ಬಂಟ್ಸ್ ನ್ಯೂಸ್ ವಲ್ಡ್, ಉಡುಪಿ: ಬಂಟ ಚಾವಡಿ ಪರ್ಕಳ (ರಿ) ಆಯೋಜನೆಯಲ್ಲಿ ಬಂಟರ ಸಮ್ಮೀಲನ
ಕಾರ್ಯಕ್ರಮವು ಎ.14ರ ಶನಿವಾರ ಶ್ರೀ ವಿಘ್ನೇಶ್ವರ ಸಭಾಭವನ ಪರ್ಕಳದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಸಂಜೆ
4ರಿಂದ ಆರಂಭವಾಗಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಪರ್ಕಳ ಬಂಟರ ಚಾವಡಿ ಅಧ್ಯಕ್ಷ ಬಿ. ಜಯರಾಜ್ ಹೆಗ್ಡೆ
ವಹಿಸಲಿದ್ದಾರೆ. ಸಮಾರಂಭದಲ್ಲಿ ದಿ. ಕೆ. ಸತೀಶ್ವಂದ್ರ ಶೆಟ್ಟಿ ಅವರಿಗೆ ಮರಣೋತ್ತರ ಸೇವಾ ರತ್ನ ಪ್ರಶಸ್ತಿ,
ಅಬುಧಾಬಿಯ ಸರ್ವೋತ್ತಮ ಶೆಟ್ಟಿ ಅವರಿಗೆ ಸೇವಾ ವಿಭೂಷಣ ಪ್ರಶಸ್ತಿ, ಮಣಿಪಾಲ ಕೆಎಂಸಿಯ ಡಾ। ಪದ್ಮನಾಭ ಹೆಗ್ಡೆ ಅವರಿಗೆ ಸೇವಾ ಭೂಷಣ, ಉದ್ಯಮಿ
ದಿನೇಶ ಶೆಟ್ಟಿ ಹೆರ್ಗ ಹಾಗೂ ಸಮಾಜ ಸೇವಕಿ ನಿರೂಪಮ ಪ್ರಸಾದ ಶೆಟ್ಟಿ ಅವರಿಗೆ ಸೇವಾ ಶ್ರೀ ಪ್ರಶಸ್ತಿಗೆ
ಪಡೆಯಲಿದ್ದಾರೆ.
ಸಮಾರಂಭದಲ್ಲಿ ಸಾಂಸ್ಕೃತಿಕ
– ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ.