ಎ.24ರಂದು ಮಂಗಳೂರಿನಲ್ಲಿ ಶೂನ್ಯ ನೆರಳಿನ ದಿನದ (Zero Shadow Day) ಪ್ರಾತ್ಯಕ್ಷಿಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎ.24ರಂದು ಮಂಗಳೂರಿನಲ್ಲಿ ಶೂನ್ಯ ನೆರಳಿನ ದಿನದ (Zero Shadow Day) ಪ್ರಾತ್ಯಕ್ಷಿಕೆ

Share This
ಮಂಗಳೂರು: ಕರ್ಕಾಟಕ  ವೃತ್ತದೆಡೆಗೆ ಉತ್ತರಕ್ಕೆ ಚಲಿಸುತ್ತಿರುವ ಸೂರ್ಯ ಎ.24ರಂದು ಮಂಗಳೂರಿನಲ್ಲಿ ಮಧ್ಯಾಹ್ನ ನೆತ್ತಿಯ ಮೇಲೆ ಹಾದು ಹೋಗುವ ಸಮಯದಲ್ಲಿ ನೆರಳು ಶೂನ್ಯವಾಗುತ್ತದೆ.
ಎ.24ರಂದು ಮಂಗಳೂರಿನಲ್ಲಿ ಶೂನ್ಯ ನೆರಳಿನ ದಿನದ (Zero Shadow Day) ಪ್ರಾತ್ಯಕ್ಷಿಕೆ
ವಿದ್ಯಮಾನವು ವರ್ಷದಲ್ಲಿ ಎರಡು ಬಾರಿ ನಡೆಯುತ್ತದೆ. ಸೂರ್ಯನು ಉತ್ತರಕ್ಕೆ ಚಲಿಸಿದಾಗ ಮತ್ತು ನಂತರ ದಕ್ಷಿಣಕ್ಕೆ ಬರುವಾಗ ಮಧ್ಯಾಹ್ನದ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತದೆ. ಘಟನೆ  ಸಂಭವಿಸುವ ದಿನಾಂಕಗಳು ಆಯಾ ಸ್ಥಳಗಳ ಅಕ್ಷಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳನ್ನು ZSD App ಮೂಲಕ ತಿಳಿದುಕೊಳ್ಳಬಹುದು.

ಭೂಮಿಯ ಭ್ರಮಣೆ ಅಕ್ಷವು 23.5 ಡಿಗ್ರಿ ವಾಲಿರುವುದರಿಂದ ಕರ್ಕಾಟಕ ಮತ್ತು ಮಕರ ಸಂಕ್ರಾತಿ ವೃತ್ತಗಳ ಒಳಭಾಗದಲ್ಲಿ ವಿದ್ಯಮಾನವು ವಿವಿಧ ಸ್ಥಳಗಳಲ್ಲಿ ಬೇರ ಬೇರೆ ದಿನಗಳಲ್ಲಿ ಸಂಭವಿಸುತ್ತದೆ. ಇದರ ಪ್ರಾತ್ಯಕ್ಷಿಕೆ ಯಾರು ಬೇಕಾದರೂ ಮಾಡಿ ನೋಡಬಹುದು.

ಮಂಗಳೂರಿನಲ್ಲಿ ಎ.24ರಂದು ಮಧ್ಯಾಹ್ನ 12.29ಕ್ಕೆ ನಡೆಯುವ  ಇದನ್ನು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಿರೂಪಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Pages