ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಹಾಗೂ ಸನ್ಮಾನ
BUNTS NEWS, ಮಂಗಳೂರು: ಬಂಟರ ಯಾನೆ ನಾಡವರ
ಮಾತೃಸಂಘ(ರಿ) ಬಂಟ್ಸ್ಹಾಸ್ಟೆಲ್
ಮಂಗಳೂರು ಇದರ ಬಹಿರಂಗ ಅಧಿವೇಶನವನ್ನು
ಎ.28ರಂದು ಶನಿವಾರ ಬೆಳಿಗ್ಗೆ
10 ಗಂಟೆಗೆ ಬಂಟ್ಸ್ಹಾಸ್ಟೆಲ್ ವಠಾರ,
ಮಂಗಳೂರು ಇಲ್ಲಿ ನಡೆಸಲು ನಿರ್ಧರಿಸಲಾಗಿತ್ತು.
ಚುನಾವಣಾ ಪ್ರಕ್ರಿಯೆಗಳಿಗೆ ನಮ್ಮ ಜಾಗವನ್ನು ಚುನಾವಣಾ
ಆಯೋಗ ಅಧಿಗ್ರಹಣ ಮಾಡಿರುವುದರಿಂದ ಈ ಸಭೆಯನ್ನು ವಿ.ಕೆ.ಶೆಟ್ಟಿ ಸಭಾಭವನ
ಅಡ್ಯಾರ್ ಗಾರ್ಡನ್ಸ್, ಅಡ್ಯಾರ್ ಮಂಗಳೂರು ಇಲ್ಲಿಗೆ
ಸ್ಥಳಾಂತರಿಸಲಾಗಿದೆ.
ಬಹಿರಂಗ
ಅಧಿವೇಶನದ ಅಧ್ಯಕ್ಷತೆಯನ್ನು ಜಸ್ಟಿಸ್ ಎನ್. ಸಂತೋಷ್
ಹೆಗ್ಡೆ ಮಾಜಿ ಲೋಕಾಯುಕ್ತರು ಕರ್ನಾಟಕ
ಇವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2016-17ನೇ
ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ
ಸಾಧಕರಿಗೆ ಚಿನ್ನದ ಪದಕ, ಪ್ರಶಸ್ತಿ
ವಿತರಣೆ ಮತ್ತು ಸನ್ಮಾನ ಸಮಾರಂಭ
ಜರಗಲಿದೆ.
ವೈದ್ಯಕೀಯ
ಕ್ಷೇತ್ರದಲ್ಲಿ ಉತ್ತಮ ಸೇವೆಗೆ ಡಾ.
ಸಂಜೀವ ರೈ ಮುಖ್ಯಸ್ಥರು, ಮೆಡಿಕಲ್
ಸರ್ವಿಸಸ್, ಫಾದರ್ ಮುಲ್ಲರ್ ಮೆಡಿಕಲ್
ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು
ಮತ್ತು ಡಾ. ಕಿರಣ್ಮಯಿ ಎಸ್.
ರೈ ಪಿಎಚ್ಡಿ ಪಿಡಿಎಫ್
ಎಂಎಂಎಂಸಿ ಫಿಸಿಯೋಲಜಿ ವಿಭಾಗದ ಮುಖ್ಯಸ್ಥೆ ಮಣಿಪಾಲ
ವಿಶ್ವವಿದ್ಯಾನಿಲಯ, ದೇಶಸೇವೆಗೆ ಬ್ರಿಗೇಡಿಯರ್ ಐ.ಎನ್ ರೈ,
ಹೊಟೇಲ್ ಉದ್ಯಮದಲ್ಲಿದ್ದು ಉತ್ತಮ ಸಮಾಜ ಸೇವೆಗೆ
ಪುಣೆ ಹೊಟೇಲ್ ಉದ್ಯಮಿ ಜಗನ್ನಾಥ
ಶೆಟ್ಟಿ ಪುಣೆ, ಉತ್ತಮ ಕೈಗಾರಿಕೋದ್ಯಮಿಗೆ
ವಿ.ಕೆ.ಗ್ರೂಪ್ ಆಫ್
ಕಂಪೆನಿ ಮುಂಬಯಿ ಇದರ ಅಧ್ಯಕ್ಷ
ಮದ್ಯಗುತ್ತು ಕರುಣಾಕರ ಶೆಟ್ಟಿ ಮುಂಬೈ,
ಜೀವಮಾನದ ಶ್ರೇಷ್ಠ ಸಾಧನೆಗೆ ಎಸ್ಕೆಎಸ್ ಗ್ರೂಪ್ನ
ಂಡಿ.ಸನತ್ಕುಮಾರ್ ಶೆಟ್ಟಿ
ಮಂಗಳೂರು, ಉತ್ತಮ ಕೃಷಿಕ ಸಾಧನೆಗೆ
ಕೆ.ಎನ್. ಪ್ರಫುಲ್ಲ ಆರ್.
ರೈ ಬಂಟ್ವಾಳ, ನಡುಹಿತ್ಲು ಮಹಾಬಲ ಶೆಟ್ಟಿ ಗುಂಡಿಬೈಲು,
ಮೋನಪ್ಪ ಆಳ್ವ ವಿ. ಮುಳ್ಳೇರಿಯಾ,
ಮೊಗರುಗುತ್ತು ರಾಜೇಂದ್ರ ಮೇಂಡ, ಸಾಹಿತ್ಯ ಕ್ಷೇತ್ರದಲ್ಲಿ
ಡಾ. ನಾಗವೇಣಿ ಹೊಸಬೆಟ್ಟು, ಉತ್ತಮ
ಶಿಕ್ಷಕ ಪೆÇ್ರ.ಮೊಳಹಳ್ಳಿ
ಬಾಲಕೃಷ್ಣ ಶೆಟ್ಟಿ, ಉಷಾ ಎಚ್.
ಬಲ್ಲಾಳ್ ಮಂಗಳೂರು, ಕರುಣಾಕರ ಶೆಟ್ಟಿ ಕೊಲ್ಲೂರು,
ಉತ್ತಮ ಸಮಾಜ ಸೇವೆಗೆ ಸಿಎ.
ಹೆಚ್.ಆರ್.ಶೆಟ್ಟಿ, ಕಲಾಕ್ಷೇತ್ರದಲ್ಲಿ
ಶಶಿ ವಿ. ಶೆಟ್ಟಿ ಮಂಗಳೂರು,
2017ರ ಸಾಲಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ,
ಉತ್ತಮ ಕ್ರೀಡಾಪಟು ಅರ್ಜುನ ಪ್ರಶಸ್ತಿ ಪುರಸ್ಕೃತ
ಸತೀಶ್ ರೈ ಪುತ್ತೂರು, ರಾಷ್ಟ್ರಮಟ್ಟದ
ಕಬಡ್ಡಿ ಆಟಗಾರ ಪ್ರಶಾಂತ್ ರೈ
ಕೈಕಾರ ಪುತ್ತೂರು, ಶೈಕ್ಷಣಿಕ ಸಾಧನೆಗೆ ಸಿಎ. ನಿತೇಶ್
ಶೆಟ್ಟಿ ಕಾರ್ಕಳ ಮೊದಲಾದವರನ್ನು ಚಿನ್ನದ
ಪದಕ, ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಅದೇ ರೀತಿ ಕ್ರೀಡೆಯಲ್ಲಿ ಸಾಧನೆಗೈದ
ಅಭಿಷೇಕ್ ಶೆಟ್ಟಿ ನೆಲ್ಯಾಡಿ, ಪುತ್ತೂರು,
ಶಿಬಾನಿ ಜಿ. ಶೆಟ್ಟಿ ಮಂಗಳೂರು,
ಅದ್ವಿತ್ ಡಿ. ಶೆಟ್ಟಿ ಮಂಗಳೂರು,
ಸಾನ್ಯಾ ಡಿ. ಶೆಟ್ಟಿ ಮಂಗಳೂರು,
ಆಯುಷ್ ಆರ್. ಶೆಟ್ಟಿ ಕಾರ್ಕಳ
ಹಾಗೂ ಯುವ ವಿಜ್ಞಾನಿಗಳಾದ ಪ್ರಖ್ಯಾತ್
ಭಂಡಾರಿ ಮತ್ತು ಪ್ರಣವ್ ಭಂಡಾರಿ
ಬಲ್ನಾಡು ಪುತ್ತೂರು ಇವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
ದಿನಾಂಕ
28.04.2018 ರಂದು ಬೆಳಿಗ್ಗೆ 10.00 ಗಂಟೆಗೆ ವಿ.ಕೆ.ಶೆಟ್ಟಿ ಸಭಾಭವನ ಅಡ್ಯಾರ್
ಗಾರ್ಡನ್ಸ್, ಅಡ್ಯಾರ್ ಇಲ್ಲಿ ನಡೆಯುವ
ಸಮಾಜದ ಬಹಿರಂಗ ಅಧಿವೇಶನದಲ್ಲಿ ಸಮಾಜ
ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಬಹಿರಂಗ ಅಧಿವೇಶನವನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಮದ್ಯಾಹ್ನ ಗಂಟೆ
2.30ಕ್ಕೆ ನಡೆಯುವ ಸರ್ವ ಸದಸ್ಯರ
ಸಭೆಯಲ್ಲಿ ಬಂಟರ ಯಾನೆ ನಾಡವರ
ಮಾತೃಸಂಘದ ಹೆಚ್ಚಿನ ಸದಸ್ಯರು ಭಾಗವಹಿಸಿ
ಸರ್ವ ಸದಸ್ಯರ ಸಭೆಯನ್ನು ಯಶಸ್ವಿಗೊಳಿಸಬೇಕೆಂದು
ಬಂಟರ ಯಾನೆ ನಾಡವರ ಮಾತೃಸಂಘದ
ಅಧ್ಯಕ್ಷರಾದ
ಮಾಲಾಡಿ ಅಜಿತ್ ಕುಮಾರ್ ರೈ ಅವರು ವಿನಂತಿಸಿದ್ದಾರೆ.