ ದ್ವಿಗುಣಗೊಳಿಸುವಲ್ಲಿ ಸಹಕಾರ ನೀಡಲು ಮನವಿ ಮಾಡಿಕೊಂಡರು. ಹಾಗೂ ದೇಣಿಗೆ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಕಿಕೊಂಡಿರುವ ಕಾರ್ಯಯೋಜನೆಯ ಬಗ್ಗೆ  ಪ್ರಶಂಸೆ ವ್ಯಕ್ತಪಡಿಸಿ ಶುಭಹಾರೈಸಿದರು.

ಅತಿಥಿ ಶ್ರೀ ರವಿಶೆಟ್ಟಿ ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಯಕ್ಷಮಿತ್ರರು ಸಂಘಟಕರಾದ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜವರು ಯು... ಘಟಕದ ಕಾರ್ಯಯೋಜನೆಗಳಿಗೆ ಸರ್ವರ ಬೆಂಬಲ ಕೋರಿದರು. ಕು. ಶರಣ್ಯಾ ವೆಂಕಟೇಶ್ ಶಾಸ್ತ್ರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಯು... ಘಟಕದ ಕಾರ್ಯದರ್ಶಿ ಶ್ರೀ ವಿಠಲ್ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು. ಶ್ರೀ ರಾಜೇಶ್ ಕುತ್ತಾರ್ ವಂದಾನಾರ್ಪಣೆ ಮಾಡಿದರು.

ಮಂಗಳೂರಿನಲ್ಲಿ ದುಬಾಯಿ ಬಾಲಕಲಾವಿದರ ತಂಡದಿಂದ ಯಕ್ಷಗಾನ ಪ್ರದರ್ಶನ: ದುಬಾಯಿಯಲ್ಲಿರುವ ಯಕ್ಷಮಿತ್ರ ತಂಡದ ಬಾಲಕಲಾವಿದರು ಮಂಗಳೂರಿನ ಅಡ್ಯಾರು ಗಾರ್ಡನ್ ನಲ್ಲಿ 2018 ಮೇ 27ನೇ ತಾರೀಕಿನಂದು "ಯಕ್ಷಧ್ರುವ ಪಟ್ಲ ಸಂಭ್ರಮ - 2018" ಕಾರ್ಯಕ್ರಮದಲ್ಲಿ ದುಬಾಯಿನಿಂದ ತೆರಳಿ "ಏಕಾದಶಿ ವೃತ ಮಹಾತ್ಮೆ" ಪ್ರಸಂಗವನ್ನು ಆಡಿತೋರಿಸಲಿರುವರು.
ವರದಿ: ಬಿ. ಕೆ. ಗಣೇಶ್ ರೈ - ಯು... ಸುದ್ದಿಕೃಪೆ: ವಿಜಯ್ ಕುಮಾರ್ ಶೆಟ್ಟಿ ಮಜಿಬೈಲು–UAE [Bunts News]

Pages