BUNTS NEWS, ಮಂಬಾಯಿ: ಕೆಲಸವನ್ನು ಶೃದ್ಧೆಯಿಂದ ಮಾಡಿದಾಗ ಫಲ ಸಿಗುತ್ತದೆ
ದೇವರು ಅದಕ್ಕೆ ಪ್ರತಿಫಲ ಕೊಡುತ್ತಾನೆ. ಅಂತಹ ಪ್ರತಿಫಲವನ್ನು ನಾವು ಸಮಾಜಕ್ಕೆ ಕೃತಜ್ಞಾರೂಪದಲ್ಲಿ
ನೀಡುವ ಮೂಲಕ ಸಮಾಜದ ಋಣ ತಿರಿಸಬೇಕು. ಬಹಳ ವರ್ಷಗಳಿಂದ ಪುಣೆಯಲ್ಲಿ ಬಂಟರು ನೆಲೆಗೊಂಡು ಜೀವನ ಉದ್ಯೋಗದೊಂದಿಗೆ
ಸಂಪತ್ತು ಗಳಿಸಿದ್ದಾರೆ. ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೆ ಸರಿಯಾದ ಖಣವನ್ನು ಸಂದಾಯ ಮಾಡಿದ್ದಾರೆ
ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವಿರೇಂದ್ರ ಹೆಗಡೆ ಹೇಳಿದರು.
ಅವರು ಶನಿವಾರ ಪುಣೆ
ಬಂಟರ ಸಂಘದ ನೂತನ ಬಂಟರ ಭವನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮೂರಿವರು ಬೇರೆ ಊರಲ್ಲಿ ನೆಲೆ ಕಂಡರೂ
ಆ ಊರಿನವರೊಂದಿಗೆ ಹಾಲು ನೀರಿನಂತೆ ಬೆರೆತು ಬದುಕು ಕಟ್ಟಿಕೊಂಡಿದ್ದಾರೆ ಮಾತ್ರವಲ್ಲ ತಮ್ಮ ಹುಟ್ಟೂರನ್ನು
ಮರೆತಿಲ್ಲ ಎಂಬುದು ಮುಖ್ಯ ವಿಷಯವಾಗಿದೆ. ಇವತ್ತು ಊರಲ್ಲಿ ನಡೆಯುವ ಎಷ್ಟೋ ದೇವಸ್ಥಾನಗಳ ಕೋಟಿಗಟ್ಟಲೆ
ವೆಚ್ಚದ ಪ್ರತಿಷ್ಠೆ, ಧಾರ್ಮಿಕ ಕಾರ್ಯಕ್ರಮಗಳು ಪರವೂರಿನಲ್ಲಿ ನೆಲೆನಿಂತವರ ಸಹಕಾರದಿಂದ ಆಗುತ್ತಿದೆ.
ಹಾಗಾಗಿ ಎಲ್ಲೆ ನೆಲೆ ನಿಂತರೂ ಊರೆಂಬ ಬೇರನ್ನು ಮರೆಯದಿರಿ, ಬೇರು ಮರೆತರೆ ಮರವು ಬಾಡುವುದು ಎಂದರು.
ನಿಷ್ಠೆ ನಮ್ಮನ್ನಲಿದ್ದು ಸಮಾಜಕ್ಕೆ ಮತ್ತಷ್ಟು ಒಳಿತಾಗಲಿ. ದಾನ ಮಾಡುವ ಕೈಗಳು ತುಂಬಲಿ. ಎಲ್ಲರಿಗೂ
ಶ್ರೀ ಮಂಜುನಾಥ ಸ್ವಾಮಿಯ ಆರ್ಶಿವಾದವಿರಲೆಂದು ಹಾರೈಸಿದರು. ಸಮಾರಂಭದಲ್ಲಿ ಪುಣೆ
ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯ ರೈ, ಸಮಾಜದ ಗಣ್ಯರಾದ
ವಿನಯ್ ಹೆಗ್ಡೆ, ಮೋಹನ ರೈ, ಐಕಳ ಹರೀಶ್ ಶೆಟ್ಟಿ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು. ವರದಿ: ಗಣೇಶ್ ಶೆಟ್ಟಿ [www.BuntsNews.com –
ಮುಂಬಾಯಿ ವರದಿಗಾರರು]