ತುಳುನಾಡಿನ ಮಹಿಳೆಯರಿಗೆ ಸ್ವಾವಲಂಬನೆಗೆ ಕೊರತೆಯಿಲ್ಲ, ಆದರೆ ಅಸ್ತಿತ್ವಕ್ಕೆ ಹುಡುಕಾಟದ ಪರಿಸ್ಥಿತಿಯಿದೆ: ಡಾ. ಆಶಾ ಜ್ಯೋತಿ ರೈ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳುನಾಡಿನ ಮಹಿಳೆಯರಿಗೆ ಸ್ವಾವಲಂಬನೆಗೆ ಕೊರತೆಯಿಲ್ಲ, ಆದರೆ ಅಸ್ತಿತ್ವಕ್ಕೆ ಹುಡುಕಾಟದ ಪರಿಸ್ಥಿತಿಯಿದೆ: ಡಾ. ಆಶಾ ಜ್ಯೋತಿ ರೈ

Share This
BUNTS NEWS, ಮಂಗಳೂರು: ತುಳುನಾಡಿನ ಮಹಿಳೆಯರಿಗೆ ಸ್ವಾಲಂಬನೆ ಕೊರತೆಯಿಲ್ಲ. ಅದರ ಅಸ್ತಿತ್ವಕ್ಕೆ ಹುಡುಕಾಟ ನಡೆಸುವ ಪರಿಸ್ಥಿತಿ ಇದೆ. ಆದರೆ ಅಸ್ತಿತ್ವಕ್ಕೆ ಅವಕಾಶ ನೀಡಿ ಎಂದು ಪ್ರಚಾರ ಮಾಡುವುದು ಸೂಕ್ತವಲ್ಲ. ಮಹಿಳೆಯರು ಹೆಣ್ತನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ ಆಶಾ ಜ್ಯೋತಿ ರೈ ಹೇಳಿದರು.
ತುಳುನಾಡಿನ ಮಹಿಳೆಯರಿಗೆ ಸ್ವಾವಲಂಬನೆಗೆ ಕೊರತೆಯಿಲ್ಲ, ಆದರೆ ಅಸ್ತಿತ್ವಕ್ಕೆ ಹುಡುಕಾಟದ ಪರಿಸ್ಥಿತಿಯಿದೆ: ಡಾ. ಆಶಾ ಜ್ಯೋತಿ ರೈ
ಅವರು ಸುರತ್ಕಲ್ ಬಂಟರ ಸಂಘ ಮಹಿಳಾ ವೇದಿಕೆ ಆಶ್ರಯದಲ್ಲಿ ಬಂಟರ ಭವನದಲ್ಲಿ  ನಡೆದ ಸಂಘದ ವ್ಯಾಪ್ತಿಯ ಬಂಟ ಮಹಿಳಾ ಸಮಾವೇಶ-2018 ಅಸ್ಮಿತೆ ಹೆಮ್ಮೆಯ ಅಸ್ತಿತ್ವದ ಹುಡುಕಾಟದಲ್ಲಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಶಿಕ್ಷಣ ಹೆಚ್ಚಳದಿಂದ ಸಮಸ್ಯೆಯಾಗಿಲ್ಲ. ಸಮಾಜದ ದೃಷ್ಟಿಕೋನ ಬದಲಾಗಬೇಕಾಗಿದೆ.ಮಹಿಳೆಯರು ಒಂದು ಚೌಕಟ್ಟಿನ  ಒಳಗೆ ಇರಬೇಕು ಎಂದು ಮಿತಿ ಹಾಕಲಾಗಿದೆ. ಮಹಿಳೆಯರೂ ಮಾನವರೇ ಆಗಿದ್ದು, ಪ್ರತ್ಯೇಕ ಮಹಿಳಾ ಹಕ್ಕು ಯಾಕೆ ಕೇಳಬೇಕೆಂದು ಡಾ. ಆಶಾಜ್ಯೋತಿ ರೈ ತಿಳಿಸಿದರು.

ಪ್ರಸಿದ್ಧ ಹಾಸ್ಯ ಸಾಹಿತಿ ಫ್ರೋ. ಭುವನೇಶ್ವರಿ ಹೆಗಡೆ ಮಾತನಾಡಿ, ಉತ್ತರ ಕನ್ನಡವಳಾದ ತಾನು ಮಂಗಳೂರಿನಲ್ಲಿ ನೆಲೆಸಿದ ಕಾರಣ ಬಂಟರಿಂದ ಧೈರ್ಯ, ವಿಶ್ವಾಸ ಕಲಿತಿದ್ದೇನೆ. ಮಹಿಳೆಯರಲ್ಲಿ ಧಾರಣಾ ಶಕ್ತಿಯಿದೆ. ಕಷ್ಟ ಸಹಿಷ್ಣುತೆಯಿದೆ. ಮಹಿಳೆಯರಲ್ಲಿ ಮಾನಸಿಕ ಸ್ಥೈರ್ಯ, ನೈತಿಕ ಸ್ಥೈರ್ಯ ಹೆಚ್ಚಾಗಬೇಕಾಗಿದೆ ಎಂದರು.

ಮಹಿಳಾ ವೇದಿಕೆ ಕಾರ್ಯದರ್ಶಿ ವಿಜಯಭಾರತಿ ರೈ ಮಾತನಾಡಿ, ಸಂಘದ ವ್ಯಾಪ್ತಿಯ 18 ಗ್ರಾಮಗಳ ಮನೆಗಳನ್ನು ಮುಟ್ಟುವುದು ಮಹಿಳಾ ವೇದಿಕೆ ಉದ್ದೇಶ, ಇದರಲ್ಲಿ ವೇದಿಕೆ ಸಫಲವಾಗಿದೆ ಎಂದರು. ಸಂಘಟನಾ ಕಾರ್ಯದರ್ಶಿ ವೀಣಾ ಟಿ. ಶೆಟ್ಟಿ  ಸಂಘದ ವ್ಯಾಪ್ತಿಯ 10 ಗ್ರಾಮಗಳ ಘಟಕಗಳ ಮಹಿಳಾ ಪ್ರತಿನಿಧಿಗಳ ಹೆಸರು ವಾಚಿಸಿದರು.

ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಶಕುಂತಳಾ ಶೆಟ್ಟಿ ಫಲಕ ಅನಾವರಣಗೊಳಿಸಿದರು. ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಪಡುಬಿದ್ರಿ ಬಂಟರ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಅಕ್ಷತಾ ಎಸ್. ಶೆಟ್ಟಿ, ಮಹಿಳಾ ವೇದಿಕೆ ಕೋಶಾಧಿಕಾರಿ ಭವ್ಯಾ ಎ. ಶೆಟ್ಟಿ, ಜತೆ ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ, ಉಪಾಧ್ಯಕ್ಷೆ ಬೇಬಿ ಶೆಟ್ಟಿ ಸುರತ್ಕಲ್, ಬಂಟರ ಸಂಘ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ಆಯೋಜಿಸಲಾಗಿದ್ದ ವಿವಿಧ ಮಳಿಗೆಗಳನ್ನು  ಅನುರಾಧ ಸುಭಾಶ್ಚಂದ್ರ ಶೆಟ್ಟಿ ಮತ್ತು ಸಹನಾ ರಾಜೇಶ್ ರೈ ಉದ್ಘಾಟಿಸಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
FB Page LIKE ಮಾಡಿ ಬೆಂಬಲಿಸಿ

Pages