ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಮಹಿಳಾ ಘಟಕದ ಅಧ್ಯಕ್ಷರಾಗಿ ಪೂರ್ಣಿಮಾ ರೈ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಮಹಿಳಾ ಘಟಕದ ಅಧ್ಯಕ್ಷರಾಗಿ ಪೂರ್ಣಿಮಾ ರೈ

Share This
ಬಂಟ್ಸ್ ನ್ಯೂಸ್ ವಲ್ಡ್,ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಮಹಿಳಾ ಘಟಕದ   ಪದಾಧಿಕಾರಿಗಳ ಸಭೆ ಸುರತ್ಕಲ್ ಭವನದಲ್ಲಿ ನಡೆದಿದ್ದು, ಮಹಿಳಾ ಘಟಕದ ಅಧ್ಯಕ್ಷರಾಗಿಪೂರ್ಣಿಮಾ ಯತೀಶ್ ರೈ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ  ಆರತಿ ಆಳ್ವ ಕಂಕನಾಡಿ ,ಪ್ರಧಾನ ಸಂಚಾಲಕರಾಗಿ ನಿವೇದಿತ ಎನ್. ಶೆಟ್ಟಿ, ಕಾರ್ಯದರ್ಶಿಯಾಗಿ ಸುಮಂಗಲಾ ರತ್ನಾಕರ್ ರಾವ್ ಆಯ್ಕೆಯಾಗಿದ್ದಾರೆ.
ಕೇಂದ್ರ ಮಹಿಳಾ ಘಟಕದ ಸಭೆಯು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ  ಪಟ್ಲ ಸತೀಶ್ ಶೆಟ್ಟಿಯವರ  ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಮಹಿಳಾ ಘಟಕದ  ನೂತನ ಸಾಲಿನ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಡಾ.ನಾಗವೇಣಿ ಮಂಚಿ,ಡಾ.ಶೈಲಜ ಭಟ್ ಶೆಣೈ, ಕೆ. . ರೋಹಿಣಿ,ರೇಷ್ಮಾ ಪ್ರದೀಪ್ ಶೆಟ್ಟಿ, ಸಹನಾ ಆರ್ ರೈಸಂಘಟನಾ ಕಾರ್ಯದರ್ಶಿಯಾಗಿ ಪಾರ್ವತಿ ಎಸ್. ಅಮೀನ್ , ಚಿತ್ರಾ ಜೆ ಶೆಟ್ಟಿ, ವಿದ್ಯಾ ಸಿ ಶೆಟ್ಟಿರೇಖಾ ಎಂ ರೈ ಜೊತೆ ಕಾರ್ಯದರ್ಶಿಯಾಗಿ ಚಂದ್ರಕಲಾ ಶೆಟ್ಟಿ ಚೇಳ್ಯಾರ್ಶ್ವೇತಾ ಮಾಡ, ರೇವತಿ ನವೀನ್, ಮಾಲತಿ ವೆಂಕಟೇಶ್,ಸುಲತ ಜೆ ಶೆಟ್ಟಿ, ಕೋಶಾಧಿಕಾರಿಯಾಗಿ ವಸುಂಧರಾ ಹರೀಶ್  ಶೆಟ್ಟಿ,ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪೂರ್ಣಿಮಾ ಪಿ ಪೇಜಾವರ್,ಪೂರ್ಣಿಮಾ ಶಾಸ್ತ್ರಿ ಪಾವನಾ ಆರ್ ಹೊಳ್ಳ , ಜ್ಯೋತಿ ಕಲಶ,ಸಂಧ್ಯಾ ಐತಾಳ್, ಮಲ್ಲಿಕಾ  ಭಂಡಾರಿ ವನಿತಾ ರಾಮಚಂದ್ರ ರಾವ್ಸುಜಾತ ಎಲ್ ಶೆಟ್ಟಿಸಾಯಿಸುಮ ನಾವಡ ,ಸುಖಲತ ಶೆಟ್ಟಿ, ಸುಜ್ಯೋತಿ ರಾವ್, ಛಾಯಾಲಕ್ಷ್ಮಿ ಆರ್ ಕೆ, ಅಶ್ವಿನಿ ಆಚಾರ್, ಚೈತ್ರ ಎಚ್ಗೌರವ ಸಲಹೆಗಾರರಾಗಿ ಶಕುಂತಳಾ ಆರ್  ಭಟ್ಕೇಸರೀ ಪೂಂಜಹೀರಾ ಶ್ರೀರಾಮ್ ರಾವ್ಚಂದ್ರಕಲಾ ಬಿ ಶೆಟ್ಟಿ, ಸಾವಿತ್ರಿ ಎಸ್ ರಾವ್, ಜಯಲಕ್ಷ್ಮೀ ಕಾರಂತ್ , ಕಲಾವತಿ ಕೆ, ಜಯಂತಿ ಹೊಳ್ಳಗುಣವತಿ ರಮೇಶ್ ಆಯ್ಕೆಯಾದರು.

ಹೊಸ ಹುಮ್ಮಸ್ಸಿನೊಂದಿಗೆ  ಯಕ್ಷಧ್ರುವ ಪಟ್ಲ ಫೌಂಡೇಶನ್ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ  ಕೈಜೋಡಿಸುವ ಸಂಕಲ್ಪದೊಂದಿಗೆ ಸಕ್ರಿಯವಾಗಿ ಭಾಗವಹಿಸುವ ನಿರ್ಧಾರ ಮಾಡಲಾಯಿತುಸುಮಂಗಲಾ ರತ್ನಾಕರ್ ಸ್ವಾಗತಿಸಿದರುವಸುಂಧರಾ ವಂದಿಸಿದರು . ಛಾಯಾಲಕ್ಷ್ಮೀ ಹಾಗೂ ಅಶ್ವಿನಿ ಆಚಾರ್ಯ ಪ್ರಾರ್ಥಿಸಿದರು. ಪೂರ್ಣಿಮಾ ರೈ ಹಾಗೂ ನಿವೇದಿತ ಶೆಟ್ಟಿಯವರು ಸೂಕ್ತ ಸಲಹೆ ನೀಡಿದರು. ಪಟ್ಲ ಸತೀಶ್ ಶೆಟ್ಟಿಯವರು ಮಹಿಳಾ ಘಟಕದ ಔಚಿತ್ಯ ಕುರಿತು ತಿಳಿಸಿದರು

ಸುರತ್ಕಲ್ ಘಟಕದ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಸಂಚಾಲಕ ರವಿ ಶೆಟ್ಟಿ ಅಗರಮೇಲು ಮತ್ತು ಅಶ್ವಿತ್ ಶೆಟ್ಟಿ  ಉಪಸ್ಥಿತರಿದ್ದರು.

Pages