ದೇಶದ ಭವಿಷ್ಯಕ್ಕಾಗಿ ಮತಚಲಾವಣೆ ಮಾಡಿ: ಡಾ ಎಂ. ಆರ್ ರವಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೇಶದ ಭವಿಷ್ಯಕ್ಕಾಗಿ ಮತಚಲಾವಣೆ ಮಾಡಿ: ಡಾ ಎಂ. ಆರ್ ರವಿ

Share This
ಮಂಗಳೂರು: ನಾವೆಲ್ಲರೂ ವಿದ್ಯಾವಂತರಾಗಿದ್ದು ಸಾಮಾಜಿಕ ಜವಾಬ್ದಾರಿ ಇದೆ ಹಾಗಾಗಿ ದೇಶದ ಭವಿಷ್ಯವು ನಮ್ಮ ಚುನಾವಣೆಯಲ್ಲಿ ಇರುವುದರಿಂದ ನಮ್ಮ ದೇಶ ವ್ಯವಸ್ಥೆಯನ್ನು ದೂಷಿಸದೇ ಮತವನ್ನು ನೀಡಬೇಕು ಬದಲಾಗಿ ಮತವನ್ನು ದಾನ ಮಾಡದೇ ಮತ ಚಲಾವಣೆಯನ್ನು ಮಾಡುವುದರ ಮೂಲಕ ಸದೃಢ ದೇಶದ ನಿರ್ಮಾಣಕ್ಕೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ದ.ಕ. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಎಂ. ಆರ್. ರವಿ ಹೇಳಿದರು.
ಅವರು ದ.ಕ  ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ  ಕ್ಯಾಂಪಸ್ ರಾಯಭಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದರು. ಕಳೆದ 10 ವರ್ಷದಿಂದ ಸ್ವೀಪ್ ಸಮಿತಿಯ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು ಕ್ರಮಬದ್ಧವಾದ ಚುನಾವಣೆಯನ್ನು ನಡೆಸುವುದೇ ಇದರ ಗುರಿಯಾಗಿದೆ . ಈ ವರ್ಷ ವಿಶೇಷವಾಗಿ ಬನ್ನಿ ಮತದಾನ ಕೇಂದ್ರಕ್ಕೆ ಎಂಬ ಘೋಷವಾಕ್ಯದೊಡನೆ ಚುನಾವಣಾ ದಿನಾಂಕ ಘೋಷಣೆಯ ಮುಂಚಿತವಾಗಿ ಚುನಾವಣೆಯನ್ನು ಎದುರಿಸಲು ತಯಾರಿಯನ್ನು  ನಡೆಸಲಾಗುತ್ತಿದೆ. ಅಲ್ಲದೇ ಜಿಲ್ಲೆಯ ವಿವಿದ ಕಾಲೇಜುಗಳಲ್ಲಿ 72 ಕ್ಯಾಂಪಸ್ ರಾಯಭಾರಿಗಳನ್ನು ನೇಮಿಸಲಾಗಿದ್ದು ಅವರ ಜವಾಬ್ದಾರಿಯ ಕುರಿತು ಮಾಹಿತಿ ನೀಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 77 ರಷ್ಟು ಮತದಾನ ನಡೆದಿದ್ದು ಇನ್ನುಳಿದ 23 ಶೇಕಡದಷ್ಟು ಮತದಾನವು ಸಾಕ್ಷರತೆ ಪ್ರಮಾಣ ಅಧಿಕವಾಗಿರುವ ನಗರ ಪ್ರದೇಶದಲ್ಲಿ ಹೆಚ್ಚಾಗಿ ನಡೆಯದೇ ಇದ್ದಿದುದರಿಂದ ಕಳವಳ ವ್ಯಕ್ತ ಪಡಿಸಿದರು. ಅಲ್ಲದೇ ಇದರಲ್ಲಿ ಅಂಗವಿಕಲ ಮತದಾರರು ಕೂಡ ಸೇರಿದ್ದು ಅವರನ್ನು ಮತದಾನ ಕೇಂದ್ರಕ್ಕೆ ಕರೆತರುವ ವಿಶೇಷ ಪ್ರಯತ್ನವನ್ನು ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಮಾಡಬೇಕು.ಜೊತೆಗೆ ನಾವು ಸದೃಢ ದೇಶವನ್ನು ಕಟ್ಟಲು ಮುಂದಾಗಬೇಕು ಬದಲಾಗಿ ನಮ್ಮಲ್ಲಿನ ದೇಶದ ವ್ಯವಸ್ಥೆಯನ್ನು ದೂಷಿಸದೇ, ಪ್ರಜಾಪ್ರಭುತ್ವ ತತ್ವವನ್ನು ಒಪ್ಪಿಕೊಂಡಿರುವವರು ಅದರ ಸಾಧಕ ಬಾಧಕಗಳನ್ನು ಕೂಡ ಒಪ್ಪಲು ತಯಾರಾಗಿರಬೇಕು . ನಮಲ್ಲಿರುವ ವ್ಯವಸ್ಥೆಗೆ ನಾವೇ ಕಾರಣರಾಗಿದ್ದೇವೆ. ನಮಗೆ ನಮ್ಮ ದೇಶವು ಬಾಳಲು ಅವಕಾಶ ಸಾಮಥ್ರ್ಯಹಾಗೂ ಸೌಲಭ್ಯಗಳನ್ನು ಕೊಟ್ಟಿದೆ ಅದರ ಪ್ರಾಮುಖ್ಯತೆಯನ್ನು ಅರಿತು ದೇಶದ ಭವಿಷ್ಯಕ್ಕಾಗಿ ಮತದಾನವನ್ನು ಮಾಡಿ ಎಂದು ವಿದ್ಯಾರ್ಥಿ ರಾಯಭಾರಿಗಳಿಗೆ ಜವಾಬ್ದಾರಿಯ ಮಾತುಗಳನ್ನು ಹೇಳಿದರು.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಯಾವುದೇ ಒತ್ತಡವನ್ನು ಹೇರದೇ ಕಡ್ಡಾಯ ಮತದಾನ ಮಾಡಲು ಕಾನೂನನ್ನು ರೂಪಿಸಲು ಸಾಧ್ಯವಿಲ್ಲ ಎಂದರು ಒಂದು ವೇಳೆ ಕಡ್ಡಾಯವಾಗಿ ಒತ್ತಡ ಹೇರಿದರೆ ಅದು ಪ್ರಜಾಪ್ರಭುತ್ವ ಆಗಲ್ಲ ಎಂದರು. ಇನ್ನೊಬ್ಬರಲ್ಲಿ ಒತ್ತಡವನ್ನು ಹೇರದೇ ಅವರಿಗೆ ಚುನಾವಣೆಯ ಮಹತ್ವವನ್ನು ತಿಳಿಸಿ ಸ್ವತಂತ್ರವಾಗಿ ಯೋಚಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡವುದು ವಿದ್ಯಾವಂತರ ಕರ್ತವ್ಯವಾಗಿದೆ ಎಂದು ಹೇಳಿದರು. ಅಲ್ಲದೇ ನಾನೇಕೆ ಮತ ಚಲಾಯಿಸಬೇಕು ಎನ್ನವುದನ್ನು ಬಿಟ್ಟು ನಾನೇಕೆ ಮತ ಚಲಾಯಿಸಬಾರದು ಎಂಬುದು ಅತ್ಯಂತ ಅರ್ಥಪೂರ್ಣವಾಗಿರುತ್ತದೆ ಎಂದರು.

ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ್ ಮಾತನಾಡಿ ವಿದ್ಯಾಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಸ್ವತಂತ್ರವಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಮನವಿ ಮಾಡಿಕೊಂಡರು.

ಎನ್‍ಎಸ್‍ಎಸ್ ಸಂಯೋಜಕಿ ವಿನುತಾ ರೈ ಕ್ಯಾಂಪಸ್ ರಾಯಭಾರಿಗಳಿಗೆ ಚುನಾವಣಾ ಸಂಬಂಧಿ ಚಟುವಟಿಕೆಗಳನ್ನು ನಡೆಸಿದರು. ಮುಂದಿನ ದಿನಗಳಲ್ಲಿ ತಮ್ಮ ತಮ್ಮ ವಿದ್ಯಾಸಂಸ್ಥೆಗಳಲ್ಲಿ ಕ್ರಿಯಾತ್ಮಕವಾದ ಯೋಚನೆಗಳನ್ನು ಬೆಳೆಸುವ ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸಿ ಮತದಾರ ಬಾಂಧವರಲ್ಲಿ ಜಾಗೃತಿಯನ್ನು ಮೂಡಿಸಿ ತಮ್ಮ ಕರ್ತವ್ಯವನ್ನು ನಿರ್ಮಿಸಲು ಪ್ರಯತ್ನಿಸುವಂತೆ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.ಹಾಗೂ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದ ಚುನಾವಣೆಯ 10 ಧ್ಯೇಯೋದ್ಧೇಶದ ಕುರಿತು ತಿಳಿಸಲಾಯಿತು. ಕ್ಯಾಂಪಸ್ ರಾಯಾಭಾರಿಗಳು ಹಾಗೂ  ಪ್ರಾಧ್ಯಾಪಕರನ್ನು ಒಳಗೊಂಡಂತೆ 72 ಶಿಕ್ಷಣ ಸಂಸ್ಥೆಯ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ, ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಶ್ರೀಧರ್ ಮನಿಯಾಣಿ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ರಾಧಕೃಷ್ಣನ್, ಕಾಲೇಜು ಶಿಕ್ಷಣ ಸಂಸ್ಥೆಯ ಶ್ರೀನಿವಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.

Pages