BUNTS NEWS, ಮಂಗಳೂರು: ಆಳ್ವಾಸ್ ಕಾಲೇಜಿನ ಪ್ರಥಮ
ಪದವಿ ವಿದ್ಯಾರ್ಥಿನಿ ಅಭಿನಯ ಶೆಟ್ಟಿ ಕಾರ್ಕಳ ಅವರು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್
ಶಿಪ್ಗೆ ಆಯ್ಕೆಯಾಗಿದ್ದಾರೆ.
ಅಭಿನಯ ಶೆಟ್ಟಿ ಅವರು
ಇಪ್ಪತ್ತು ವರ್ಷದ ಕೆಳಗಿನ ರಾಷ್ಟ್ರೀಯ ಅಥ್ಲೆಟಿಕ್ಸ್
ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಹೈಜಂಪ್ನಲ್ಲಿ
ಪಡೆದು ಮೇ.5,6ರಂದು ಶ್ರೀಲಂಕಾದಲ್ಲಿ ನಡೆಯಲಿರುವ
ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್
ಶಿಪ್ಗೆ ಆಯ್ಕೆಯಾಗಿದ್ದಾರೆ.
ಅಭಿನಯ ಶೆಟ್ಟಿಯ ತರಬೇತುದಾರರು ವಸಂತ್
ಜೋಗಿಯವರು ಅದೇ ರೀತಿ ಆಳ್ವಾಸ್ನ
ಅಧ್ಯಕ್ಷರಾದ ಡಾಕ್ಟರ ಮೋಹನ್ ಆಳ್ವ
ಇವರು ಅವಳಿಗೆ ತುಂಬಾ ಪ್ರೋತ್ಸಾಹ
ಮಾಡುತ್ತಿದ್ದಾರೆ. ಅಭಿನಯ ಶೆಟ್ಟಿ ಕಳೆದ
ವರ್ಷ ನಡೆದ ಅಂತರ್ ವಿಶ್ವವಿದ್ಯಾಲಯ
ಅತ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಎತ್ತರ ಜಿಗಿತದಲ್ಲಿ ಚಿನ್ನದ
ಪದಕವನ್ನು ಈ ಚಾಂಪಿಯನ್ ಶಿಪ್
ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿತ್ತು. ವರದಿ: ಅಭಿಷೇಕ್ ಶೆಟ್ಟಿ – [ಕ್ರೀಡಾ ವರದಿಗಾರರು
www.BuntsNews.com ]