ಬಂಟ್ಸ್ ನ್ಯೂಸ್ ವಲ್ಸ್, ಮಂಗಳೂರು: ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮಾನಭ ದೇವಸ್ಥಾನದ
ಬ್ರಹ್ಮಕಲಶೋತ್ಸವವು ಫೆ.18ರಿಂದ ಫೆ.25ರ ವರೆಗೆ ಜರುಗಲಿದ್ದು ಆ ಪ್ರಯುಕ್ತ ಇಂದು ಮಾಧ್ಯಮ ಕೇಂದ್ರವನ್ನು
ಕ್ಷೇತ್ರದ ಅನುವಂಶಿಕ ಆಡಳಿತ ಮುಕ್ತೇಸರಾದ ಕೆ. ನರಸಿಂಹ ತಂತ್ರಿ ಅವರು ಉದ್ಘಾಟಿಸಿದರು.
ಈ ಸಂದರ್ಭ ಬ್ರಹ್ಮಕಲಶೋತ್ಸವ
ಸಮಿತಿಯ ಗೌರವಾಧ್ಯಕ್ಷ ಚಂದ್ರಹಾಸ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಸುದರ್ಶನ ಕುಡುಪು,
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಕೆ. ಸುತಗುಂಡಿ, ಶೆಡ್ಡೆ ಮಂಜುನಾಥ ಭಂಡಾರಿ, ಮನೋಹರ ಭಟ್
ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.